ಗುಲ್ಬರ್ಗಾ

'ತಂತ್ರಜ್ಞಾನದ ಅರಿವು ಅವಶ್ಯ'

Published On :

ಯಾದಗಿರಿ: ಇವತ್ತಿನ ದಿನಗಳಲ್ಲಿ ಬಹಳಷ್ಟು ತಂತ್ರಜ್ಞಾನ ಬೆಳೆಯುತ್ತಿದ್ದು, ಅದರ ಅರಿವು ನಮ್ಮೆಲ್ಲರಿಗೂ ಅತ್ಯವಶ್ಯಕವಾಗಿದೆ ಎಂದು ಚೇಂಬರ್ ಆಫ್ ಕಾಮರ್ಸ್‌ನ ಜಿಲ್ಲಾಧ್ಯಕ್ಷ ಸಿದ್ದಾರೆಡ್ಡಿ ಬಲಕಲ್ ಹೇಳಿದರು.
ವಾಣಿಜ್ಯ ತೆರಿಗೆ ಇಲಾಖೆ ಯಾದಗಿರಿ ಇವರ ವತಿಯಿಂದ ನಗರದ ಚರ್ಚ್‌ನ ಹಾಲಿನಲ್ಲಿ ಇಲಾಖೆ ಅಧಿಕಾರಿಗಳಿಗೆ ಹಾಗೂ ವರ್ತಕರಿಗಾಗಿ ಹಮ್ಮಿಕೊಂಡಿದ್ದ ಖರೀದಿ ಮತ್ತು ಮಾರಾಟದ ವಿವರಗಳನ್ನು ವಿದ್ಯುದ್ಮಾನದಲ್ಲಿ ಅಳವಡಿಸುವ ಕುರಿತು ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕೈಗಾರಿಕೆ ಮತ್ತು ವ್ಯಾಪಾರ ಅಭಿವೃದ್ಧಿಯಿಂದ ದೇಶ ಅಭಿವೃದ್ಧಿ ಹೊಂದಲು ಸಾಧ್ಯ. ಆದ್ದರಿಂದ ಎಲ್ಲ ವರ್ತಕರು ತಮ್ಮ ಎಲ್ಲ ವ್ಯವಹಾರ ಕಂಪ್ಯೂಟರೀಕರಣ ಮಾಡಬೇಕು. ಇದರಿಂದ ವ್ಯಾಪರದಲ್ಲಿ ಪಾರದರ್ಶಕತೆ ಕಾಪಾಡಿಕೊಂಡು ಹೋಗಲು ಅನೂಕೂಲವಾಗಲಿದೆ ಎಂದು ಹೇಳಿದರು.
ಜಿಲ್ಲಾ ವರ್ತಕರ ಸಂಘದ ಅಧ್ಯಕ್ಷ ಬಾಬು ದೋಖಾ ಮಾತನಾಡಿ, ಲಾಭ, ನಷ್ಟ ಹೆಸರಿಸಲು ವಿದ್ಯುದ್ಮಾನಗಳನ್ನು ಅಳವಡಿಸಿಕೊಳ್ಳಬೇಕು. ಹೊಸ ವಿನ್ಯಾಸಗಳಾದ ಅವುಗಳಿಗೆ ಹೊಂದಿಕೊಳ್ಳುವಲ್ಲಿ ಕೆಲವೊಂದು ಅಡೆತಡೆಗಳು ಆಗಬಹುದು. ಆದ್ದರಿಂದ ಅದನ್ನು ಸರಿದೂಗಿಸಿಕೊಂಡು ಹೋಗಬೇಕಾಗಿದೆ ಎಂದು ಅಧಿಕಾರಿಗಳಿಗೆ ಕಿವಿಮಾತು ಹೇಳಿದರು.
ರೈತರಿಗೆ ಇದರಿಂದ ಹೆಚ್ಚಿನ ರೀತಿಯಲ್ಲಿ ಅನುಕೂಲವಾಗುವ ನಿಟ್ಟಿನಲ್ಲಿ ಹೆಚ್ಚಿನ ರೀತಿಯಲ್ಲಿ ವಿದ್ಯುದ್ಮಾನ ಬೆಳೆಯಬೇಕು. ಸಣ್ಣ ವ್ಯಾಪರಸ್ಥರು ಸಹ ಇದರ ಲಾಭ ಪಡೆದುಕೊಳ್ಳಬೇಕು ಎಂದರು. ಗುಲ್ಬರ್ಗ ವಾಣಿಜ್ಯ ಮತ್ತು ತೆರಿಗೆ ಇಲಾಖೆಯ ಜಂಟಿ ನಿರ್ದೇಶಕ ಸಿದ್ದಪ್ಪ ಮಾತನಾಡಿ, ವರ್ತಕರು ತಮ್ಮಲ್ಲಿ ಖರೀದಿ ಮಾಡುವ ಎಲ್ಲ ವಸ್ತುಗಳ ಮಾಹಿತಿಯನ್ನು ಕಂಪ್ಯೂಟರ್‌ಗಳಲ್ಲಿ ಅಳವಡಿಸುವುದು ಅವಶ್ಯಕ ಮತ್ತು ಅನಿವಾರ್ಯ.
ಆದ್ದರಿಂದ 50 ಲಕ್ಷಕ್ಕಿಂತಲೂ ಹೆಚ್ಚು ಉದ್ದಿಮೆಗಳು ತೆರಿಗೆ ಒಳಪಟ್ಟಿವೆ. ಇದ್ದರಿಂದ ಸಣ್ಣ ವ್ಯಾಪರಸ್ಥರಿಗೆ ಬೇರೆ ರೀತಿಯ ಕಡಿಮೆ ತೆರಿಗೆ ನೀಡಲು ಅವಕಾಶವಿದೆ. ಆದ್ದರಿಂದ ವಿದ್ಯುದ್ಮಾನದ ಅಳವಡಿಕೆ ಅವಶ್ಯವಾಗಿದೆ ಎಂದರು.
ಗುಲ್ಬರ್ಗ ವಾಣಿಜ್ಯ ಮತ್ತು ತೆರಿಗೆ ಇಲಾಖೆಯ ಆಯುಕ್ತೆ ಮೀರಾ ಪಂಡಿತ್, ಯಾದಗಿರಿ ಜಿಲ್ಲಾ ತೆರಿಗೆ ಅಧಿಕಾರಿ ವಿಶ್ವನಾಥ ಸೇರಿ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.