ಕೊಟ್ಯಂತರ ರು. ಬೆಳೆ ನಷ್ಟ
ಆಳಂದ/ಗುಲ್ಬರ್ಗ: ಸೋಮವಾರ ಮಧ್ಯಾಹ್ನ ಸುರಿದ ಆಲಿಕಲ್ಲು ಮಳೆಯಿಂದ ಹಾಗೂ ಬಿರುಗಾಳಿಗೆ ತಾಲೂಕಿನ ಖಜೂರಿ ವಲಯ ಮತ್ತು ನರೋಣಾ ವಲಯದ ಆಯ್ದ ಭಾಗದಲ್ಲಿ ಬೆಳೆದು ನಿಂತುಕೊಂಡಿದ್ದ ತೋಟಗಾರಿಕೆ ಹಾಗೂ ಖುಷ್ಕಿ ಭೂಮಿಯಲ್ಲಿ ಬೆಳೆಯಲಾದ ಹಲವು ಬೆಳೆಗಳು ಮಣ್ಣು ಪಾಲಾಗಿ ಕೊಟ್ಯಂತರ ರುಪಾಯಿ ಮೌಲ್ಯದ ಬೆಳೆ ನಷ್ಟವಾಗಿದೆ.
ತಾಲೂಕಿನ ನಿರುಗುಡಿ, ಮಟಕಿ, ತೀರ್ಥ, ತಡಕಲ್, ಬೆಳಮಗಿ, ಖಜೂರಿ, ಕಿಣ್ಣಿಸುಲ್ತಾನ, ರುದ್ರವಾಡಿ, ಜಮಗಾ ಆರ್. ಕಣಮುಸ್, ಸೇರಿದಂತೆ ಹತ್ತಾರು ಗ್ರಾಮಗಳಲ್ಲಿನ ದ್ರಾಕ್ಷಿ, ಕಬ್ಬು, ಜೋಳ, ಗೋಧಿ, ಕಡಲೆ, ಕುಸಬೆ ಇನ್ನಿತರ ರೀತಿಯ ಬೆಳೆ ಆಲಿಕಲ್ಲು ಮಳೆಗೆ ನಷ್ಟವಾಗಿದೆ. ತಡಕಲ್ ಗ್ರಾಮದಲ್ಲಿ ಮಾಜಿ ಶಾಸಕ ಸುಭಾಷ ಗುತ್ತೇದಾರಗೆ ಸೇರಿದ 12 ಎಕರೆ, ವಿಜಕುಮಾರ ಬೆಳ್ಳೆ 2 ಎಕರೆ, ದವಲಪ್ಪಾ ನಾಟಿಕರ್ 2 ಎಕರೆ, ಗಪ್ಪುರಸಾಬಗೆ ಸೇರಿದ 2 ಎಕರೆ ದ್ರಾಕ್ಷಿ ಬೆಳದ ಫಸಲು ಉದುರಿ ಹೋಗಿದೆ. ಬೆಳಮ ಗ್ರಾಮದಲ್ಲಿನ ರೈತ ಸುಭಾಷ ಮುರುಡ ಅವರಿಗೆ ಸೇರಿದ 15 ಎಕರೆ ಪಪಾಯಿ ಫಸಲು ಹಾಳಾಗಿ ಹೋಗಿದೆ. ಬಿರುಗಾಳಿಗೆ ಅಲ್ಲಲ್ಲಿ ಗಿಡಮರಗಳು ಉರುಳಿ ಬಿದ್ದಿವೆ.
ಪರಿಹಾರಕ್ಕೆ ಒತ್ತಾಯ: ಕೈಗೆ ಬಂದ ಬೆಳೆ ಆಲಿಕಲ್ಲು ಮಳೆ, ಬಿರುಗಾಳಿಯಿಂದ ಸಂಪೂರ್ಣವಾಗಿ ಹಾನಿಯಾಗಿ ರೈತರ ಗಾಯದ ಮೇಲೆ ಬರೆ ಎಳೆದಂತಾಗಿದೆ. ಸರ್ಕಾರ ಈ ಕೂಡಲೇ ಪರಿಹಾರ ಒದಗಿಸಬೇಕು ಎಂದು ಸಾವಯವ ರೈತ ಸಂಘದ ಅಧ್ಯಕ್ಷ ಬಸವರಾಜ ಪವಾಡಶೆಟ್ಟಿ ಅವರು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ನೆಲಕಚ್ಚಿದ ಜೋಳ, ಗೋಧಿ, ಕುಸುಬಿ ಬೆಳೆ: ಜಿಲ್ಲೆಯಾದ್ಯಂತ ಸೋಮವಾರ ಸಂಜೆ ಬೀಸಿದ ಬಿರುಗಾಳಿ, ಸುರಿದ ಬಿರುಸಿನ ಮಳೆ, ಆಲಿಕಲ್ಲು ಹೊಡೆತಕ್ಕೆ ಜೋಳ, ಗೋಧಿ, ಕುಸುಬಿ ಬೆಳೆ ಸಂಪೂರ್ಣ ಹಾಳಾಗಿದೆ. ಜಿಲ್ಲೆಯ ಎಲ್ಲಾ 7 ತಾಲೂಕುಗಳಲ್ಲಿ ಈ ಹಾನಿ ಸಂಭವಿಸಿದೆ. ಜೋಳ ಕಟಾವು ಹಂತ ತಲುಪಿತ್ತು. ಇದೇ ಸಮಯಕ್ಕೆ ಸರಿಯಾಗಿ ಮಳೆ ಸುರಿದಿದ್ದರಿಂದ ರೈತರ ಪಾಲಿಗೆ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬಂತಾಗಿದೆ. ಒಂದು ಅಂದಾಜಿನ ಪ್ರಕಾರ 50 ಸಾವಿರ ಹೆಕ್ಟರ್ಗೂ ಅಧಿಕ ಜೋಳ ಬಿತ್ತನೆಯಾಗಿತ್ತು. 25 ಸಾವಿರ ಹೆಕ್ಟರ್ನಲ್ಲಿ ಗೋದಿ ಬೆಳೆ ಇತ್ತು. ಅಕಾಲಿಕ ಮಳೆ ಇದೆಲ್ಲವನ್ನು ಹಾಳು ಮಾಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

