ಅಪಘಾತ: 2 ಸಾವು, 7 ಮಂದಿಗೆ ಗಾಯ
ವಾಡಿ/ಶಹಾಬಾದ್: ಪಟ್ಟಣದಿಂದ ನಾಲವಾರದತ್ತ ಹೋಗುತ್ತಿದ್ದ ಕ್ರೂಸರ್‌ಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಇಬ್ಬರು ಮೃತಪಟ್ಟಿದ್ದು, 7 ಜನ ಗಾಯಗೊಂಡಿದ್ದಾರೆ. 2 ಮಕ್ಕಳು ಸೇರಿದಂತೆ ಮೂರು ಜನರ ಸ್ಥಿತಿ ಚಿಂತಾಜನಕವಾಗಿದೆ. ನಾಲವಾರ ಸ್ಟೇಷನ್ ಬಳಿಯ ಕುಂಬಾರಹಳ್ಳಿ ಬಳಿ ನಡೆದ ಘಟನೆಯಲ್ಲಿ ಕರದಳ್ಳಿ ಗ್ರಾಮದ ದ್ಯಾವಮ್ಮ ಬಸಪ್ಪ ತೆಲಗಾರ(50), ಹಲಕರ್ಟಿ ಗ್ರಾಮದ ಜರೀನಾಬೇಗಂ ಬಬಲು(55) ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಮಕ್ಕಳಾದ ಲಕ್ಷ್ಮೀ ಹಲಕರ್ಟಿ(2), ನಾಗರಾಜ ಸೋಮಣ್ಣ ಕುಂಬಾರಹಳ್ಳಿ(10), ವಿಜಯಲಕ್ಷ್ಮೀ ವಿರೇಶ ಹಲಕರ್ಟಿ(36) ತೀವ್ರ ಗಾಯಗೊಂಡಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ. ಲಕ್ಷ್ಮಣ ದಾಸರವಾಡಿ, ರಾಧಾ ಹಿಟ್ಟಿನ, ಸಂತೋಷ ಹಿಟ್ಟಿನ, ಮಲ್ಲಪ್ಪ ಹಲಕರ್ಟಿ ಎಂಬುವವರಿಗೆ ಗಾಯವಾಗಿದೆ. ಲಾರಿ ಚಾಲಕ ಪರಾರಿಯಾಗಿದ್ದಾನೆ. ಘಟನಾ ಸ್ಥಳಕ್ಕೆ ಪಿಐ ಶಂಕರಗೌಡ ಪಾಟೀಲ, ಪಿಎಸ್‌ಐ ನಟರಾಜ ಲಾಡೆ ಭೇಟಿ ನೀಡಿದ್ದು, ಗಾಯಗೊಂಡವರಿಗೆ ವಾಡಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ, ಗುಲ್ಬರ್ಗಕ್ಕೆ ಸಾಗಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

