ಡಿಕ್ಕಿ: ತಪ್ಪಿದ ಅವಘಡ
ಸುರಪುರ: ತಾಲೂಕಿನ ಬಿಜಾಸ್ಪೂರದ ಹತ್ತಿರದಲ್ಲಿ ವೇಗವಾಗಿ ಚಲಿಸುತ್ತಿದ್ದ ಲಾರಿ ಚಾಲಕ ಬ್ರೇಕ್ ಹಾಕುತ್ತಿದ್ದಂತೆ ಹಿಂದಿನಿಂದ ಬರುತ್ತಿದ್ದ ಸಾರಿಗೆ ಸಂಸ್ಥೆಗೆ ಸೇರಿದ ಬಸ್ ಡಿಕ್ಕಿ ಹೊಡೆದ ಪರಿಣಾಮ ಕೂದಲೆಳೆ ಅಂತರದಲ್ಲಿ ಭಾರಿ ಅನಾಹುತ ತಪ್ಪಿದ ಘಟನೆ ಬುಧವಾರ ಜರುಗಿದೆ.ಬೀದರ್- ಬೆಂಗಳೂರು ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವ ಬಿಜಾಸ್ಪೂರು ಗ್ರಾಮದ ಬಳಿ ಲಾರಿಯೊಂದು ಸಿಮೆಂಟ್ ವಿದ್ಯುತ್ ಕಂಬಗಳನ್ನು ಹೊತ್ತುಕೊಂಡು ಸಂಜೆ 4ರ ಸುಮಾರಿಗೆ ಸುರಪುರದ ಕಡೆ ಸಾಗುತ್ತಿತ್ತು. ಇದೇ ಸಂದರ್ಭದಲ್ಲಿ ಲಾರಿ ಮುಂದೆ ಕೆಲ ಮೇಕೆಗಳು ಅಡ್ಡ ಬಂದ ಪರಿಣಾಮ ಲಾರಿ ಚಾಲಕ ಮೇಕೆಗಳನ್ನು ಉಳಿಸಲು ಏಕಾಏಕಿ ಬ್ರೇಕ್ ಹಾಕಿದ.
ಸಿಕ್ಕಿಕೊಂಡ ಚಾಲಕ: ಲಾರಿ ಚಾಲಕ ಬ್ರೇಕ್ ಹಾಕುತ್ತಿದ್ದಂತೆ ಅದೇ ಮಾರ್ಗದಲ್ಲಿ ಹೊರಟ್ಟಿದ್ದ ಗುಲ್ಬರ್ಗ- ಮುದ್ದೇಬಿಹಾಳ ಸಾರಿಗೆ ಸಂಸ್ಥೆ ಬಸ್ ಡಿಕ್ಕಿ ಹೊಡೆಯಿತು.
ಪರಿಣಾಮ ಲಾರಿಯಲ್ಲಿದ್ದ ಕಂಬಗಳು ಬಸ್ಗೆ ತಾಗಿದ್ದರಿಂದ ಬಸ್ಸಿನ ಗಾಜು ಒಡೆದು ಬಸ್ ಚಾಲಕ ಠಾಕ್ರೆಪ್ಪ ರಾಠೋಡ ಎಂಬುವವರು ಬಸ್ ಸ್ಟೇರಿಂಗ್ನಲ್ಲಿ ಸಿಕ್ಕಿಕೊಂಡಿದ್ದರು.
ಘಟನೆ ಘಟಿಸುತ್ತಿದ್ದಂತೆ ಕರವೇ ತಾಲೂಕು ಕಾರ್ಯಾಧ್ಯಕ್ಷ ನಿಂಗಪ್ಪನಾಯಕ ಕಾರ್ಯಕರ್ತರೊಂದಿಗೆ ಧಾವಿಸಿ ಬಸ್ ಚಾಲಕನ್ನು ಹೊರತೆಗೆದು ಪ್ರಾಣಪಾಯದಿಂದ ರಕ್ಷಿಸಿ ಮಾನವೀಯತೆ ಮೆರೆದರು. ಬಸ್ನಲ್ಲಿ 50 ಪ್ರಯಾಣಿಕರಿದ್ದು ಯಾರಿಗೂ ತೊಂದರೆಯಾಗಿಲ್ಲ.
ರೋಡ್ಬ್ರೇಕ್ಗೆ ಒತ್ತಾಯ: ಈ ಹೆದ್ದಾರಿಯಲ್ಲಿ ವಾಹನಗಳು ದಟ್ಟಣೆ ಹೆಚ್ಚಾಗಿದ್ದು, ಅತಿ ವೇಗದಿಂದ ಚಲಿಸುತ್ತವೆ.
ವೇಗ ನಿಯಂತ್ರಣಕ್ಕೆ ಮಾರ್ಗದ ಮಧ್ಯೆ ಎಲ್ಲಿಯೂ ರೋಡ್ಬ್ರೇಕ್ ಹಾಕಿಲ್ಲ. ಹೀಗಾಗಿ ರಸ್ತೆಗೆ ಹೊಂದಿಕೊಂಡಿರುವ ಕೃಷ್ಣಾಪುರ, ಬಿಜಾಸ್ಪೂರು ಗ್ರಾಮಗಳಲ್ಲಿ ಇಂಥಹ ಘಟನೆಗಳು ಮರುಕಳಿಸುತ್ತಿವೆ. ಕಾರಣ ಸಂಬಂಧಪಟ್ಟ ಇಲಾಖೆಯು ಈ ರಸ್ತೆಗೆ ತಕ್ಷಣ ರೋಡ್ಬ್ರೇಕ್ಗಳನ್ನು ಹಾಕಬೇಕು. ಇದರಿಂದ ಅಪಘಾತ ತಪ್ಪಿಸಬಹುದು.ವಿಳಂಬವಾದಲ್ಲಿ ಕರವೇ ಪ್ರತಿಭಟನೆ ಹಮ್ಮಿಕೊಳ್ಳುತ್ತದೆ ಎಂದು ನಿಂಗಪ್ಪನಾಯಕ ಎಚ್ಚರಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

