ಗುಲ್ಬರ್ಗಾ

ಲೋಹಸಂಗ್ರಹ ಕಾರ್ಯಕ್ಕೆ ಚಾಲನೆ

Published On :

ಆಳಂದ: ತಾಲೂಕಿನ ಭೂಸನೂರ ಗ್ರಾಮದಲ್ಲಿ ಶುಕ್ರವಾರ ತಾಲೂಕು ಲೋಹಸಂಗ್ರಹ ಸಮಿತಿ ಆಶ್ರಯದಲ್ಲಿ ಲೋಹ ಸಂಗ್ರಹ ಸಮಾರಂಭವನ್ನು ಮಾಜಿ ಶಾಸಕ, ಜಿಲ್ಲಾ ಲೋಹಸಂಗ್ರಹ ಸಮಿತಿ ಸಂಚಾಲಕ ದೊಡ್ಡಪ್ಪಗೌಡ ಪಾಟೀಲ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪ್ರತಿಯೊಬ್ಬರ ಮನೆಗಳಲ್ಲಿನ ತಮಗಿಷ್ಟವಾದ ಲೋಹವನ್ನು ನೀಡಬೇಕು. ನರ್ಮದಾ ನದಿದಡದಲ್ಲಿ ಸರ್ದಾರ ವಲ್ಲಾಭಾಯಿ ಪಟೇಲ್‌ರ ಮೂರ್ತಿ ನಿರ್ಮಾಣಕ್ಕೆ ಲೋಹ ನೀಡಿ ಎಲ್ಲರೂ ಕೈಜೋಡಿಸಬೇಕೆಂದು ದೊಡ್ಡಪ್ಪಗೌಡ ಪಾಟೀಲ ಹೇಳಿದರು.
ಜಿಪಂ ಮಾಜಿ ಉಪಾಧ್ಯಕ್ಷ ಸುಭಾಷ ರಾಠೋಡ, ಬಸವರಾಜ ಪವಾಡಶೆಟ್ಟಿ, ವಿದ್ಯಾಸಾಗರ ಕುಲಕರ್ಣಿ, ರೇವಣಸಿದ್ಧ ಪಟ್ನೆ, ಸಂಜಯ ಮಿಸ್ಕಿನ್ ಮೊದಲಾದವರು ಮಾತನಾಡಿ ಲೋಹಸಂಗ್ರಹ ಇದೊಂದು ಐತಿಹಾಸಿಕ ಕಾರ್ಯ ಎಂದರು.
ಗ್ರಾಪಂ ಅಧ್ಯಕ್ಷೆ ಕಲಾವತಿ ಜಗತೆ ಅಧ್ಯಕ್ಷತೆ ವಹಿಸಿದ್ದರು. ಬಸವಂತರಾವ್ ಮಾಲಿಪಾಟೀಲ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಮಹಾಂತಪ್ಪಾ ಯಲಶೆಟ್ಟಿ, ಸ್ವಾತಂತ್ರ್ಯ ಸೇನಾನಿ ಈರಣ್ಣಾ ಚೌಲ್, ಶಿವಣ್ಣಾ ಗವಿ, ಭೀಮಾಬಾಯಿ, ಬಸಮ್ಮಾ ಪಾಟೀಲ ಆಗಮಿಸಿದ್ದರು. ಎಪಿಎಂಸಿ ಮಾಜಿ ಉಪಾಧ್ಯಕ್ಷ ತುಕಾರಾಮ ವಗ್ಗೆ, ಪ್ರಕಾಶ ಮಾನೆ, ಸಿದ್ರಾಮಪ್ಪಾ ಪಾಟೀಲ, ಮಲ್ಲಿನಾಥ ಒಡೆಯರ್, ಶಿವಾನಂದ ಉಪ್ಪಿನ್, ಮಲ್ಲಿಕಾರ್ಜುನ ವಣದೆ, ಮೋತಿರಾಮ ಪವಾರ, ಮಹೇಶ ಸೂರೆ ಮತ್ತು ಚಂದ್ರಕಾಂತ ಕುಲಕರ್ಣಿ ಭಾಗವಹಿಸಿದ್ದರು. ಸಿದ್ದು ಮಾಲಿಪಾಟೀಲ ನಿರೂಪಿಸಿದರು. ಶರಣು ಬೆಳಮಗಿ ವಂದಿಸಿದರು.
ಅಫಜಲ್ಪುರ: ದೇಶದ ಅಭಿವೃದ್ಧಿಗಾಗಿ ಈ ಬಾರಿ ಜನ ನರೇಂದ್ರ ಮೋದಿಯನ್ನು ಪ್ರಧಾನಿಯನ್ನಾಗಿಸಬೇಕು. ಅವರ ಕನಸಿನ ಯೋಜನೆಯಾದ ಸ್ಟ್ಯಾಚು ಆಫ್ ಯುನಿಟಿ ಉಕ್ಕಿನ ಮನುಷ್ಯ ಸರ್ದಾರ ವಲ್ಲಭಭಾಯಿ ಪಟೇಲ್ ಪ್ರತಿಮೆಗೆ ದೇಶಾದ್ಯಂತ ಉಕ್ಕು ಸಂಗ್ರಹ ಮಾಡಲಾಗುತ್ತಿದೆ ಎಂದು ಮಾಜಿ ಶಾಸಕ ಎಂ.ವೈ. ಪಾಟೀಲ್ ಹೇಳಿದರು.
ತಾಲೂಕಿನ ದೇವಲ ಗಾಣಗಾಪೂರದ ದತ್ತ ದೇವಸ್ಥಾನದ ಎದುರುಗಡೆ ಲೋಹ ಸಂಗ್ರಹಕ್ಕೆ ಚಾಲನೆ ನೀಡಿ ಮಾತನಾಡಿದರು.
ಜಿಲ್ಲಾ ಲೋಹ ಸಂಗ್ರಹ ಸಮಿತಿ ಸಂಚಾಲಕ ದೊಡ್ಡಪ್ಪ ಗೌಡ ಪಾಟೀಲ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಪಂ ಸದಸ್ಯರಾದ ಪ್ರಕಾಶ ಜಮಾದಾರ, ಸಿದ್ದಾರ್ಥ ಬಸರಿಗಿಡ, ರಾಜು ಗೌಡ ಅವರಳ್ಳಿ,  ಬಸವರಾಜ ಸಜ್ಜನ್, ಸಿದ್ರಾಮ ಕಲಶೆಟ್ಟಿ, ಗೋವಿಂದ ಭಟ್ ಇದ್ದರು. ಮಲ್ಲಿಕಾರ್ಜುನ ನಿಂಗದಳ್ಳಿ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಶರಣು ಕುಂಬಾರ ನಿರೂಪಿಸಿದರು. ಶೈಲೇಶ ಗುಣಾರಿ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.