ಗುಲ್ಬರ್ಗಾ

ಮನೆ ಮನೆಗಳಿಗೆ ಪಾದಯಾತ್ರೆ

Published On :

ಕ.ಪ್ರ. ವಾರ್ತೆ   ಗುಲ್ಬರ್ಗ   ಜ.19
ತಮ್ಮ ಷಷ್ಠ್ಯಪೂರ್ತಿ ಸಮಾರಂಭಕ್ಕೆ ಬೆಂಗಳೂರಲ್ಲಿ ಫೆ. 28ರಂದು ವಿದ್ಯುಕ್ತ ಚಾಲನೆ ನೀಡುವ ಸಂದರ್ಭದಲ್ಲಿ ಗುಲ್ಬರ್ಗ ಸಂಚಾರದಲ್ಲಿರುವ ಭಂಡಾರಕೇರಿ ಮಠದ ವಿದ್ಯೇಶತೀರ್ಥರ ಗೃಹ ಭಾಗವತ ಶ್ಲೋಕಾನುವಾದ ಗುಲ್ಬರ್ಗ ನಗರ ಜಿಲ್ಲೆಯಲ್ಲಿ ಹೆಚ್ಚಿನ ಆಸ್ತಿಕರ ಮನ ಸೆಳೆದಿದೆ.
ಕಳೆದೆರಡು ದಿನಗಲಿಂದ ಗುಲ್ಬರ್ಗದಲ್ಲಿ ವಾಸ್ತವ್ಯ ಹೂಡಿರುವ ಶ್ರೀಗಳ ಪಾದಯಾತ್ರೆ, ತೊಟ್ಟಿಲು ಸೇವೆ ಹಾಗೂ ಗೃಹ ಭಾಗವತ ಶ್ಲೋಕಾನುವಾದ ಕಾರ್ಯಕ್ರಮಗಳಿಗೆ ಹೆಚ್ಚಿನ ಭಕ್ತರು ಸ್ಪಂದಿಸುತ್ತಿದ್ದಾರೆ.
ಪೂಜಾ ಕಾರ್ಯಕ್ರಮ: ಭಾನುವಾರ ಇಲ್ಲಿನ ಕೃಷ್ಣಾಜಿ ಕುಲ್ಕರ್ಣಿ ಅವರ ಮಾಲಿಕತ್ವದ ಹೀರೋ ಶೋರೂಂನಲ್ಲಿ ಕೋದಂಡರಾಮ ದೇವರ ಪೂಜೆ ನೆರವೇರಿತು. ಅತ್ತರ ಕಂಪೌಂಡ್ ಸೇರಿದಂತೆ ಸುತ್ತಲಿನ ಬಡಾವಣೆಯ ಜನತೆ ಪೂಜಾ ಕಾರ್ಯಕ್ರಮಗಳನ್ನು ವೀಕ್ಷಿಸಲು ಸೇರಿದ್ದರು.
ಪೂಜೆಯ ನಂತರ ತೀರ್ಥ ಪ್ರಸಾದ ವಿತರಣೆ ನಡೆಯಿತು. ನಂತರ ಭಕ್ತರೆಲ್ಲರಿಗೂ ಮಂತ್ರಾಕ್ಷತೆ ನೀಡಿದರು. ಗುಲ್ಬರ್ಗದಿಂದ ನೇರವಾಗಿ ಜೇವರ್ಗಿ ಪಟ್ಟಣಕ್ಕೆ ಶ್ರೀಗಳು ತೆರಳಿದರು. ಅಲ್ಲಿಯೂ ಭಾನುವಾರ ತೊಟ್ಟಿಲುಸೇವೆ ಹಾಗೂ ಇತರೆ ಧಾರ್ಮಿಕ ಕಾರ್ಯಕ್ರಮಗಳನ್ನು ನೆರವೇರಿಸಿದರು. ನಂತರ ಅಲ್ಲಿನ ರಾಯರ ಮಠದ ಅಂಗಳದಲ್ಲಿ ವಿದ್ಯೇಶತೀರ್ಥರಿಂದ ಉಪನ್ಯಾಸ ನಡೆಯಿತು.
ವಿದ್ಯೇಶತೀರ್ಥರ ಗುಲ್ಬರ್ಗ ಸಂಚಾರದ ಸಮನ್ವಯ ಸದಸ್ಯರಾದ ನವಲಿ ಕೃಷ್ಣಾಚಾರ್ಯರು, ಸುಧೀಂದ್ರ ಕೆರೂರ್, ರವಿ ಲಾತೂರಕರ್ ಸೇರಿದಂತೆ ಅನೇಕರು ಶ್ರೀಗಳೊಂದಿಗೆ ಉಪಸ್ಥಿತರಿದ್ದು, ಎಲ್ಲಾ ಕಾರ್ಯಕ್ರಮಗಳು ಸಾಂಗೋಪಾಂಗವಾಗಿ ನೆರವೇರುವಂತೆ ನೋಡಿಕೊಂಡರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.