ಗುಲ್ಬರ್ಗಾ

'ಪ್ರತಿಯೊಬ್ಬರೂ ವಿದ್ಯಾವಂತರಾಗಲಿ'

Published On :

ಕೆಂಭಾವಿ: ದೇಶದ ಪ್ರತಿಯೊಂದು ಮಗು ಶಿಕ್ಷಣ ಕಲಿತು ಮುಂದೆ ಬರಬೇಕು, ಅದಕ್ಕಾಗಿ ಸರ್ಕಾರ ಹಲವಾರು ಯೋಜನೆಗಳನ್ನು ಹಾಕಿದ್ದು ಅದರ ಸದುಪಯೋಗ ಪಡೆದು ಪ್ರತಿಯೊಬ್ಬರೂ ವಿದ್ಯಾವಂತರಾಗಬೇಕು ಎಂದು ಅಜೀಂ ಪ್ರೇಮ್‌ಜೀ ಫೌಂಡೇಷನ್ ಮಾರ್ಗದರ್ಶಕ ಕೃಷ್ಣ ಬಿಜಾಸ್ಪೂರ ಹೇಳಿದರು.
  ಸಮೀಪದ ಕರಡಕಲ್ ಕ್ಯಾಂಪಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ರಾಜಸ್ಥಾನ ತಂಡದೊಂದಿಗೆ ಭಾನುವಾರ ನಡೆದ ಶಿಕ್ಷಣ ಏಳಿಗೆಗಾಗಿ ಸಮುದಾಯದ ಜೊತೆ ಸಂಪರ್ಕ ಎಂಬ ಕಾರ್ಯಕ್ರಮದಲ್ಲಿ ಮಾತನಾಡಿದರು.
  ಗ್ರಾಪಂ ಪಿಡಿಒ, ಎಸ್‌ಡಿಎಂಸಿ ಸದಸ್ಯರು, ಹಳೆ ವಿದ್ಯಾರ್ಥಿಗಳು ಹಾಗೂ ಪೋಷಕರೊಂದಿಗೆ ಸಂವಾದ ನಡೆಸಿದರು. ಈ ಕಾರ್ಯಕ್ರಮದಲಿ ರಾಜಸ್ಥಾನ ತಂಡದ ಸದಸ್ಯರಾದ ಜ್ಯೋತಿ ಶರ್ಮ, ಅರುಣಾ ಶರ್ಮ, ವೀರೇಂದ್ರ, ಆಸೀಮಾ ಗುಪ್ತಾ, ಗ್ರಾಪಂ ಪಿಡಿಒ ಜಯಾಚಾರ್ಯ, ಎಸ್‌ಡಿಎಂಸಿ ಸದಸ್ಯರಾದ ಶಂಕರಗೌಡ ಐನಾಪುರ, ಬಂದೇನವಾಜ, ನಿಂಗಪ್ಪ, ಶಾಲೆಯ ಮುಖ್ಯಗುರು ಶ್ರೀಶೈಲ ಮತ್ತು ಹಳೆ ವಿದ್ಯಾರ್ಥಿಗಳ ಸಂಘದ ಹಣಮಂತ್ರಾಯ ಹಾಗೂ ಪದಾಧಿಕಾರಿಗಳು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.