ರಾಡಿ ರಸ್ತೆ!
ಯಾದಗಿರಿ: ನಗರದ ವಾರ್ಡ್ ನಂ.14ರ ಅಸರ್ ಮೊಹಲ್ಲಾದಲ್ಲಿ ವಾರ್ಡ್ನಲ್ಲಿ ಕುಡಿಯುವ ನೀರು ಪೂರೈಕೆ ಪೈಪ್ಗಳು ಹಳೆಯದಾಗಿದ್ದು, ಅಲ್ಲಲ್ಲಿ ಒಡೆದಿದೆ. ಇದರ ಪರಿಣಾಮ ಚರಂಡಿ ನೀರು ಕುಡಿಯುವ ನೀರಿಗೆ ಸೇರುತ್ತಿದೆ. ಮಾತ್ರವಲ್ಲದೆ ಇಡೀ ವಾರ್ಡಿಗೂ ಸರಬರಾಜಾಗುತ್ತಿದೆ.
ಇದರಿಂದಾಗಿ ಸಾರ್ವಜನಿಕರು ರೋಗ ರುಜಿನಗಳಿಗೆ ಈಡಾಗುವ ಸಂಭವವಿದೆ. ಇದರಿಂದ ಜನರು ಆತಂಕಗೊಂಡಿದ್ದಾರೆ. ಈ ಕುರಿತಾಗಿ ನಗರಸಭೆ ಅಧಿಕಾರಿಗಳ ಗಮನಕ್ಕೆ ಅನೇಕ ಬಾರಿ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಕೂಡಲೇ ಜಿಲ್ಲಾಧಿಕಾರಿಗಳು ನಗರಸಭೆಯ ಅಧಿಕಾರಿಗಳಿಗೆ ಆದೇಶ ನೀಡಿ ಶುದ್ಧ ನೀರು ಪೂರೈಸಲು ಮತ್ತು ನಗರದಲ್ಲಿ ಸ್ವಚ್ಛತೆ ಕಾಪಾಡಬೇಕಾಗಿದೆ ಎಂದು ವಾರ್ಡ್ನ ನಿವಾಸಿಗಳು ಒತ್ತಾಯಿಸಿದ್ದಾರೆ. ವಾರ್ಡ್ನಲ್ಲಿನ ಚರಂಡಿ ನೀರು ರಸ್ತೆ ಮೇಲೆ ಹರಿಯುತ್ತಿದ್ದು, ರಸ್ತೆಯನ್ನೆಲ್ಲ ಆವರಿಸಿಕೊಂಡು ರಾಡಿಯಾಗಿದೆ. ವಾರ್ಡಿನ ಕೆಲವೊಂದು ರಸ್ತೆಗಳ ಸ್ಥಿತಿ ಇದೇ ಆಗಿದ್ದು, ಗಬ್ಬು ನಾರುತ್ತಿವೆ.
ಚರಂಡಿ ನೀರು ಪೈಪಿಗೆ: ಚರಂಡಿಯ ಹೊಲಸು ನೀರು ರಸ್ತೆಯ ನಿಂತಿರುವುದರಿಂದ ಸೊಳ್ಳೆಗಳು ಹೆಚ್ಚಾಗಲು ಕಾರಣವಾಗಿದೆ. ಇನ್ನು ರಸ್ತೆ ಮಧ್ಯದಲ್ಲಿರುವ ನೀರು ಸರಬರಾಜು ಮಾಡುವ ಪೈಪ್ ಒಡೆದು ಅದರಲ್ಲಿ ಚರಂಡಿಯ ಹೊಲಸು ನೀರು ಸೇರುತ್ತಿದೆ. ಇದು ಬಡಾವಣೆಯ ಮನೆಗಳ ನಳಗಳಿಗೆ ಸರಬರಾಜು ಆಗುತ್ತಿದೆ. ಇದರ ಬಗ್ಗೆ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಕುಡಿಯುವ ಶುದ್ಧ ನೀರು ಪೂರೈಸಬೇಕು ಮತ್ತು ಸ್ವಚ್ಛತೆ ಕಾಪಾಡಲು ನಗರಸಭೆ ಆದ್ಯತೆ ನೀಡಬೇಕು. ಆದರೆ ವಾರ್ಡಿನಲ್ಲಿ ಯಾವುದೇ ಸ್ವಚ್ಛತೆ ಕಾಣುತ್ತಿಲ್ಲ. ವಾರ್ಡ್ನಲ್ಲಿ ಹೊಸ ಪೈಪ್ಲೈನ್ ಅಳವಡಿಸುವಂತೆ ವಾರ್ಡ್ ನಿವಾಸಿಗಳು ಜಿಲ್ಲಾಧಿಕಾರಿಗಳಿಗೆ ತ್ತಾಯಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

