ಗುಲ್ಬರ್ಗಾ

77,270 ಹೆಕ್ಟೇರ್ ಬಿತ್ತನೆ ಗುರಿ

Published On :

ಅಫಜಲ್ಪುರ: ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ ತಾಲೂಕಿನಾದ್ಯಂತ ಒಟ್ಟು 77270 ಹೆಕ್ಟೇರ್ ಬಿತ್ತನೆ ಗುರಿ ಹೊಂದಲಾಗಿದೆ.
ಕಳೆದ ಬಾರಿಗಿಂತ ಈ ಬಾರಿ ಇಳುವರಿಯಲ್ಲೂ ಏರಿಕೆ ಕಾಣುವ ಸಾಧ್ಯತೆಯಿದೆ. ತಾಲೂಕಿನಲ್ಲಿ ಜನವರಿ 14ರಿಂದ ಮೇ 14ರವರೆಗೆ ತಾಲೂಕಿನಾದ್ಯಂತ ಆಗಬೇಕಿದ್ದ ವಾಡಿಕೆ ಮಳೆ 58.5 ಮಿ.ಮೀ. ಇದ್ದು ಮೇ 23ರವರೆಗೆ ಬಿದ್ದ ಮಳೆ 173.04 ಮಿ.ಮೀ ಆಗಿದೆ. ಇದರಿಂದ ಭೂಮಿ ಸಿದ್ಧತೆಗೆ ಅನುಕೂಲವಾಗಿದೆ. ಜೂನ್ ಮೊದಲ ವಾರದಲ್ಲಿ ಮುಂಗಾರು ನಿರೀಕ್ಷೆಯಿದೆ. ಹೀಗಾಗಿ ರೈತರು ತಮ್ಮ ಭೂಮಿಗಳಲ್ಲಿ ಬಿತ್ತನೆಗೆ ಸಜ್ಜಾಗಿದ್ದಾರೆ.
ತಾಲೂಕಿನಾದ್ಯಾಂತ ಬತ್ತ 100 ಹೆಕ್ಟರ್, ಮೆಕ್ಕೆಜೋಳ 1250 ಹೆಕ್ಟರ್, ಜೋಳ 300 ಹೆಕ್ಟರ್, ಸಜ್ಜೆ   2100 ಹೆಕ್ಟರ್, ಏಕದಳ 3750 ಹೆಕ್ಟರ್ ಬಿತ್ತನೆ ಗುರಿ ಹೊಂದಲಾಗಿದೆ.
ದ್ವಿದಳ ಧಾನ್ಯಗಳಾದ ತೊಗರಿ 41,400 ಹೆಕ್ಟೇರ್, ಹುರುಳಿ 50 ಹೆಕ್ಟೇರ್, ಉದ್ದು 30, ಹೆಸರು 2100, ಅಲಸಂದಿ 150, ಅವರೆ 100, ಮಡಕೆ 25 ಹೆಕ್ಟೇರ್ ಸೇರಿ ಒಟ್ಟು 43,855 ಹೆಕ್ಟೇರ್ ಬಿತ್ತನೆ ಗುರಿ ಹೊಂದಲಾಗಿದೆ.
ವಿವಿಧ ಬೆಳೆಗಳ ಬಿತ್ತನೆ: ಎಣ್ಣೆ ಕಾಳುಗಳಾದ ಶೇಂಗಾ 600 ಹೆಕ್ಟೇರ್, ಎಳ್ಳು 1000 ಹೆಕ್ಟೇರ್, ಸೂರ್ಯಕಾಂತಿ 11000 ಹೆಕ್ಟೇರ್, ಔಡಲ 15 ಹೆಕ್ಟೇರ್ ಸೇರಿದಂತೆ ಒಟ್ಟು 12,765 ಹೆಕ್ಟೇರ್ ಬಿತ್ತನೆ ಗುರಿ ಹೊಂದಲಾಗಿದೆ.
ವಾಣಿಜ್ಯ ಬೆಳೆಗಳಾದ ಹತ್ತಿ 6000 ಹೆಕ್ಟೇರ್, ಕಬ್ಬು 8900 ಹೆಕ್ಟೇರ್ ಬಿತ್ತನೆ ಗುರಿ ಹೊಂದಲಾಗಿದೆ. ಹೀಗೆ ಎಲ್ಲಾ ಬೆಳೆಗಳು ಸೇರಿ 77,270 ಹೆಕ್ಟೇರ್ ಮುಂಗಾರು ಬಿತ್ತನೆ ಗುರಿ ಹೊಂದಲಾಗಿದೆ. ಕಳೆದ ವರ್ಷ ಹತ್ತಿ ಇಳುವರಿ ಚೆನ್ನಾಗಿ ಬಂದಿತ್ತು. ಉತ್ತಮ ಬೆಂಬಲ ಬೆಲೆ ಸಿಕ್ಕಿದ್ದರಿಂದ ಹತ್ತಿ ಬಿತ್ತನೆ ಕ್ಷೇತ್ರದಲ್ಲಿ ಹೆಚ್ಚಾಗುವ ನಿರೀಕ್ಷೆಯಿದೆ. ಕಬ್ಬು ಬೆಳೆಯುವ ಕ್ಷೇತ್ರವೂ ಹೆಚ್ಚಾಗುವ ಸಾಧ್ಯತೆ ಇದೆ. ಪ್ರತಿ ವರ್ಷದಂತೆ ಈ ವರ್ಷವೂ ರೈತರಿಗೆ ರಿಯಾಯಿತಿ ದರದಲ್ಲಿ ತೊಗರಿ, ಉದ್ದು, ಹೆಸರು, ಸೂರ್ಯಕಾಂತಿ, ಹೈಬ್ರಿಡ್ ಜೋಳ, ಮೆಕ್ಕೆ ಜೋಳ, ಸಜ್ಜೆ, ಶೇಂಗಾ, ಸೋಯಾಬಿನ್ ಬೀಜಗಳನ್ನು ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ತಾಲೂಕಿನ ರೈತ ಸಂಪರ್ಕ  ಕೇಂದ್ರಗಳಾದ ಅಫಜಲ್ಪುರ, ಅತನೂರ, ಕರ್ಜಗಿಗಳಲ್ಲಿ ವಿತರಿಸಲಾಗುವುದು ಎಂದು ಕೃಷಿ ಸಹಾಯಕ ನಿರ್ದೇಶಕ ತಿಳಿಸಿದ್ದಾರೆ.
ಗೊಬ್ಬರ ಕೊರತೆ ಇಲ್ಲ: ಲಘು ಪೋಷಕಾಂಶಗಳಾದ ಜಿಪ್ಸಂ, ಝಿಂಕ್, ಬೋರಾನ್ ಹಾಗೂ ಕಬ್ಬಿಣಾಂಶ ಸೇರಿದಂತೆ ಇತರ ಲಘು ಪೋಷಕಾಂಶಗಳನ್ನು ರಿಯಾಯಿತಿ ದರದಲ್ಲಿ ವಿತರಿಸಲಾಗುವುದು. ಇವೆಲ್ಲವನ್ನು ರೈತರು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ತಿಳಿಸಿದ್ದಾರೆ. ಈ ಬಾರಿ ಬೀಜ ಹಾಗೂ ರಸಗೊಬ್ಬರ ಕೊರತೆ ಆಗದಂತೆ ಪೂರ್ವ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.