10 ಕೃತಿಗಳ ಲೋಕಾರ್ಪಣೆ 22ಕ್ಕೆ
ಗುಲ್ಬರ್ಗ: ಕನ್ನಡ ನಾಡು ಲೇಖಕರ ಮತ್ತು ಓದುಗರ ಸಹಕಾರ ಸಂಘದ ಅಡಿಯಲ್ಲಿರುವ ಕನ್ನಡ ನಾಡು ಪ್ರಕಾಶನ ಹೊರತಂದಿರುವ ಹತ್ತು ಕೃತಿಗಳ ಲೋಕಾರ್ಪಣೆ ಮತ್ತು 2012ರ ಪ್ರಶಸ್ತಿ ಪ್ರದಾನ ಸಮಾರಂಭ ಫೆ. 22ರಂದು ಸಂಜೆ 5.30ಕ್ಕೆ ರೇಣುಕಾಚಾರ್ಯ ಕಲ್ಯಾಣಮಂಟಪದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷ ಅಪ್ಪರಾವ್ ಅಕ್ಕೋಣಿ ತಿಳಿಸಿದ್ದಾರೆ.
ನಾಡೋಜ, ಚೆಂಬೆಳಕಿನ ಕವಿ ಚೆನ್ನವೀರ ಕಣವಿ ಅವರು ಪುಸ್ತಕಗಳನ್ನು ಲೋಕಾರ್ಪಣೆ ಮಾಡುವರು. ಪ್ರೊ.ಜಿ.ಎಂ. ಹೆಗಡೆ ಮುಖ್ಯ ಅತಿಥಿಗಳಾಗಿ ಆಗಮಿಸುವರು. ಸಹಕಾರ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸಿ. ಸೋಮಶೇಖರ ಅಧ್ಯಕ್ಷತೆ ವಹಿಸಿಕೊಳ್ಳುವರು.
ಪ್ರಶಸ್ತಿಗಳು: ರಾಯಚೂರಿನ ಸಾಹಿತಿ ಡಾ. ಜಂಬಣ್ಣ ಅಮರಚಿಂತ (ಕನ್ನಡ ನಾಡು ಸಾಹಿತ್ಯ ಶ್ರೀ ಪ್ರಶಸ್ತಿ), ನೃಪತುಂಗ ಪದವಿ ಮಹಾವಿದ್ಯಾಲಯ ಉಪನ್ಯಾಸಕಿ ಡಾ. ಶೋಭ ಚಕ್ಕಿ (ಪ್ರೊ.ಎಸ್.ಜಿ. ಮೇಳಕುಂದಿ ಸ್ಮಾರಕ ಸಾಹಿತ್ಯ ಕೃತಿ ಪ್ರಶಸ್ತಿ), ನಿವೃತ್ತ ಖಜಾನೆ ಅಧಿಕಾರಿ ಹಾಗೂ ಸಾಹಿತಿ ಎ.ಎಂ. ಮದರಿ (ಬಸಮ್ಮ ತುಳಜಪ್ಪಾ ಉಪಳಾಂವಕರ ಸ್ಮಾರಕ ಸಾಹಿತ್ಯ ಕೃತಿ ಪ್ರಶಸ್ತಿ), ಸಾಹಿತಿ ಶರಣಪ್ಪ ವಡಗೇರಿ (ಶರಣಮ್ಮ ವೀರಭದ್ರಪ್ಪ ಅಕ್ಕೋಣಿ ಸ್ಮಾರಕ ಸಾಹಿತ್ಯ ಕೃತಿ ಪ್ರಶಸ್ತಿ) ಗುಲ್ಬರ್ಗ ಬೀದರ್, ಯಾದಗಿರಿ, ರಾಯಚೂರು, ಕೊಪ್ಪಳ ಜಿಲ್ಲೆಗಳ ಲೇಖಕರಿಗೆ ಪ್ರೋತ್ಸಾಹ ನೀಡುವ ನಿಟ್ಟಿಯಲ್ಲಿ ಈ ಪ್ರಶಸ್ತಿ ನೀಡಲಾಗುತ್ತಿದೆ ಎಂದು ಅಕ್ಕೋಣೆ ಹೇಳಿದ್ದಾರೆ.
ಬರುವ ವರ್ಷದಿಂದ ಓದುಗರಿಗೆ ಕಾರ್ಯಕ್ರಮ ಮತ್ತು ಬಹುಮಾನ, ಕನ್ನಡನಾಡು ಪುಸ್ತಕಮನೆ ಈ ಭಾಗದ ಎಲ್ಲ ಲೇಖಕರ ಪುಸ್ತಕಗಳಿಗೆ ಮಾರಾಟ ವ್ಯವಸ್ಥೆ ಕಲ್ಪಿಸುವುದಕ್ಕೋಸ್ಕರ ಪುಸ್ತಕ ಮಳಿಗೆ ಪ್ರಾರಂಭಿಸುವ ಯೋಜನೆ ಇದೆ.
ಬಿಡುಗಡೆಯಾಗಲಿರುವ ಪುಸ್ತಕಗಳು: ಶಂಕರಯ್ಯ ಆರ್. ಘಂಟಿ (ಹಿಂಗ್ ಒಂದು ರಾಗ), ಡಾ. ಶಿವರಾಮ ಅಸುಂಡಿ (ಮಾದ್ಯಮ ಮೌಢ್ಯ), ಡಾ. ಬಸವರಾಜ ಸಬರದ (ಹೇಳೆ ಸಖಿ), ಬಾಲಕೃಷ್ಣ ಉದ್ದಾರ ಸುರಪುರ(ಮರಿದ ಮುಳ್ಳು), ಬಿ.ಆರ್. ಪೊಲೀಸ ಪಾಟೀಲ (ಬಹುರೂಪಿ ಎಚ್ಚಮ್ಮ ನಾಯಕ), ಪ್ರೊ. ಎಚ್.ಟಿ. ಪೋತೆ (ಬೆತ್ತಲಾದ ಚಂದ್ರ), ಡಾ. ಮಹಾದೇವ ಬಡಿಗೇರ್ (ಬದುಕಿನ ವಚನಗಳು).
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

