ಗುಲ್ಬರ್ಗಾ

ಬಸವ ವಸತಿ ಯೋಜನೆ; ಪ.ಜಾ. ಮೀಸಲಾತಿ

Published On :

ಶಹಾಪುರ: ತಾಲೂಕಿನ ಖಾನಾಪುರ ಗ್ರಾಪಂ ವ್ಯಾಪ್ತಿಗೆ ಬರುವ ಗುಂಡಳ್ಳಿ ಗ್ರಾಮದಲ್ಲಿ ಬಸವ ವಸತಿ ಯೋಜನೆಯಡಿಯಲ್ಲಿ ಪ.ಜಾ. ಮೀಸಲಾತಿ ನಿಯಮ ಪಾಲನೆ ಮಾಡದೆ ಅಭಿವೃದ್ಧಿ ಅಧಿಕಾರಿಗಳು ಮತ್ತು ಕೆಲ ಪ್ರಮುಖ ರಾಜಕಾರಣಿಗಳು, ಗ್ರಾಪಂ ಅಧ್ಯಕ್ಷರು ತಮ್ಮ ಇಚ್ಛಾನುಸಾರ ಕಾರ್ಯವೆಸಗಿ ಉಳ್ಳವರಿಗೆ ಮನೆ ವಿತರಣೆ ಮಾಡಿದ್ದಾರೆಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಗುಂಡಳ್ಳಿ ಗ್ರಾಮಶಾಖೆ ವತಯಿಂದ ರಾಜೀವಗಾಂಧಿ ವಸತಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ಸೂಕ್ತ ತನಿಖೆಗಾಗಿ ಮನವಿ ಸಲ್ಲಿಸಿದ್ದಾರೆ. ಪ್ರತಿ ಫಲಾನುಭವಿಗಳಿಂದ ಹಣ ಪಡೆದು ಕೇವಲ ಶ್ರೀಮಂತ ಕುಟುಂಬದವರನ್ನೆ ವಸತಿ ಯೋಜನೆಗೆ ಫಲಾನು ಭವಿಗಳನ್ನಾಗಿ ಆಯ್ಕೆ ಮಾಡಿದ್ದಾರೆ. ಗ್ರಾಮಸಭೆ ಮಾಡದೇ ಪಟ್ಟಣದ ವಸತಿ ಗೃಹಗಳಲ್ಲೇ ಫಲಾನುಭವಿಗಳ ಪಟ್ಟಿ ತಯ್ಯಾರಿಸಿದ್ದಾರೆಂದು ಸಂಚಾಲಕ ಸಂತೋಷ ನಾಟೇಕಾರ ಆರೋಪಿಸಿದ್ದಾರೆ. ತಕ್ಷಣವೇ ಈ ಕುರಿತು ನಿರ್ದೇಶಕರು ತನಿಖೆ ನಡೆಸಿ ಆಯ್ಕೆ ಪಟ್ಟಿ ರದ್ದುಗೊಳಿಸಬೇಕೆಂದು ಸಂತೋಷ ನಾಟೇಕಾರ, ಮರೆಪ್ಪದೊಡ್ಮನಿ, ಭೀಮರಾಯ ಕಾಟಮನಹಳ್ಳಿ, ಭೀಮರಾಯ ನಾಟೇಕಾರ ಮಹಾದೇವಪ್ಪ ದೊಡ್ಮನಿ, ದಶರಥ ತಡಿಬಿಡಿ ಇತರರು ಆಗ್ರಹಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.