ವಿದ್ಯಾರ್ಥಿ ಅಡ್ಡಗಟ್ಟಿ ಸುಲಿಗೆ
ಗುಲ್ಬರ್ಗ: ವಾರದ ಹಿಂದಷ್ಟೇ ಜೇವರ್ಗಿ ರಸ್ತೆಯ ಸಮಾಧಾನ ಆಶ್ರಮದ ಬಳಿ ಗುಂಡು ಹಾರಿಸಿ ಇಬ್ಬರನ್ನು ಹಾಡುಹಗಲೇ ಸುಲಿಗೆ ಮಾಡಿದ್ದ ಘಟನೆ ಗುಲ್ಬರ್ಗ ಜನ ಇನ್ನೂ ಮರೆತಿಲ್ಲ. ಹೀಗಿರುವಾಗಲೇ ಫೆ. 20ರ ಗುರುವಾರ ಜನನಿಬಿಡ ಸೂಪರ್ ಮಾರ್ಕೆಟ್ ರಸ್ತೆಯ ಪಕ್ಕದಲ್ಲೇ ಇರುವ ಟೇಕ್ ಬುರಾನ್ ದರ್ಗಾದ ಕ್ರಾಸ್ ಬಳಿ ಖದೀಮರು ವಿದ್ಯಾರ್ಥಿಯೊಬ್ಬನನ್ನು ಅಡ್ಡಗಟ್ಟಿ ಚಾಕುವಿನಿಂದ ಹೆದರಿಸಿ ಹಣ ಕಸಿದುಕೊಂಡು ಪರಾರಿಯಾಗಿದ್ದಾರೆ. ಶರಣ ನಗರದ ಮಹಾಂತೇಶ ಶಿವಪುತ್ರಪ್ಪ ಮಹಾಂತಪುರ ಎಂಬುವವರನ್ನೇ ಖದೀಮರು ಅಡ್ಡಗಟ್ಟಿ ಹೆದರಿಸಿದ್ದಾರೆ. ಓದಲು ಹೋಗುತ್ತಿದ್ದೇನೆ, ಹಣವಿಲ್ಲ, ಬಿಟ್ಟುಬಿಡಿ ಎಂದರೂ ಖದೀಮರು ಕೇಳಿಲ್ಲ. ಕಿಸೆ ತಪಾಸಣೆ ಮಾಡಿದ್ದಾರೆ. 2000 ರುಪಾಯಿ ಮೌಲ್ಯದ ಮೊಬೈಲ್, 50 ರುಪಾಯಿ ಹರ್ಣ ಸಿಕ್ಕಿದ್ದು ಅದನ್ನೇ ತೆಗೆದುಕೊಂಡು ಪರಾರಿಯಾಗಿದ್ದಾರೆ ಎಂದು ಸುಲಿಗೆಗೆ ಒಳಗಾಗಿರುವ ವಿದ್ಯಾರ್ಥಿ ಮಹಾಂತೇಶ ಬ್ರಹ್ಮಪುರ ಠಾಣೆಗೆ ಬಂದು ದೂರು ಸಲ್ಲಿಸಿದ್ದಾರೆ. ಖದೀಮರ ಬಳಿ ತಲವಾರ, ಚಾಕು ಸೇರಿದಂತೆ ಮಾರಕಾಸ್ತ್ರಗಳಿದ್ದವು. ಅವರು ನೇರವಾಗಿ ತಲವಾರನ್ನು ಎದೆಗೆ ಹಚ್ಚಿ ಹೆದರಿಸಿದ್ದಾರೆ. ಇದರಿಂದ ಜೀವ ಭಯವಾಯ್ತು ಎಂದು ವಿದ್ಯಾರ್ಥಿ ದೂರಿನಲ್ಲಿ ಹೇಳಿದ್ದಾನೆ. ಹಾಡುಹಗಲೇ ನಡೆದಿರುವ ಈ ಘಟನೆ ನಗರದಲ್ಲಿ ಭಯ ಹುಟ್ಟುಹಾಕಿದೆ.
ಮಹಿಳೆ ಕಾಣೆ
ನಗರದಲ್ಲಿರುವ ಆಶ್ರಯ ಕಾಲೋನಿಯ ನಿವಾಸಿ ಇಂದೂಬಾಯಿ ಫೆ.7ರಂದು ಕಾಣೆಯಾಗಿರುವ ಪ್ರಕರಣ ವರದಿಯಾಗಿದೆ. ಇಂದೂಬಾಯಿಯವರ ತಾಯಿ ಶ್ರೀದೇವಿ ಎಂಬುವವರು ಮಹಿಳಾ ಠಾಣೆಗೆ ಬಂದು ದೂರು ಸಲ್ಲಿಸಿದ್ದಾರೆ. ಪ್ರಕರಣ ದಾಖಲಾಗಿದೆ.
ಡಿಕ್ಕಿ; ಪಾದಚಾರಿ ಸಾವು
ಹೊಲದಿಂದ ವಾಪಸ್ ಬರುವಾಗ ಬೈಕ್ ಡಿಕ್ಕಿ ಹೊಡೆದು ಸಂಭವಿಸಿರುವ ರಸ್ತೆ ದುರಂತದಲ್ಲಿ ಪಾದಚಾರಿಯಾಗಿದ್ದ ಶಿವಶರಣಪ್ಪ ಉಪಳಾಂವಕರ್ ಗಾಯಗೊಂಡು ಸ್ಥಳದಲ್ಲೇ ಸಾವನ್ನಪ್ಪಿರುವ ದುರಂತ ಘಟನೆ ಶರಣ ಶಿರಸಗಿ ಹತ್ತಿರ ಸಂಭವಿಸಿದೆ. ಬೈಕ್ ಸವಾರ ಅಲಕ್ಷತನದಿಂದ ವಾಹನ ಚಲಾಯಿಸಿಕೊಂಡು ಹೊರಟಿದ್ದ. ರಸ್ತೆ ಬದಿಯಲ್ಲಿ ಹೊರಟಿದ್ದ ಶಿವಶರಣಪ್ಪಗೆ ಢಿಕ್ಕಿ ಹಡೆದು ದುರಂತ ಸಂಭವಿಸಿದೆ ಎಂದು ಹೇಳಲಾಗಿದೆ. ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಪ್ರಕರಣದ ಕುರಿತಂತೆ ಶ್ರೀಮಂತ ಇವರು ದೂರು ದಾಖಲಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

