ವರ್ತಕರು, ನಾಗರಿಕರಿಂದ ಗೌರವ
ಚಿತ್ತಾಪುರ: ಶೂಟೌಟ್ ಪ್ರಕರಣದಲ್ಲಿ ಮೃತಪಟ್ಟ ಪಿಎಸ್ಐ ಮಲ್ಲಿಕಾರ್ಜುನ ಬಂಡೆ ಅವರ ಭಾವಚಿತ್ರಕ್ಕೆ ಬುಧವಾರ ವರ್ತಕರು ಹಾಗೂ ನಾಗರಿಕರು ಸಂತಾಪ ಸೂಚಿಸಿ ಶ್ರದ್ಧಾಂಜಲಿ ಸಲ್ಲಿಸಿದರು.
ಲಾಡ್ಜಿಂಗ್ ಕ್ರಾಸ್ ಬಳಿ ನಡೆದ ಕಾರ್ಯಕ್ರಮದಲ್ಲಿ ಪುರಸಭೆ ಸದಸ್ಯ ನಾಗರಾಜ ಭಂಕಲಗಿ ಮಾತನಾಡಿ, ಮೃತಪಟ್ಟ ಪಿಎಸ್ಐ ಕುಟುಂಬಕ್ಕೆ ರು. 1 ಕೋಟಿ ಪರಿಹಾರ ನೀಡಬೇಕೆಂದು ಮನವಿ ಮಾಡಿದರು.
ಪುರಸಭೆ ಸದಸ್ಯರಾದ ವಿನೋದ ಗುತ್ತೇದಾರ, ನಾಗರಾಜ ಭಂಕಲಗಿ, ಶಿವಾಜಿ ಕಾಶಿ, ದಶರಥ ದೊಡ್ಮನಿ, ಪಿಎಲ್ಡಿ ಬ್ಯಾಂಕ್ ಉಪಾಧ್ಯಕ್ಷ ಅಶೋಕ ನಿಪ್ಪಾಣಿ, ಉದ್ಯಮಿ ಬಾಬಾ ಸೇಠ, ಸಾಬಣ್ಣ ಕಾಶಿ, ವಿಶ್ವನಾಥ ಬಿ. ಪಾಟೀಲ್, ಪ್ರಭು ಬಮ್ಮನಳ್ಳಿ, ಸಿದ್ಧು ಚಕ್ಕಡಿ, ಬಸವರಾಜ ಬಮ್ಮನಳ್ಳಿ, ಕೋಟೇಶ್ವರ ರೇಷ್ಮಿ, ದೊಡ್ಡಪ್ಪ ಗೌಡ ತೆಂಗಳಿ, ವಿನೋದ ರೆಡ್ಡಿ, ರಿಯಾಜ ಚುನ್ನುಮಿಯಾ, ಅಂಬರೀಶ್ ಸುಲೇಗಾಂವ, ಸಿದ್ರಾಮೇಶ್ವರ ರೇಷ್ಮಿ, ನಾಗರಾಜ ಹೂಗಾರ, ಮಲ್ಲಿಕಾರ್ಜುನ ರೆಡ್ಡಿ ಇಜಾರ, ಪ್ರಲ್ಹಾದ್ ವಿಶ್ವಕರ್ಮ ಇದ್ದರು. ಗಂಜ್ ವ್ಯಾಪಾರಸ್ಥರು ಅಂಗಡಿಗಳನ್ನು ಬಂದ ಮಾಡಿ ಸಂತಾಪ ಸೂಚಿಸಿದರು.
ಶೋಕ: ಪಿಎಸ್ಐ ಬಂಡೆ ನಿಧನಕ್ಕೆ ಗೃಹ ರಕ್ಷಕ ದಳದ ತಾಲೂಕು ಘಟಕಾಧಿಕಾರಿ ಸತ್ಯನಾರಾಯಣ ಯಾದವ, ಶೇಕ್ ರೈಸ್, ವಿನುಕುಮಾರ, ರವಿಚಂದ್ರ ತಳವಾರ ಶೋಕ ಸಂತಾಪ ಸೂಚಿಸಿದ್ದಾರೆ.
ಬಸ್ ಸಂಚಾರ ಬಂದ್: ಇಲ್ಲಿನ ನಿಲ್ದಾಣದಿಂದ ತೆರಳುವ ಎಲ್ಲ ಬಸ್ಗಳ ಸಂಚಾರ ಮದ್ಯಾಹ್ನದಿಂದ ಬಂದ್ ಮಾಡಿದ್ದರಿಂದ ಪ್ರಯಾಣಿಕರು ಪರದಾಡಿದರು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

