ಶಾಲೆಗಳೇ ಜೀವಂತ ದೇವಾಲಯಗಳು'
ಆಳಂದ: ದೇಶದಲ್ಲಿ ದೇವಾಲಯಗಳು ಎಲ್ಲೆಡೆ ಕಾಣ ಸಿಗುತ್ತವೆ. ಇವುಗಳಿಂದ ಬದಲಾವಣೆ ಸಾಧ್ಯವಿಲ್ಲ. ಆದರೆ ಜನರ ಹಣ ಹಾಗೂ ಸಮಯ ಹಾಳಾಗುವುದು ಮಾತ್ರ ನಿಲ್ಲುತ್ತಿಲ್ಲ. ಇದರಿಂದ ಯಾರ ಉದ್ದಾರವು ಸಾಧ್ಯವಿಲ್ಲ. ಮನುಕುಲದ ಅಭಿವೃದ್ಧಿಗೆ ಶಾಲೆಗಳೇ ನಿಜವಾದ ಜೀವಂತ ದೇವಾಲಯಗಳು ಎಂದು ಉಸ್ತುರಿ ಮಠದ ವಿಶ್ವನಾಥ ಕೋರಣೇಶ್ವರ ಸ್ವಾಮಿ ಹೇಳಿದರು.
ತಾಲೂಕಿನ ಮಟಕಿ ಗ್ರಾಮದ ಬಸವೇಶ್ವರ ಕಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು. ತಾಪಂ ಮಾಜಿ ಉಪಾಧ್ಯಕ್ಷ ಅಶೋಕ ಸಾವಳೇಶ್ವರ ಕಾರ್ಯಕ್ರಮ ಉದ್ಘಾಟಿಸಿದರು. ಸರಸಂಬಾದ ಮಹಾದೇವಪ್ಪ ಪಾಟೀಲ ಆಧುನಿಕ ಶಿಕ್ಷಣದಲ್ಲಿ ಮೌಲ್ಯಗಳ ಕುರಿತು ಉಪನ್ಯಾಸ ನೀಡಿದರು. ಕರ್ನಾಟಕ ವಚನ ಸಾಹಿತ್ಯ ಅಕಾಡೆಮಿ ತಾಲೂಕಾಧ್ಯಕ್ಷ ಅಪ್ಪಾಸಾಹೇಬ ತೀರ್ಥೆ, ಮಟಕಿ ಪ್ರೌಢಶಾಲೆ ಮುಖ್ಯಗುರು ಶ್ರೀಮಂತ ಜಿಡ್ಡೆ, ಸರಸಂಬಾ ಪ್ರೌಢಶಾಲೆ ಮುಖ್ಯಗುರು ಶಿವಕುಮಾರ ಪಾರಶೆಟ್ಟಿ ಮಾತನಾಡಿದರು. ಸಂಸ್ಥೆಯ ಅಧ್ಯಕ್ಷ ಮಂಜುನಾಥ ಬಿರಾದಾರ ಅಧ್ಯಕ್ಷತೆ ವಹಿಸಿದರು. ತಾಪಂ ಸದಸ್ಯೆ ಸೂಜರಬಾಯಿ ಪಾಟೀಲ, ನಿರಗುಡಿ ಗ್ರಾಪಂ ಅಧ್ಯಕ್ಷೆ ಚತುರಾಬಾಯಿ ವಾಡಿ, ಮಾಜಿ ಅಧ್ಯಕ್ಷ ಸುಭಾಷ ಪಾಟೀಲ, ಸದಸ್ಯ ಶಿವಪುತ್ರಪ್ಪ ಬಿರಾದಾರ ಪಾಲ್ಗೊಂಡಿದರು. ಆಸ್ಲಾಂ ಖಾನ್, ಅಬ್ದುಲ ಭಾಷಾ ಅವರನ್ನು ಸನ್ಮಾನಿಸಲಾಯಿತು. ರೇವಪ್ಪ ಮೂಲಗೆ ಸ್ವಾಗತಿಸಿದರು. ವಿಜಯಲಕ್ಷ್ಮೀ ಬಿರಾದಾರ ನಿರೂಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

