ಗುಲ್ಬರ್ಗಾ

ಲಿಂ. ಮುದ್ನಾಳರ ಹುಟ್ಟುಹಬ್ಬ

Published On :

ಯಾದಗಿರಿ: ನಗರದ ಎಂಆರ್ಎಂ ಶಿಕ್ಷಣ ಸಂಸ್ಥೆ ಮತ್ತು ಅಸ್ಪೃಷತಾ ನಿವಾರಣಾ ಸಮಿತಿ ವತಿಯಿಂದ ಹಿರಿಯ ಸ್ವಾತಂತ್ರ ಹೋರಾಟಗಾರ ಹಾಗೂ ಮಾಜಿ ಸಚಿವರಾದ ಲಿಂ. ವಿಶ್ವನಾಥರಡ್ಡಿ ಮುದ್ನಾಳರ 89ನೇ ಹುಟ್ಟುಹಬ್ಬವನ್ನು ವೀರನಿಕೇತನದಲ್ಲಿ ಆಚರಿಸಲಾಯಿತು.
  ಲಿಂ. ಮುದ್ನಾಳರ ಭಾವಚಿತ್ರಕ್ಕೆ ವಿದ್ಯಾರ್ಥಿಗಳು ಹಾಗೂ ಅಭಿಮಾನಿಗಳು ಭಕ್ತಿ ಭಾವದಿಂದ ಪುಪ್ಪ ನಮನ ಸಲ್ಲಿಸಿ, ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕರಾದ ಅಯ್ಯಣ ಹುಂಡೇಕಾರ ಹಾಗೂ ಎಸ್.ಎಸ್. ಪಾಟೀಲ್, ವೆಂಕಟರಡ್ಡಿ ಮುದ್ನಾಳ ಮಾತನಾಡಿದರು. ಸಮಾರಂಭದಲ್ಲಿ ಹಣಮಂತರಡ್ಡಿ ಮದ್ನಾಳ, ಖಂಡಪ್ಪ ದಾಸನ್, ಸಿದ್ದಪ್ಪ ಹೊಟ್ಟಿ, ಮೋಹನ ಬಾಬು, ಉಮೇಶರಡ್ಡಿ ದದ್ದಲ್, ಮಲ್ಲನಗೌಡ ಪಾಟೀಲ್, ಮಹಾದೇವಪ್ಪಗೌಡ, ಶರಣಗೌಡ, ನಾಗಪ್ಪ ಬೆನಕಲ್, ಅನೀಲ ಗುರುಜಿ, ಡಾ. ಶರಣಭೂಪಾಲರಡ್ಡಿ, ವಿಜಯಕುಮಾರ, ನೀಲಕಂಠ, ಭೀಮರಾಯ ಕೊಂಡಿ, ಡಾ. ಶರಣರಡ್ಡಿ ಸೋಮಶೇಖರ, ಲಿಂಗಪ್ಪ, ನಾಗರಾಜ, ರಾಮರಡ್ಡಿ ಇತರರಿದ್ದರು. ಸಭೆ ಆರಂಭದಲ್ಲಿ ರಾಷ್ಟ್ರಕವಿ ಶಿವರುದ್ರಪ್ಪ ಅಕಾಲಿಕ ನಿಧನಕ್ಕೆ ಸಂತಾಪ ಸೂಚಿಸಲಾಯಿತು. ನಂತರ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.