ಕಾರಂಜಿ; ರಾಜ್ಯ ಮಟ್ಟಕ್ಕೆ ಆಯ್ಕೆ
ಕೆಂಭಾವಿ: ಕನ್ಯಾ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿಯರಾದ ರಕ್ಷಿತಾ ಸುಧಾಕರ ಡಿಗ್ಗಾವಿ, ಶೀತಲ್ಶ್ರೀಶೈಲ ವಿಶ್ವಕರ್ಮ ಜಿಲ್ಲಾಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಕ್ರಮವಾಗಿ ಕರ್ನಾಟಕ ಶಾಸ್ತ್ರೀಯ ಸಂಗೀತ ಮತ್ತು ರಂಗೋಲಿ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನಗಳಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಜಿಲ್ಲಾ ಮಟ್ಟದಲ್ಲಿ ಹೇಮರೆಡ್ಡಿ ಮಲ್ಲಮ್ಮ ಶಿಕ್ಷಣ ಸಂಸ್ಥೆಯ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿಗಳಾದ ತರನಂ ಸಾಸನೂರ ಇಂಗ್ಲಿಷ್ ಭಾಷಣ ಸ್ಪರ್ಧೆಯಲ್ಲಿ ಪ್ರಥಮ, ಆದಿತ್ಯ ಗುತ್ತೇದಾರ ಮಿಮಿಕ್ರಿಯಲ್ಲಿ ದ್ವಿತೀಯ ಸ್ಥಾನ ಗಳಿಸಿದ್ದಾರೆ.
ಕ್ರೀಡಾ ಮಾಹಿತಿಗೆ ಮೆಚ್ಚುಗೆ
ಶಹಾಪುರ: ಇತ್ತೀಚೆಗೆ ಸಿಪಿಎಸ್ ಮೈದಾನದಲ್ಲಿ ಶಿಕ್ಷಣ ಇಲಾಖೆ ಹಾಗೂ ಅಜಿಂಪ್ರೇಮ್ಜೀ ಫೌಂಡೇಷನ್ ಸಹಯೋಗದಲ್ಲಿ ನಡೆದ ಪ್ರಥಮ ಕ್ರೀಡಾಮೇಳದಲ್ಲಿ ಜೀವೇಶ್ವರ ವಿದ್ಯಾವರ್ಧಕ ಸಂಸ್ಥೆಯ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ವಿದ್ಯಾರ್ಥಿಗಳಿಂದ ಟೆನಿಕಾಯಿಟ್ ಕ್ರೀಡೆಯ ಸಂಪೂರ್ಣ ಮಾಹಿತಿ, ಕ್ರೀಡೆಯ ನಿಯಮಗಳು, ಕ್ರೀಡೆಯ ಇತಿಹಾಸ, ಮೈದಾನದ ಅಳತೆ, ಕ್ರೀಡೆಯ ಅಂತಾರಾಷ್ಟ್ರಿಯ ಮಟ್ಟದ ಕ್ರೀಡಾ ಮಾಹಿತಿಗಳನ್ನು ಒಳಗೊಂಡ ಸಂಪೂರ್ಣ ವಿವರವನ್ನು ನೀಡಿ, ಸರ್ವರ ಮೆಚ್ಚುಗೆಯನ್ನು ವಿದ್ಯಾರ್ಥಿಗಳು ಗಳಿಸಿದರು. ಜೊತೆಗೆ ಮೈದಾನದಲ್ಲಿ ಪ್ರಾಯೋಗಿಕವಾಗಿ ಟೆನಿಕಾಯಿಟ್ ಕ್ರೀಡೆಯನ್ನು ಪ್ರದರ್ಶಿಸಿದರು. ನಿವೃತ್ತ ದೈಹಿಕ ಶಿಕ್ಷಕ ಸೋಮಶೇಖರಯ್ಯ ಹೀರೆಮಠ, ಜನಾರ್ದನ ಮಾನು, ಸಂತೋಷ ಶಿರವಾಳ, ಪ್ರವೀಣ ಫಿರಂಗಿ, ಪಂಚಾಕ್ಷರಿ ಹಿರೇಮಠ, ಸೂರ್ಯಕಾಂತ, ವಿದ್ಯಾರ್ಥಿಗಳು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

