ಗುಲ್ಬರ್ಗಾ

ಬಂಡೆ ಸಾವಿಗೆ ಸಂತಾಪ ಸಭೆ

Published On :

ಶಹಾಬಾದ್: ನಗರದ ಹಳೆ ಶಹಾಬಾದ್ ಬಡಾವಣೆಯಲ್ಲಿ ದಿಟ್ಟ ಪಿಎಸ್‌ಐ ದಿ. ಮಲ್ಲಿಕಾರ್ಜುನ ಬಂಡೆಯವರಿಗೆ ಅಭಿಮಾನಿಗಳಿಂದ ಸಂತಾಪ ಸಭೆ ನಡೆಸಲಾಯಿತು.  ಬಸವೇಶ್ವರ ವೃತ್ತದ ನಿವಾಸಿಗಳಾದ ಶರಣಪ್ಪ ಕೊಡದೂರ, ನಗರ ಸಭೆ ಸದಸ್ಯ ಸಾಬಣ್ಣ ಬೆಳಗುಂಪಿ, ಅನೀಲ ಸಲಗಾರ ನೇತೃತ್ವದಲ್ಲಿ ಬಂಡೆಯವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಅವರ ಆತ್ಮಕ್ಕೆ ಶಾಂತಿ ಕೋರಿ ಒಂದು ನಿಮಿಷ ಮೌನ ಆಚರಿಲಾಯಿತು. ಸ್ಥಳೀಯರಾದ ಮಲ್ಲಿಕಾರ್ಜುನ ಚಂದನಕೇರಿ, ಶಿವಕುಮಾರ ತುಪ್ಪದ, ಸಂತೋಷ ಪಾಟೀಲ, ಮಹಾದೇವ ಪಾರಾ, ಹಣಮಂತ ಡೆಂಗಿ, ಶ್ರೀನಾಥ, ಶಿವಲಿಂಗಪ್ಪ ಮಂಗಲಗಿ ಸೇರಿದಂತೆ ಅಭಿಮಾನಿಗಳು ಪಾಲ್ಗೊಂಡಿದ್ದರು. ಮಲ್ಲಿಕಾರ್ಜುನ ಬಂಡೆಯವರ ಅಗಲಿಕೆಗೆ ನಗರ ಪೊಲೀಸ್ ಠಾಣೆ ಪಿಐ ವಿಜಯಕುಮಾರ ಹೊಸ್ನನಿ, ಪಿಎಸ್‌ಐ ರಘು ಎನ್. ಸಿಬ್ಬಂದಿ ವರ್ಗ ಹಾಗೂ ನಗರಸಭೆ ಸದಸ್ಯ ಅರುಣಕುಮಾರ ಶೋಕ ವ್ಯಕ್ತಪಡಿಸಿದ್ದಾರೆ.



ಜೇವರ್ಗಿ ಸಂಪೂರ್ಣ ಬಂದ್, ರಸ್ತೆತಡೆ
ಜೇವರ್ಗಿ:  ಪಟ್ಟಣದಲ್ಲಿ ವಿವಿಧ ಹಿಂದೂ ಪರ ಹಾಗೂ ಕನ್ನಡಪರ ಸಂಘಟನೆಗಳು ದಕ್ಷ ಪೊಲೀಸ್ ಅಧಿಕಾರಿ ಮಲ್ಲಿಕಾರ್ಜುನ ಬಂಡೆ ಅವರ ಸಾವಿನ ಸುದ್ದಿ ತಿಳಿಯುತ್ತಿದಂತೆ ಬುಧವಾರ ಜೇವರ್ಗಿ ಬಂದ್ ನಡೆಸಲಾಯಿತು. ರಾಷ್ಟ್ರೀಯ ಹೆದ್ದಾರಿಯ ಅಖಂಡೇಶ್ವರ ವೃತ್ತದಲ್ಲಿ ಸಂಚಾರ ಸ್ಥಗಿತಗೊಳಿಸಿ ಬೃಹತ್ ರಸ್ತೆ ತಡೆ ನಡೆಸಿದರು.  ಬಂದ್ ಅಂಗವಾಗಿ ಪಟ್ಟಣದಲ್ಲಿನ ವರ್ತಕರು ಬೆಳಿಗ್ಗೆಯಿಂದಲೇ ಸ್ವಯಂಪ್ರೇರಿತರಾಗಿ ತಮ್ಮ ಅಂಗಡಿ-ಮುಗ್ಗಟ್ಟುಗಳನ್ನು ಮುಚ್ಚಿ ಬೆಂಬಲ ಸೂಚಿಸಿದರು. ಜಿಲ್ಲಾ ಉಸ್ತುವಾರಿ ಸಚಿವ ಖಮರುಲ್ ಇಸ್ಲಾಂ, ಹಾಗೂ ಈಶಾನ್ಯ ವಲಯದ ಐಜಿಪಿ ಮಹ್ಮದ್ ವಜೀರ್ ಅವರು ಘಟನೆಯ ನೈತಿಕ ಹೊಣೆ ಹೊತ್ತು ರಾಜಿನಾಮೆ ನೀಡಬೇಕೆಂದು ಆಗ್ರಹಿಸಿದರು. ವೀರೇಶ ಪಾಟೀಲ್ ನರಿಬೋಳ, ಮಲ್ಲಶೆಟ್ಟೆಪ್ಪಗೌಡ ಹಿರೇಗೌಡ, ಸಿದ್ದು ಅಂಗಡಿ, ಅಶೋಕ ಗುಡೂರ, ಬಾಪುಗೌಡ ಬಿರಾಳ, ವೀರೇಶ ಪಾಟೀಲ್ ಕಟ್ಟಿಸಂಗಾವಿ, ಶಂಕರಗೌಡ ಹಾಲಗಡ್ಲಾ, ಪರಮೇಶ್ವರ ಬಿರಾಳ, ವಿಜಯಕುಮಾರ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.