ಮನಸೊಳಗೆ 'ಕಾಡಿದ ಕವಿತೆ'
ಕ.ಪ್ರ. ವಾರ್ತೆ ಗುಲ್ಬರ್ಗ ಜೂ. 24
ನಿಸರ್ಗ ಸಹಜ ಹೂವು ಸುವಾಸನೆ ಹರಡುತ್ತದೆ. ಪ್ಲಾಸ್ಟಿಕ್ ಹೂವಿಗೆ ವಾಸನೆ ಎಂಬುದಿಲ್ಲ. ಅದು ಹೃದಯ ತಟ್ಟುತ್ತದೆ. ಇದು... ಏನನ್ನೂ ತಟ್ಟುವುದಿಲ್ಲ. ಹೆಂಡತಿಯ ಒತ್ತಾಯಕ್ಕೆ ಮಣಿದು ದೇವರ ದರ್ಶನಕ್ಕೆ ಹೋದೆ. ಮನಸು ವಿರೋಧಿಸುತ್ತಿತ್ತು. ಮೈಮೇಲಿನ ಬಟ್ಟೆ ತೆಗೆದರೆ ಮಾತ್ರ ದರ್ಶನ ಭಾಗ್ಯ ಎಂಬ ಮಾತು ನನ್ನೊಳಗಿನ ವೈಚಾರಿಕತೆ ನಿಲುವನ್ನು ಪ್ರಶ್ನಿಸಿದಂತಿತ್ತು. ಹಾಗಾಗಿ ಹೆಂಡತಿಯನ್ನು ಕ್ಯೂನಲ್ಲೇ ನಿಲ್ಲಿಸಿ ಹೊರಗೆ ಬಂದೆ....
ಯೇ ದಿಲ್ ಮಾಂಗೇ ಮೋರ್... ಅನ್ನೋ ಅಭಿಪ್ರಾಯದಂತೆ ಇಲ್ಲಿನ ಕಸಾಪ ಕನ್ನಡ ಭವನದಲ್ಲಿ ನಡೆದ ಕಾಡಿದ ಕವಿತೆ ಕಾರ್ಯಕ್ರಮ ಜನಮನ ಸೂರೆಗೊಂಡಿತ್ತು. ಸಾಹಿತ್ಯಾಸಕ್ತರೇ ಹೆಚ್ಚು ಭಾಗವಹಿಸಿದ್ದ ಸಮಾರಂಭದಲ್ಲಿ ಕವಿತೆಗಳ ವಾಚನ, ಅರ್ಥ ವಿವರಣೆ ಕೇಳಿದಷ್ಟು ಇನ್ನೂ ಕೇಳಬೇಕು ಎಂಬಂತೆ ಭಾಸವಾಯ್ತು. ಭಾಗವಹಿಸಿದ್ದ ಕವಿಗಳು, ಅವರನ್ನು ಕಾಡಿದ ಕವಿತೆಗಳು ಸೇರಿದ್ದ ಎಲ್ಲರನ್ನು ಮಂತ್ರಮುಗ್ಧರನ್ನಾಗಿಸಿತು.
ಜಿಲ್ಲಾ ಕಸಾಪ ಆಯೋಜಿಸಿದ್ದ 'ಕಾಡಿದ ಕವಿತೆ' ಎಂಬ ಮೂರನೇ ಕಾರ್ಯಕ್ರಮದಲ್ಲಿ ಸಾಹಿತಿಗಳಾದ ಡಾ. ಚಂದ್ರಕಲಾ ಬಿದರಿ ಮತ್ತು ಪ್ರೊ. ವೆಂಕಣ್ಣ ಡೊಣ್ಣೆಗೌಡ್ರು ತಮಗೆ ಕಾಡಿದ ಕವಿತೆಗಳ ಬಗ್ಗೆ ರಸವತ್ತಾಗಿ, ಅರ್ಥವತ್ತಾಗಿ ವಿವರಿಸಿದರು.
ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಚಂದ್ರಶೇಖರ ಕಂಬಾರ ಅವರ ಕವಿತೆ, ಡಾ. ಚಂದ್ರಕಲಾ ಬಿದರಿ ಅವರಿಗೆ ಮತ್ತು ಮಾಜಿ ಸಚಿವೆ ಮತ್ತು ಕವಯತ್ರಿ ಬಿ.ಟಿ. ಲಲಿತಾನಾಯಕ ಅವರ ಕವಿತೆ ಪ್ರೊ. ವೆಂಕಣ್ಣ ಡೊಣ್ಣೆಗೌಡ್ರು ಅವರಿಗೆ ಕಾಡಿದ ರೀತಿಯನ್ನು ಎಳೆ ಎಳೆಯಾಗಿ ಬಿಚ್ಚಿಟ್ಟರು.
ಇದಕ್ಕೂ ಮುನ್ನ ಕಾರ್ಯಕ್ರಮ ಉದ್ಘಾಟಿಸಿದ ಹಂಪಿ ಕನ್ನಡ ವಿವಿ ದೃಶ್ಯಕಲಾ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಶಿವಾನಂದ ಬಂಟನೂರು ಮಾತನಾಡಿ, ಸಮಾಜದಲ್ಲಿರುವ ಭಿನ್ನತೆಗಳು ಸಹೃದಯರನ್ನು ಖಿನ್ನರಾಗಿಸುತ್ತವೆ. ಆ ಖಿನ್ನತೆಯನ್ನು ಕಳೆಯಲು ಕಾವ್ಯ ಮದ್ದು ರೂಪದಲ್ಲಿ ಕೆಲಸ ಮಾಡುತ್ತದೆ. ಆದ್ದರಿಂದ ಕವಿತೆಯೊಂದಿಗೆ ಒಡನಾಟವಿಟ್ಟುಕೊಳ್ಳಬೇಕು ಎಂದು ಹೇಳಿದರು.
ಕಸಾಪ ಜಿಲ್ಲಾಧ್ಯಕ್ಷ ಮಹಿಪಾಲರೆಡ್ಡಿ ಮುನ್ನೂರು ಅಧ್ಯಕ್ಷತೆ ವಹಿಸಿದ್ದರು. ಗೌರವ ಕಾರ್ಯದರ್ಶಿ ಸುರೇಶ ಬಡಿಗೇರ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಗಾಯಕಿ ಗಿರಿಜಾ ಕರ್ಪೂರ ವಚನ ಹೇಳಿದರೆ, ಕವಿತಾ ಆರ್. ಳ್ಳಿ ನಿರೂಪಿಸಿದರು. ಗುಂಡಣ್ಣ ಡಿಗ್ಗಿ ವಂದಿಸಿದರು. ಮಹಾಂತೇಶ ನವಲಕಲ್, ಜ್ಯೋತಿ ಕುಲಕರ್ಣಿ, ಶಿವಯ್ಯ ಸ್ವಾಮಿ ಬಿಬ್ಬಳ್ಳಿ, ಡಾ. ಹನುಮಂತರಾವ ದೊಡ್ಡಮನಿ, ಲಕ್ಷ್ಮೀ ಶಂಕರ ಜೋಶಿ, ಸುಬ್ರಾವ ಕುಲಕರ್ಣಿ, ಶಿವಶಾಂತರೆಡ್ಡಿ, ಶಂಕ್ರಯ್ಯ ಘಂಟಿ, ಡಾ.ಮೀನಾಕ್ಷಿ ಬಾಳಿ, ನಾಮದೇವ ಕಡಕೋಳ, ಲಿಂಗರಾಜ ಶಾಸ್ತ್ರಿ, ಗಣಪತಿ ಕೂಡ್ಲೆ, ಶಂಕರ ಬಿರಾದಾರ, ಸಾಹೇಬಗೌಡ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

