2013ರಲ್ಲಿ 69 ಅಕ್ರಮ ಮರಳು ಲೂಟಿ ಕೇಸ್
ಶಹಾಬಾದ್: ವಲಯ ಉಪ ಪೊಲೀಸ್ ಅಧೀಕ್ಷರ ವ್ಯಾಪ್ತಿಯಲ್ಲಿ ಕಳೆದ ವರ್ಷ ಕಾಗಿಣಾ, ಭೀಮಾ ನದಿಗಳ ಪಾತ್ರದಲ್ಲಿ ಆಕ್ರಮವಾಗಿ ಮರಳು ಲೂಟಿ ಮಾಡುತ್ತಿರುವವರ ವಿರುದ್ಧ 69 ಪ್ರಕರಣಗಳನ್ನು ದಾಖಲಿಸಿದ್ದು, ಒಟ್ಟು 8.89 ಲಕ್ಷ ದಂಡ ವಿಧಿಸಲಾಗಿದೆ ಎಂದು ಡಿವೈಎಸ್‌ಪಿ ಮಹೇಶ ಮೇಘಣ್ಣನವರ ತಿಳಿಸಿದ್ದಾರೆ.
ಮಾಡಬೂಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಂದಾಯ ಅಧಿಕಾರಿಗಳು ದಾಳಿ ನಡೆಸಿ ಎರಡು ವಾಹನ, ಪೊಲೀಸ್ ಅಧಿಕಾರಿಗಳು 12 ಪ್ರಕರಣ, 13 ವಾಹನಗಳನ್ನು ಜಪ್ತಿ ಮಾಡಿದ್ದಾರೆ. ಪೊಲೀಸರು, ಗಣಿ ಮತ್ತು ಭೂವಿಜ್ಞಾನ ಅಧಿಕಾರಿಗಳು, ತಹಸೀಲ್ದಾರರು 19 ಪ್ರಕರಣ ದಾಖಲಿಸಿದ್ದು, 19 ವಾಹನಗಳ ಮೇಲೆ ತಹಸೀಲ್ದಾರರು 3.10 ಲಕ್ಷ ಗಣಿ ಇಲಾಖೆ 50 ಸಾವಿರ ದಂಡ ವಿಧಿಸಿದ್ದಾರೆ.
ಶಹಾಬಾದ್ ವ್ಯಾಪ್ತಿಯಲ್ಲಿ ತಹಸೀಲ್ದಾರರು ಮರಳು ಸಂಗ್ರಹಿಸಿದ 3 ಪ್ರಕರಣ ದಾಖಲಿಸಿದ್ದಾರೆ. ಪೊಲೀಸರು 3 ಪ್ರಕರಣ ದಾಖಲಿಸಿದ್ದು, 11 ವಾಹನಗಳನ್ನು ಜಪ್ತಿ ಮಾಡಿದ್ದಾರೆ. ಪೊಲೀಸರು, ಗಣಿ, ಮತ್ತು ಭೂವಿಜ್ಞಾನ ಅಧಿಕಾರಿಗಳು, ತಹಸೀಲ್ದಾರರು 16 ಪ್ರಕರಣ ದಾಖಲಿಸಿದ್ದು, 16 ವಾಹನಗಳನ್ನು ವಶಕ್ಕೆ ಪಡೆದು, ತಹಸೀಲ್ದಾರರು 3.85 ಲಕ್ಷ ಗಣಿ ಇಲಾಖೆ 34 ಸಾವಿರ ದಂಡ ವಿಧಿಸಿದ್ದಾರೆ.
ಚಿತ್ತಾಪುರ ಠಾಣೆ ವ್ಯಾಪ್ತಿಯಲ್ಲಿ ಪೊಲೀಸರು 1 ಪ್ರಕರಣ, 1 ವಾಹನ ವಶಕ್ಕೆ ಪಡೆದಿದ್ದಾರೆ. ಪೊಲೀಸರು, ಗಣಿ, ಮತ್ತು ಭೂವಿಜ್ಞಾನ ಅಧಿಕಾರಿಗಳು, ತಹಸೀಲ್ದಾರ್ 9 ಪ್ರಕರಣ ದಾಖಲಿಸಿ, 9 ವಾಹನಗಳನ್ನು ವಶಕ್ಕೆ ಪಡೆದು 40 ಸಾವಿರ ದಂಡ ವಿಧಿಸಿದ್ದಾರೆ.
ವಾಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪೊಲೀಸರು 1 ಪ್ರಕರಣ ದಾಖಲಿಸಿ, 1 ವಾಹನ ವಶಕ್ಕೆ ಪಡೆದಿದ್ದಾರೆ. ಪೊಲೀಸರು, ಗಣಿ ಮತ್ತು ಭೂವಿಜ್ಞಾನ ಅಧಿಕಾರಿಗಳು, ತಹಸೀಲ್ದಾರ್ ಸೇರಿ 4 ಪ್ರಕರಣ ದಾಖಲಿಸಿ, 4 ವಾಹನಗಳನ್ನು ವಶಕ್ಕೆ ತಗೆದುಕೊಂಡು 10 ಸಾವಿರ ಗಣಿ ಇಲಾಖೆ 60 ಸಾವಿರ ದಂಡ ವಿಧಿಸಿದ್ದು, ಉಪ ಪೊಲೀಸ್ ಅಧೀಕ್ಷಕರ ವ್ಯಾಪ್ತಿಯಲ್ಲಿ ಒಟ್ಟು 69 ಪ್ರಕರಣ ದಾಖಲಿಸಿ, 76 ವಾಹನಗಳನ್ನು ವಶಕ್ಕೆ ತೆಗೆದುಕೊಂಡು, ಒಟ್ಟು 8.89 ಲಕ್ಷದಂಡ ವಿಧಿಸಲಾಗದೆ ಎಂದು ವಿವರಣೆ ನೀಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

