ಆಳಂದ; ಇಂದೂ ನಿಷೇಧಾಜ್ಞೆ
ಗುಲ್ಬರ್ಗ: ಬಂಡೆ ಸಾವಿನ ಹಿನ್ನೆಲೆಯಲ್ಲಿ ಸತತ 2ನೇ ದಿನ ಬಂದ್ ಮುಂದುವರಿದಿರುವ ಆಳಂದ ಪಟ್ಟಣದಲ್ಲಿ ಜ. 17 ರ ಶುಕ್ರವಾರವೂ ನಿಷೇಧಾಜ್ಞೆ ಮುಂದುವರಿಸಿ ಉಪ ದಂಡಾಧಿಕಾರಿಗಳೂ ಆಗಿರುವ ಸಹಾಯಕ ಆಯುಕ್ತ ಭೀಮಾಶಂಕರ ಆದೇಶ ಹೊರಡಿಸಿದ್ದಾರೆ. ಅಹಿತಕರ ಘಟನೆಗಳನ್ನು ತಡೆಗಟ್ಟಲು ನಿಷೇಧಾಜ್ಞೆ ವಿಧಿಸಲಾಗಿದೆ. ಜನತೆ ಸಹಕರಿಸಬೇಕೆಂದು ಮನವಿ ಮಾಡಿದ್ದಾರೆ.
ಬಂಡೆ ನಿಧನಕ್ಕೆ ಕಸಾಪ ಶೋಕ: ಬಂಡೆ ಅವರ ನಿಧನಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕವು ಸಂತಾಪ ವ್ಯಕ್ತಪಡಿಸಿದೆ. ದಕ್ಷ, ಪ್ರಾಮಾಣಿಕ ಮತ್ತು ಧೀರ ವ್ಯಕ್ತಿತ್ವದ ಪೊಲೀಸ್ ಅಧಿಕಾರಿ ಮಲ್ಲಿಕಾರ್ಜುನ ಬಂಡೆ ಅವರ ನಿಧನದಿಂದಾಗಿ, ನಿಷ್ಠಾವಂತ ಅಧಿಕಾರಿಯನ್ನು ಕಳೆದುಕೊಂಡಂತಾಗಿದೆ ಎಂದು ಕಸಾಪ ಜಿಲ್ಲಾಧ್ಯಕ್ಷ ಮಹಿಪಾಲರೆಡ್ಡಿ ಮುನ್ನೂರು ಹೇಳಿದರು.
ಕಳೆದ ವರ್ಷ ನಡೆದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಹಿಂದಿನ ದಿನ ಕನ್ನಡ ಭವನಕ್ಕೆ ಆಗಮಿಸಿ, ಸಮ್ಮೇಳನ ಸಿದ್ಧತೆಗಳನ್ನು ನೋಡಿ, ಯಶಸ್ವಿಯಾಗಲಿ ಎಂದು ಖುಷಿಯಿಂದ ಮಾತನಾಡಿದ್ದನ್ನು ಸ್ಮರಿಸಿದ್ದಾರೆ.
ಬಹುಮುಖ ಪ್ರತಿಭೆಯಾಗಿದ್ದ ಬಂಡೆ ಅವರು ಕಿರಿಯ ವಯಸ್ಸಿನಲ್ಲಿಯೇ ಅಪಾರ ಸೇವೆ ಸಲ್ಲಿಸಿ ಮಾದರಿ ಅಧಿಕಾರಿಯಾಗಿದ್ದಾರೆಂದು ಗೌರವ ಕಾರ್ಯದರ್ಶಿ ಸುರೇಶ ಬಡಿಗೇರ, ಬಿ.ಎಚ್. ನಿರಗುಡಿ, ಕೋಶಾಧ್ಯಕ್ಷ ಡಾ. ರಾಜೇಂದ್ರ ಯರನಾಳೆ, ಗುಲ್ಬರ್ಗ ತಾಲೂಕು ಅಧ್ಯಕ್ಷ ಜಿ.ಎಸ್. ಮಾಲಿಪಾಟೀಲ ಶೋಕ ವ್ಯಕ್ತಪಡಿಸಿದ್ದಾರೆ.
ಬಂಡೆ ಆತ್ಮಕ್ಕೆ ಶಾಂತಿ ಕೋರಿಕೆ: ಬಂಡೆ ನಿಧನದಿಂದ ಜಿಲ್ಲಾ ಹರಳಯ್ಯ ಸಮಾಜ ಮುಖಂಡ ಗಂಗಣ್ಣ ಗೊಬ್ಬೂರಕರ್, ಶಿವಲಿಂಗಪ್ಪ ಗೌಳಿ, ಹೆಚ್. ಮಲ್ಲೇಶ, ಪ್ರಬಾಕರ ಬರ್ಗೆ, ಸಿದ್ದಾರಾಮ ದೇವಣಗಾಂವ್, ಸೂರ್ಯಕಾಂತ ಚೌದರಿ, ಮಹಾಂತೇಶ ಗೌಳಿ ಸೇರಿದಂತೆ ಇನ್ನಿತರರು ಶೋಕ ವ್ಯಕ್ತಪಡಿಸಿ ಬಂಡೆಯವರ ಆತ್ಮಕ್ಕೆ ಶಾಂತಿ ಸಿಗಲೆಂದು ಪ್ರಾರ್ಥಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

