ಗುಲ್ಬರ್ಗಾ

ರಸ್ತೆ ಬದಿ ಗೂಡಂಗಡಿಗಳ ತೆರವು

Published On :

ಗುಲ್ಬರ್ಗ:  ಇಲ್ಲಿನ ಗುಲ್ಬರ್ಗ- ಜೇವರ್ಗಿ ರಸ್ತೆಯಲ್ಲಿರುವ ರಿಂಗ್ ರಸ್ತೆಯ ರಾಮ ಮಂದಿರ ವೃತ್ತದ ನಾಲ್ಕು ರಸ್ತೆಗಳಲ್ಲಿ ಚಾಚಿಕೊಂಡಿದ್ದ ಹತ್ತಾರು ಗೂಡಂಗಡಿಗಳ ತೆರವು ಕಾರ್ಯ ಮಂಗಳವಾರ ಮಹಾನಗರ ಪಾಲಿಕೆಯ ಅಧಿಕಾರಿಗಳು ಕೈಗೆತ್ತಿಕೊಂಡರು.
ರಾಮ ಮಂದಿರದ ಮುಂಭಾಗದಲ್ಲಿರುವ ಗೂಡಂಗಡಿಗಳು, ಅದರ ಮುಂಭಾಗದ ರಸ್ತೆಯ ಇಕ್ಕೆಲಗಳಲ್ಲಿರುವ ಪಂಚರ್ ಅಂಗಡಿ, ಚಹಾ, ಭಜ್ಜಿ ಅಂಗಡಿಗಳು, ಹಣ್ಣಿನ ಬಂಡಿಗಳು, ತರಕಾರಿ ಅಂಗಡಿ ಸೇರಿದಂತೆ ಎಲ್ಲಾತರಹದ ಗೂಡಂಗಡಿಗಳನ್ನು ತೆರವು ಮಾಡುವ ಕೆಲಸ ನಡೆಯಿತು.  ಪಾಲಿಕೆಯ ಸಿಬ್ಬಂದಿ ಜೆಸಿಬಿ ಯಂತ್ರದೊಂದಿಗೆ ಬೆಳಗ್ಗೆಯೇ ಪ್ರತ್ಯಕ್ಷವಾಗಿ ತೆರವು ಕಾರ್ಯಕ್ಕೆ ಮುಂದಾದಾಗ ವರ್ತಕರಿಂದ ಪ್ರತಿಭಟನೆ ವ್ಯಕ್ತವಾಯಿತು. ವರ್ತಕರ ವಿರೋಧದ ನಡುವೆಯೇ ಗೂಡಂಗಡಿಗಳ ತೆರವು ಕಾರ್ಯ ಸಾಗಿತು.
ಸಂಚಾರಕ್ಕೂ ಸಂಚಕಾರ: ರಾಮ ಮಂದಿರ ರಸ್ತೆ ಹಾಗೂ ಅಲ್ಲಿನ ಸರ್ಕಲ್ ತುಂಬ ಮಹತ್ವ ಪಡೆದಿವೆ. ರಿಂಗ್ ರಸ್ತೆಯ ಇಕ್ಕೆಲಗಳಲ್ಲಿ ಸೇವಾ ರಸ್ತೆಯ ಅವಕಾಶವು ಇದೆ. ಆದರೆ ಈ ರಸ್ತೆಗಳನ್ನೇ ತಮ್ಮ ವಹಿವಾಟಿನ ಕೇಂದ್ರವಾಗಿಸಿಕೊಂಡಿದ್ದ  ಗೂಡಂಗಡಿಗಳವರು ರಸ್ತೆಯನ್ನೇ ಆಪೋಷನಗೈದಿದ್ದರಿಂದ ಪಾದಚಾರಿಗಳು, ವಾಹನ ಸವಾರರು ತುಂಬ ತೊಂದರೆ ಅನುಭವಿಸುತ್ತಿದ್ದರು. ಧನ್ವಂತರಿ ಆಸ್ಪತ್ರೆಯ ಮುಂದಿನಿಂದ ಸಾಗುವ ಸರ್ವಿಸ್ ರಸ್ತೆ ಗೂಡಂಗಡಿಗಳ ಆಕ್ರಮಳದಿಂದ ಮುಚ್ಚಿಹೊದಂತಿತ್ತು. ಆಸ್ಪತ್ರೆಗೆ ಬರುವ ಜನರಂತೂ ಯಾವ ರಸ್ತೆಯಿಂದ ಹೋದರೂ ಇಕ್ಕಟ್ಟಾದ ರಸ್ತೆಗಳಾಗಿ ಎದುರಿಸುತ್ತಿದ್ದ ತೊಂದರೆಗಳು ಸಾಕಷ್ಟು ಇದ್ದವು. ಹೀಗಾಗಿ ಪಾಲಿಕೆ ಪರಿಸರ ಎಂಜಿನಿಯರ್, ಆರೋಗ್ಯ ನೀರೀಕ್ಷಕರು ಹಾಗೂ ಇತರೆ ಸಿಬ್ಬಂದಿ ವರ್ಗದವರು ಸರ್ಕಲ್‌ನ ಗೂಡಂಗಡಿಗಳ ತೆರವಿಗೆ ಕ್ರಮ ಕೈಗೊಂಡಿದ್ದರಿಂದ ಇದೀಗ ಇಲ್ಲಿನ ರಸ್ತೆ ಇಕ್ಕೆಲಗಳು ತುಸು ಖಾಲಿಯಾದಂತಾಗಿವೆ.
ಗೂಡಂಗಡಿ ತೆರವು ಕಾರ್ಯಾಚರಣೆ ಪಾಲಿಕೆಯೇ ಕೈಗೆತ್ತಿಕೊಂಡಿದ್ದು, ಇದಕ್ಕೆ ಸಂಚಾರ ಪೊಲೀಸರ ವರದಿ ಆಧಾರ. ಸಂಚಾರಕ್ಕೆ ಗೂಡಂಗಡಿಗಳಿಂದ ಸಂಚಕಾರ ಇದೆ ಎಂದು ಪೊಲೀಸರು ಹೇಳಿದ್ದರಿಂದ ತಕ್ಷಣ ತೆರವಿಗೆ ಮುಂದಾಗಿದ್ದೇವೆ.
ಶ್ರೀಕಾಂತ ಕಟ್ಟೀಮನಿ, ಆಯುಕ್ತರು,

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.