ಬಿರುಗಾಳಿಗೆ ಜೆಸ್ಕಾಂ ತತ್ತರ
ಗುಲ್ಬರ್ಗ: ಜೂ.6ರ ರಾತ್ರಿ 1 ಗಂಟೆ ಬೀಸಿದ ಭಾರಿ ವೇಗದ ಬಿರುಗಾಳಿಗೆ ಗುಲ್ಬರ್ಗ, ಬೀದರ್, ರಾಯಚೂರು, ಕೊಪ್ಪಳ, ಬಳ್ಳಾರಿ ಹಾಗೂ ಯಾದಗಿರಿ ಸೇರಿದಂತೆ 6 ಜಿಲ್ಲೆಗಳ ವ್ಯಾಪ್ತಿಯಲ್ಲಿನ ವಿದ್ಯುತ್ ಮೂಲ ಸೌಕರ್ಯಕ್ಕೆ ಪೆಟ್ಟು ನೀಡಿದೆ, ಇದರಿಂದಾಗಿ ಗುಲ್ಬರ್ಗ ವಿದ್ಯುತ್ ಸರಬರಾಜು ಕಂಪನಿ (ಜೆಸ್ಕಾಂ) ವ್ಯಾಪ್ತಿಯಲ್ಲಿ ಕೋಟಿ ಕೋಟಿ ಹಾನಿ ಉಂಟಾಗಿದೆ.
ಕಳೆದ ಕೆಲವು ವರ್ಷದಿಂದ ಜೆಸ್ಕಾಂ ತನ್ನ ವ್ಯಾಪ್ತಿಯಲ್ಲಿ ಜಾರಿಗೆ ತಂದಿದ್ದ ಏಕ ಕಂಬ ವಿದ್ಯುತ್ ಪರಿವರ್ತಕಗಳು ಬಿದ್ದುಹೋಗಿವೆ. ಒಂದು ಅಂದಾಜಿನ ಪ್ರಕಾರ ಜೆಸ್ಕಾಂ ಅನುಭವಿಸಿರುವ ಒಟ್ಟು ಹಾನಿಯಲ್ಲಿ ಈ ವಿದ್ಯುತ್ ಪರಿವರ್ತಕ ಬಿದ್ದು ಉಂಟಾಗಿರುವ ಹಾನಿಯ ಪ್ರಮಾಣದ್ದೇ ಸಿಂಹಪಾಲು.
110 ಕೆವಿ ವಿದ್ಯುತ್ ಮಾರ್ಗವೂ ಈ ಗಾಳಿ ಹೊಡೆತಕ್ಕೆ ತತ್ತರಿಸಿದೆ, ಬಳ್ಳಾರಿ ವ್ಯಾಪ್ತಿಯಲ್ಲಂತೂ 110 ಕೆವಿ ಮಾರ್ಗದಲ್ಲಿದ್ದ ಮೂರು ಗೋಪುರಗಳು ಧರೆಗುರುಳಿವೆ. ಗುಲ್ಬರ್ಗ ಮಹಾನಗರದಲ್ಲಂತೂ 1 ತಾಸಿನ ಗಾಳಿ ನೂರಕ್ಕೂ ಹೆಚ್ಚು ಕಂಬಗಳನ್ನು ನೆಲಕ್ಕುರುಳಿಸಿದ್ದಲ್ಲದೆ ಅಷ್ಟೇ ಸಂಖ್ಯೆಯ ವೈರ್ ಜಾಲವನ್ನು ತುಂಡರಿಸಿಬಿಟ್ಟಿದೆ.
8 ಜಿಲ್ಲೆಗಳ ವ್ಯಾಪ್ತಿಯ 31 ತಾಲೂಕು, 38 ನಗರಯ ಪಟ್ಟಣ ಪ್ರದೇಶಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಜೆಸ್ಕಾಂಗೆ ಜೂ.6 ರ ರಾತ್ರಿ ಬೀಸಿದ 1 ಗಂಟೆ ಅವಧಿಯ ಬಿರುಗಾಳಿ ಅಂದಾಜು 5 ಕೋಟಿ ನಷ್ಟ ಉಂಟುಮಾಡಿದೆ.
ಬಳ್ಳಾರಿ ವಲಯದಲ್ಲಿ 1, 499 ಕಂಬಗಲು ಧರೆಗುರುಳಿ 1. 14 ಕೋಟಿ ರು ನಷ್ಟ ಸಂಭವಿಸಿದೆ. ಕಮಲಾಪುರ ಮತ್ತು ಕಂಪ್ಲಿಯಲ್ಲಿ ಬರುವ 110 ಕೋವಿ ಉಪ ಕೇಂದ್ರಗಳ ಗೋಪುರಗಳು ಗಾಳಿಗೆ ಮುರಿದು ಬಿದ್ದು ಭಾರಿ ಹಾನಿ ಸಂಭವಿಸಿದೆ. ಒಟ್ಟು 78 ನಗರ, ಪಟ್ಟಣ, ಗ್ರಾಮೀಣ ಪ್ರದೇಶಗಳು ಇದರಿಂದ ವಿದ್ಯುತ್ ಪೂರೈಕೆ ಇಲ್ಲದೆ ಭಾರಿ ತೊಂದರೆಗೀಡಾಗಿದ್ದವು. ಹಂತಹಂತವಾಗಿ ವಿದ್ಯುತ್ ಪೂರೈಕೆ ಕಾರ್ಯ ಸಾಗಿದ್ದು ಇನ್ನೂ 30 ಹಳ್ಳಿ ಪ್ರದೇಶಗಳಿಗೆ ವಿದ್ಯುತ್ ಪೂರೈಕೆ ಮರಳಿಸಬೇಕಾಗಿದೆ.
-ಶೇಷಮೂರ್ತಿ ಅವಧಾನಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

