ಗುಲ್ಬರ್ಗಾ

ಶಾಲೆಗಳಲ್ಲಿ ಹಬ್ಬದ ವಾತಾವರಣ

Published On :

ಕನ್ನಡಪ್ರಭ ವಾರ್ತೆ  ಯಾದಗಿರಿ  ಜೂ.1
ಜಿಲ್ಲಾದ್ಯಂತ ಪ್ರಸಕ್ತ ಶೈಕ್ಷಣಿಕ ವರ್ಷಾರಂಭ ಶನಿವಾರ ಹಬ್ಬದ ವಾತಾವರಣ ಮೂಡಿಸಿತು. ಶಾಲೆ, ಆವರಣಗಳನ್ನು ಸ್ವಚ್ಛಗೊಳಿಸಿ, ತೆಂಗಿನ ಗರಿ, ಮಾವು ತಳಿರು ತೋರಣಗಳಿಂದ ಅಲಂಕರಿಸಲಾಗಿತ್ತು. ಅಲ್ಲದೆ ಮಕ್ಕಳಿಗೆ ಪಠ್ಯಪುಸ್ತಕ ಪುಸ್ತಕ ಹಾಗೂ ಸಮವಸ್ತ್ರಗಳನ್ನು ವಿತರಿಸಿ, ಸಿಹಿ ಊಟ ಬಡಿಸುವ ಮೂಲಕ ಶಾಲಾ ಪ್ರಾರಂಭೋತ್ಸವ ಅದ್ಧೂರಿಯಾಗಿ ಜರುಗಿತು.
  ಸಮೀಪದ ದೋರನಹಳ್ಳಿಯ ಸರ್ಕಾರಿ ಎಂಪಿಎಸ್ ಶಾಲೆಯ ಕೋಣೆಗಳನ್ನು ಸ್ವಚ್ಛಗೊಳಿಸಿ ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು. ಗ್ರಾಮದ ಪ್ರಮುಖ ಬೀದಿಗಳಲ್ಲಿ ಶಾಲಾ ಮಕ್ಕಳಿಂದ ಪ್ರಭಾತ್ ಫೇರಿ ನಡೆಸಲಾಯಿತು. ಎಸ್ಡಿಎಂಸಿ ಸದಸ್ಯ ಸಾಯಬಣ್ಣಾ ದೊರಿ ಶಾಲೆಗೆ ಮಕ್ಕಳನ್ನು ಕರೆತರುವ ಮೂಲಕ ಶಾಲಾ ಪ್ರಾರಂಭೋತ್ಸವಕ್ಕೆ ಚಾಲನೆ ನೀಡಿದರು. ನಂತರ ಅವರು ಶಾಲಾ ಮಕ್ಕಳಿಗೆ ಉಚಿತ ಸಮವಸ್ತ್ರ ಮತ್ತು ಪಠ್ಯ ಪುಸ್ತಕಗಳನ್ನು ವಿತರಿಸಿದರು.
  ಗ್ರಾಮಸ್ಥರಾದ ಸಾಬಣ್ಣಾ ಗೋಸಿ, ಶಿಕ್ಷಕರಾದ ಸಂಗಣ್ಣ, ಭೂತಳಪ್ಪ, ರಮೇಶ, ಸುರೇಶ, ಶರಣಪ್ಪ ಮತ್ತು ಪುಷ್ಪಾ ಇತರರಿದ್ದರು. ಶಿಕ್ಷಕಿಯರಾದ ಶಾಂತಕುಮಾರಿ, ಮಂಜುಳಾ ವಿಶ್ವಕರ್ಮ, ಮಮತಾ ಪಾರ್ಥನೆ ಗೀತೆ ಹಾಡಿದರು. ಶಿವಾನಂದ ಸ್ವಾಗತಿಸಿದರು. ಚಂದ್ರಶೇಖರ ನಿರೂಪಿಸಿದರು, ಲಕ್ಷ್ಮಪ್ಪ ವಂದಿಸಿದರು.
ನಾಯ್ಕಲ್ನಲ್ಲಿ..: ಇಲ್ಲಿನ ಗ್ರಾಮದ ಅಂಬೇಡ್ಕರ್ ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬೆಳಗ್ಗೆ ಶಾಲಾ ಪ್ರಾರಂಭೋತ್ಸವವನ್ನು ಸಡಗರ ಸಂಭ್ರಮದಿಂದ ಸಿಹಿ ಊಟ ಬಡಿಸುವ ಮೂಲಕ ಪ್ರಾರಂಭಿಸಲಾಯಿತು. ಶಾಲಾ ಕೋಣೆಗಳಿಗೆ ಹಸಿರು ತಳಿರು ತೋರಣಗಳಿಂದ ಸಿಂಗಾರಿಸಲಾಗಿತ್ತು. ಮಕ್ಕಳು ಶುಭ್ರವಾದ ಬಟ್ಟೆಗಳನ್ನು ತೊಟ್ಟು ಶಾಲೆಗೆ ಆಗಮಿಸಿದ್ದರು.
  ಬಿಆರ್ಪಿ ಬಸವರಾಜ್ ಬಾನಾರ, ಸಿಆರ್ಪಿ, ಮುಖ್ಯಗುರು, ಎಸ್ಡಿಎಂಸಿ ಅಧ್ಯಕ್ಷರು ಮತ್ತು ಸದಸ್ಯರು, ಶಿಕ್ಷಕ ವೃಂದ ಮಕ್ಕಳ ಪಾಲಕ- ಪೋಷಕರು ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು. ಶಿಕ್ಷಕ ಶಂಕ್ರಪ್ಪ ನಗಿಮುಖ ನಿರೂಪಿಸಿ, ವಂದಿಸಿದರು.
ವಡಗೇರಾ: ಶಾಲಾ ಮಕ್ಕಳಿಗಾಗಿ ಸರ್ಕಾರ ಉಚಿತವಾಗಿ ಬಿಸಿ ಊಟ, ಸಮವಸ್ತ್ರ, ಕಬ್ಬಣಾಂಶದ ಮಾತ್ರೆಗಳು, ಪಠ್ಯಪುಸ್ತಕಗಳು, ಹಾಲು, ಸೈಕಲ್ ವಿತರಣೆ ಇತ್ಯಾದಿ ಯೋಜನೆಗಳನ್ನು ರೂಪಿಸಿದೆ. ಅವುಗಳನ್ನು ಸದುಪಯೋಗ ಪಡಿಸಿಕೊಂಡು ಮುಂದೆ ಬಂದಾಗ ಮಾತ್ರ ಯೋಜನೆಗಳು ಸಾರ್ಥಕವಾಗುತ್ತವೆ ಎಂದು ಹಾಲು ಒಕ್ಕೂಟದ ಮಾಜಿ ಅಧ್ಯಕ್ಷ ಸಿದ್ದಣ್ಣಗೌಡ ಕಾಡಂನೋರ ಹೇಳಿದರು.
  ಇಲ್ಲಿಯ ಸರ್ಕಾರಿ ಮಾದರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಆರಂಭೋತ್ಸವ ದಿನದಂದು ಮಕ್ಕಳಿಗೆ ಉಚಿತ ಪಠ್ಯಪುಸ್ತಕ ಮತ್ತು ಸಮವಸ್ತ್ರಗಳನ್ನು ವಿತರಿಸಿ ಮಾತನಾಡಿದರು. ಶಾಲಾ ಸುಧಾರಣಾ ಸಮಿತಿಯ ಅಧ್ಯಕ್ಷ ಬಸವರಾಜ ನೀಲಹಳ್ಳಿ ಮಾತನಾಡಿ, ಪಾಲಕರು ಆಗಾಗ ಶಾಲೆಗೆ ಬಂದು ತಮ್ಮ ಮಕ್ಕಳ ಕಲಿಕೆಯ ಬಗ್ಗೆ ಶಿಕ್ಷರೊಂದಿಗೆ ಚರ್ಚಿಸಿದಾಗ ಮಾತ್ರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಾಧ್ಯ ಎಂದರು. ಈ ವೇಳೆ ಸಿಆರ್ಪಿ ಸೂಗಣ್ಣಗೌಡ ಪಾಟೀಲ್, ಪ್ರಬಾರಿ ಮುಖ್ಯ ಗುರು ಚಂದ್ರಪ್ಪ, ಮಸಲಿಂಗಪ್ಪ ನಾಯಕ, ಮಂಜುಳಾ ಹಾಗೂ ಗ್ರಾಮಸ್ಥರು ಹಾಜರಿದ್ದರು.
ಶಹಾಪುರ ವರದಿ
ಪಟ್ಟಣದ ಹಳಿಸಗರದ ಗಂಗಾನಗರ ಬಡಾವಣೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವವನ್ನು ವೈಶಿಷ್ಟ್ಯಪೂರ್ಣವಾಗಿ ಆಚರಿಸಲಾಯಿತು.
  ಬೇಸಿಗೆ ದಿನಗಳಲ್ಲಿ ನಡೆದ ಚಿಣ್ಣರ ಅಂಗಳ ತರಬೇತಿ ಪಡೆದ ಮಕ್ಕಳು ಸಮಸ್ತ ಶಾಲೆಗೆ ಬರುವ ವಿದ್ಯಾರ್ಥಿಗಳನ್ನು ಆರತಿ ಮಾಡುವ ಮೂಲಕ ಮತ್ತು ಸಮಸ್ತ ಶಿಕ್ಷಕ ಸಿಬ್ಬಂದಿಗೆ ಹೂಗುಚ್ಛ ನೀಡಿ ಸ್ವಾಗತಿಸಲಾಯಿತು. ನಂತರ ಪ್ರಮುಖ ಬೀದಿಗಳಲ್ಲಿ ಬನ್ನಿ ಮಕ್ಕಳೇ ಶಾಲೆಗೆ ಎಂಬ ಘೋಷಣೆಯೊಂದಿಗೆ ನಡೆದ ಪ್ರಭಾತ್ ಫೇರಿ ಗಮನ ಸೆಳೆಯಿತು.
  ಶಿಕ್ಷಣಾಧಿಕಾರಿ ಶಶಿಧರ ಬಿರಾದಾರ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ ಸಮವಸ್ತ್ರ ವಿತರಿಸಿ ಮಾತನಾಡಿ, ಶಾಲಾ ಪ್ರಾರಂಭೋತ್ಸವ ದಿನದಿಂದಲೇ ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡಿರುವುದು ಸಂತಸದ ಸಂಗತಿ. ತಾಲೂಕಿನಲ್ಲೆಡೆ ಪ್ರಾರಂಭೋತ್ಸವ ಕಲಿಕಾ ವಾತಾವರಣ ಮೂಡಿಸಲಿ ಎಂದು ತಿಳಿಸಿದರು.
 ಶಿಕ್ಷಣ ಸಂಯೋಜಕರಾದ ರೇವಣಸಿದ್ದಪ್ಪ ರಾಜೇಂದ್ರ ಜೇಮಿಗೋಟ್ಲಾ, ಮಲ್ಕಪ್ಪ, ಮುಖ್ಯಗುರು ಶಾಂತಾಬಾಯಿ, ಜಾನಕಿ ಪ್ರಮುಖರಾದ ರಮೇಶ ಇಟಗಿ, ಮರೆಣ್ಣ ಚಂಡು, ಎಸ್ಡಿಎಂಸಿ ಅಧ್ಯಕ್ಷ ಕಾಮರಾಜ ಇತರರಿದ್ದರು. ಮಶಾಕ ಸಾಬ ನಿರೂಪಿಸಿದರು. ಮಡಿವಾಳಪ್ಪ ಸ್ವಾಗತಿಸಿದರು, ಶರಣಗೌಡ ವಂದಿಸಿದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.