ಗುಲ್ಬರ್ಗಾ

ಪರವಾನಗಿ ರಹಿತ ಆಟೋ ಸಂಚಾರ

Published On :

ಚಿಂಚೋಳಿ: ಪಟ್ಟಣದಲ್ಲಿ ಸಂಚರಿಸುವ ಆಟೋ ಚಾಲಕರು ಸರ್ಕಾರದಿಂದ ಪರವಾನಗಿ ಪಡೆಯದೆ ಹಾಗೂ ಅತ್ಯಂತ ಇಳಿವಯಸ್ಸಿನ ಮಕ್ಕಳು ಆಟೋ ಚಾಲನೆ ಮಾಡುತ್ತಿರುವುದರಿಂದ ಅಪಘಾತಗಳು ಹೆಚ್ಚುತ್ತಿವೆ ಎಂದು ಸಾರ್ವಜನಿಕರು ದೂರಿದ್ದಾರೆ.
ಪಟ್ಟಣದಲ್ಲಿ ಅಂದಾಜು 200 ಆಟೋಗಳು ಚಿಂಚೋಳಿ ಪಟ್ಟಣ ಹಾಗೂ ಚಂದಾಪುರಕ್ಕೆ ಸಂಚರಿಸುತ್ತಿದ್ದು ಇವುಗಳಲ್ಲಿ ಕೆಲವು ಸರ್ಕಾರದಿಂದ ಪರವಾನಗಿ ಪಡೆದಿದ್ದರೆ ಇನ್ನು ಕೆಲವು ಪರವಾನಗಿಯಿಲ್ಲದೆ ಸಂಚರಿಸುತ್ತಿವೆ. ಅಲ್ಲದೆ ಬಾಲಕರು ಆಟೋ ಚಾಲನೆ ಮಾಡುತ್ತಿದ್ದು, ಪ್ರಯಾಣಿಕರು ಭಯದಲ್ಲಿ ಸಂಚರಿಸುವಂತಾಗಿದೆ. ಕೆಲವರು ಸಂಚಾರಿ ನಿಯಮ ಉಲ್ಲಂಘಿಸಿ ಚಾಲನೆ ನಡೆಸುತ್ತಿದ್ದರೂ ಪೊಲೀಸರು ಗಮನ ಹರಿಸುತ್ತಿಲ್ಲ ಎಂದು ಸಾರ್ವಜನಿಕರು ತಿಳಿಸುತ್ತಾರೆ.
ಸಮವಸ್ತ್ರ ಧರಿಸದೇ ಲೈಸೆನ್ಸ್: ಚಿಂಚೋಳಿ- ತಾಂಡೂರ ರಾಜ್ಯ ಹೆದ್ದಾರಿ ಬಳಿಯ ಚಂದಾಪುರ ನಗರದ ಹನುಮಾನ್ ದೇವಾಲಯ ಕ್ರಾಸ್, ಸಾಯಿ ಡಾಭಾ, ಬಸ್ ನಿಲ್ದಾಣ ಹತ್ತಿರ ಅನೇಕ ಬಾರಿ ಆಟೋಗಳು ಪಲ್ಟಿಯಾಗಿ ಪ್ರಯಾಣಿಕರು ಗಾಯಗೊಂಡಿದ್ದಾರೆ. ಕೆಲ ಆಟೋ ಚಾಲಕರು ಸಮವಸ್ತ್ರ ಧರಿಸದೇ ಲೈಸೆನ್ಸ್ ಇಲ್ಲದೇ ಆಟೋ ಚಾಲನೆ ನಡೆಸುತ್ತಿರುವ ಬಗ್ಗೆ ಸ್ಥಳೀಯ ಪೊಲೀಸರಿಗೆ ಗೊತ್ತಿದ್ದರೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ.
ಗಾರಂಪಳ್ಳಿ, ದೇಗಲಮಡಿ, ಕರಚಖೇಡ್, ಗೌಡನಹಳ್ಳಿ, ಚಿಕ್ಕನಿಂಗದಳ್ಳಿ ಕಲಭಾವಿ, ಭೋಗಾಲಿಂಗದಳ್ಳಿ, ಐನೋಳಿ, ನಿಮಾಹೊಸಳ್ಳಿ, ಗಣಾಪುರ, ಭಕ್ತಂಪಳ್ಳಿ, ಬುರುಗಪಳ್ಳಿ, ಚತ್ರಸಾಲಾ ಪೋಲಕಪಳ್ಳಿ ಮುಂತಾದ ಗ್ರಾಮಗಳಿಂದ ಚಿಂಚೋಳಿ ನಗರಕ್ಕೆ ಬರುವ ನೂರಾರು ಆಟೋಗಳು ಸರ್ಕಾರದಿಂದ ಅನುಮತಿ ಇಲ್ಲದೆ ಹೆಚ್ಚಿನ ಪ್ರಮಾಣಿಕರನ್ನು ತುಂಬಿಕೊಂಡು ನಿತ್ಯ ಸಂಚರಿಸುತ್ತಿವೆ. ಸಂಚಾರಿ ನಿಯಮ ಇಲ್ಲಿ ಸಂಪೂರ್ಣವಾಗಿ ಉಲ್ಲಂಘನೆಯಾಗುತ್ತಿದೆ. ಇದರ ಬಗ್ಗೆ ಸಾರಿಗೆ ಇಲಾಖೆ ಗಮನಹರಿಸಬೇಕೆಂದು ಭೀಮಶೆಟ್ಟಿ ಮುಕ್ಕಾ ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.