ಗ್ರಾಮ ನೈರ್ಮಲ್ಯಕ್ಕೆ ಸೂಚನೆ
ಕೆಂಭಾವಿ: ಅನೇಕ ಜನತೆ ಅಂಗವಿಕಲತೆಯಿಂದ ಬಳಲುತ್ತಿರುವ ಸಮೀಪದ ಏವೂರ ತಾಂಡಾಕ್ಕೆ ರಾಜ್ಯ ಅಂಗವಿಕಲ ಹಾಗೂ ಹಿರಿಯ ನಾಗರಿಕ ಕಲ್ಯಾಣ ಇಲಾಖೆಯ ನಿರ್ದೇಶಕ ಜಯವಿಧನ ಸ್ವಾಮಿ ಶುಕ್ರವಾರ ತಾಂಡಾದಲ್ಲಿ ಪರಿಶೀಲಿಸಿದರು.
ಬೆಳಿಗ್ಗೆ ಹನ್ನೊಂದು ಘಂಟೆಗೆ ಆಗಮಿಸಿದ ಅಧಿಕಾರಿಗಳ ದಂಡು ತಾಂಡಾದ ಪ್ರತಿಯೊಂದು ಬೀದಿಯಲ್ಲಿ ಸಂಚರಿಸಿ ನೈರ್ಮಲ್ಯದ ಬಗ್ಗೆ ತಾಂಡಾದ ಜನತೆಗೆ ತಿಳಿ ಹೇಳಿದರು. ಮತ್ತು ಇದೇ ಸಂದರ್ಭದಲ್ಲಿ ಅನೇಕ ದಿನಗಳಿಂದ ಸ್ವಚ್ಛಗೊಳಿಸದೆ ಇದ್ದ ಒಳಚರಂಡಿಯನ್ನು ನೋಡಿ ದಂಗಾದ ಅಧಿಕಾರಿಗಳು ಕೂಡಲೇ ಅದನ್ನು ಸ್ವಚ್ಛಗೊಳಿಸಿ ಗ್ರಾಮದ ನೈರ್ಮಲ್ಯವನ್ನು ಕಾಪಾಡುವಂತೆ ಸ್ಥಳದಲ್ಲಿದ್ದ ತಾಪಂ ಇಓ ಪ್ರಭಯ್ಯಸ್ವಾಮಿ ಹಿರೇಮಠ ಅವರಿಗೆ ಸೂಚಿಸಿದರು.
ಸೂಚನೆ: ತಾಂಡಾದ ಮೂಲಭೂತ ಸೌಲಭ್ಯಗಳ ಕುರಿತು ಗ್ರಾಪಂ ಸದಸ್ಯ ಶಿವರಾಮ ಅವರು ಅಧಿಕಾರಿಗಳ ಗಮನಕ್ಕೆ ತಂದರು. ಮೂಲ ಸೌಕರ್ಯಗಳಾದ ಒಳಚರಂಡಿ, ಕುಡಿಯುವ ನೀರು, ಸಿಸಿ ರಸ್ತೆ ಮುಂತಾದವುಗಳ ಬಗ್ಗೆ ಸರ್ಕಾರದ ಹಲವು ಯೋಜನೆಗಳಿಂದ ಬಂಡವಾಳ ಪಡೆಯಲು ಕ್ರಿಯಾ ಯೋಜನೆ ರೂಪಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ತಾಂಡಾದಲ್ಲಿ ಅಂಗವಿಕಲತೆಯಿಂದ ಬಳಲುತ್ತಿರುವ ಅನೇಕ ಮನೆಗಳಿಗೆ ತೆರಳಿ ಅವರಿಗೆ ಸೂಕ್ತ ಸಲಹೆ-ಚಿಕಿತ್ಸೆ ನೀಡಲು ಸಮಾಜ ಕಲ್ಯಾಣ ಅಧಿಕಾರಿ ಹಾಗೂ ಆರೋಗ್ಯ ಅಧಿಕಾರಿಗಳಿಗೆ ಸೂಚನೆ ಕೊಟ್ಟರು.
ನಂತರ ಸರ್ಕಾರಿ ಶಾಲೆಯಲ್ಲಿ ತಾಂಡಾದ ಜನತೆಯ ಜತೆ ನಡೆದ ಸಂವಾದ ನಡೆಸಿ ನಿಮ್ಮ ಎಲ್ಲ ಸಮಸ್ಯೆಗಳಿಗೆ ಸರ್ಕಾರ ಸ್ಪಂದಿಸುತ್ತಿದ್ದು ಗ್ರಾಮಕ್ಕೆ ಬೇಕಾಗುವ ಎಲ್ಲ ಮೂಲಭೂತ ಸೌಲಭ್ಯಗಳನ್ನು ಶೀಘ್ರದಲ್ಲೆ ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು. ಕುಡಿಯುವ ನೀರು ಒದಗಿಸಲು ನೀರು ಶುದ್ಧಿಕರಣ ಘಟಕ ಸ್ಥಾಪಿಸಲು ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಮತ್ತು ಅಂಗವಿಕಲತೆಯಿಂದ ಬಳಲುತ್ತಿರುವ ಅನೇಕರಿಗೆ ಹಾಗೂ ವಿಧವೆಯರಿಗೆ, ವೃದ್ಧರಿಗೆ ಸರ್ಕಾರ ಕೊಡುವ ಪಿಂಚಣಿಯನ್ನು ಶೀಘ್ರದಲ್ಲೆ ವಿತರಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಅದಾಲತ್: ಮಾ. 3ರಂದು ಇಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳ ಸಮ್ಮುಖದಲ್ಲಿ ಬೃಹತ್ ಅದಾಲತ್ ಒಂದನ್ನು ಏರ್ಪಡಿಸಲಾಗುವುದು. ಇದರಲ್ಲಿ ನಿಮ್ಮ ಎಲ್ಲ ಸಮಸ್ಯೆಗಳನ್ನು ಸ್ಥಳದಲ್ಲಿಯೇ ಬಗೆಹರಿಸಿಕೊಳ್ಳಬಹುದು ಎಂದರು. ತಾಂಡಾದಲ್ಲಿ ಸನ್ಮಾನಿಸಲಾಯಿತು.
ತಹಸೀಲ್ದಾರ ಅರುಣಕುಮಾರ ಕುಲಕಣರ್, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ರಾಮನಗೌಡ, ಡಿಎಚ್ಓ ಮಲ್ಲಿಕಾರ್ಜುನ ಮುಕ್ಕಾ, ಎಸ್.ಟಿ ತಳವಾರ, ಸಿಡಿಪಿಓ ಡಿ. ಚೌಹಾಣ, ಬಿಇಓ ಎ. ವಿ ಕೆಂಪರಂಗಯ್ಯ, ಕೆಂಭಾವಿ ಉಪ ತಹಸೀಲ್ದಾರ ರವೀಂದ್ರ ದೇಗಲಮಡು ಸೇರಿದಂತೆ ಜಿಲ್ಲಾ ಹಾಗೂ ತಾಲೂಕಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

