ಗುಲ್ಬರ್ಗಾ

ಭೂಮಿ ಕೊಡಿ: ಸಿಎಂಗೆ ಮನವಿ

Published On :

ಚಿಂಚೋಳಿ: ರಾಜ್ಯದಲ್ಲಿ ಬಗರ್ ಹುಕುಂ ಸಾಗುವಳಿ ಸಕ್ರಮಗೊಳಿಸಿ ಭೂ ರಹಿತರಿಗೆ ಭೂಮಿ ಕೊಡಿ ಎಂದು ಒತ್ತಾಯಿಸಿ ಬಹುಜನ ಸಮಾಜ ಪಾರ್ಟಿ ಚಿಂಚೋಳಿ ಘಟಕದ ಮುಖಂಡರು ಗುರುವಾರ ಇಲ್ಲಿನ ತಹಸೀಲ್ದಾರ್ ಕಾರ್ಯಾಲಯ ಮುಂದೆ ಧರಣಿ ಸತ್ಯಾಗ್ರಹ ನಡೆಸಿ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗೆ ಮನವಿ ಪತ್ರ ಸಲ್ಲಿಸಿದರು.
ಹಿರಿಯ ನ್ಯಾಯವಾದಿ ಮಾಣಿಕರಾವ ಗುಲಗುಂಜಿ ಮಾತನಾಡಿ, ದೇಶದ ಸಂಪತ್ತು ಭೂಮಿ, ಬಂಡವಾಳ ಮತ್ತು ನೈಸರ್ಗಿಕ ಸಂಪತ್ತು ಕೆಲವೇ ವ್ಯಕ್ತಿಗಳ ಕೈಯಲ್ಲಿ ಕ್ರೋಢಿಕರಣವಾಗದಂತೆ ಸರ್ಕಾರ ಕ್ರಮ ಕೈಕೊಳ್ಳಬೇಕೆಂದು ಸಂವಿಧಾನದಲ್ಲಿದೆ ಎಂದರು. ಆದ್ದರಿಂದ ಭೂ ಹೀನರಿಗೆ ಭೂಮಿ ಕೊಡಬೇಕೆಂದು ಆಗ್ರಹಿಸಿದರು.
ನ್ಯಾಯವಾದಿ ಸಂಜೀವಕುಮಾರ ಮೇತ್ರಿ ಮಾತನಾಡಿ, ರಾಜ್ಯದಲ್ಲಿ 3 ಲಕ್ಷ ಎಕರೆ ಭೂಮಿ ಭೂ ಕಬಳಿಕೆ ಮಾಡಿಕೊಂಡಿರುವ ಶ್ರೀಮಂತರು ಹಾಗೂ ಪ್ರಭಾವಿಗಳಿಂದ ಬಿಡಿಸಲು ಸರ್ಕಾರ ಯಾವುದೇ ಕ್ರಮ  ಕೈಗೊಂಡಿಲ್ಲ. ಸರ್ಕಾರ ಇದರ ಬಗ್ಗೆ ಗಮನ ಹರಿಸಿ ಪರಿಶಿಷ್ಟ ಜಾತಿ ಹಿಂದುಳಿದವರಿಗೆ ಬಗರ್ ಹುಕುಂ ಸಾಗುವಳಿ ಸಕ್ರಮಗೊಳಿಸಬೇಕೆಂದು ಒತ್ತಾಯಿಸಿದರು. ತಾಲೂಕ ಅಧ್ಯಕ್ಷ ನಿಯಾಜ ಅಲಿ, ಗೌತಮ್ ಬೊಮ್ಮನಳ್ಳಿ, ಶರಣಪ್ಪಾ ಮಾಳಗೆ ಮುಂತಾದವರು ಧರಣಿಯನ್ನುದ್ದೇಶಿಸಿ ಮಾತನಾಡಿದರು. ವಿವೇಕಾನಂದ ಹೊಸಮನಿ, ಪ್ರಭು ಭಾಸ್ಕರ್, ಗೌಸೊದ್ದೀನ್ ಗುಂಡಪ್ಪಾ ಚೌಕೆಣಿ, ವಿಠ್ಠಲ್, ಶಿವಶರಣಪ್ಪಾ ಮೌರ್ಯ ರಘುವೀರ ಚಿಮ್ಮನಚೋಡ್ 10 ಬೇಡಿಕೆಗಳ ಮನವಿ ಪತ್ರವನ್ನು ತಹಸೀಲ್ದಾರ್ ಮೋಹನ ಜೋಶಿ ಅವರಿಗೆ ಸಲ್ಲಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.