'ದಾಸೋಹದಿಂದ ಜೀವನ ಸಾರ್ಥಕ'
ಕ.ಪ್ರ. ವಾರ್ತೆ ಚಿಂಚೋಳಿ ಮಾ.11
ಮನುಷ್ಯ ಜೀವನ ಸಾರ್ಥಕವಾಗಬೇಕಾದರೆ ದಾಸೋಹಕ್ಕೆ ಹೆಚ್ಚಿನ ಮಹತ್ವ ನೀಡಬೇಕು. ಸಜ್ಜನರ ಆಶೀರ್ವಾದ ಪಡೆಯಬೇಕಾದರೆ ಶ್ರದ್ಧೆ ಹಾಗೂ ಭಕ್ತಿಗಳಿರಬೇಕು ಎಂದು ಹಾರಕೂಡ ಚಿಂಚೋಳಿ ಹಿರೇಮಠ ಸಂಸ್ಥಾನ ಪೀಠಾಧಿಪತಿ ಡಾ. ಚೆನ್ನವೀರ ಶಿವಾಚಾರ್ಯರು ನುಡಿದರು.
ಪಟ್ಟಣದ ಲಿಂ. ಸದ್ಗುರು ಚೆನ್ನಬಸವ ಶಿವಯೋಗಿಗಳ 63ನೇ ಜಾತ್ರಾ ಮಹೋತ್ಸವ ಶಿವಾನುಭವ ಚಿಂತನಗೋಷ್ಠಿ ಸಮಾರಂಭದಲ್ಲಿ ಆಶೀರ್ವಚನ ನೀಡಿ, ಕಲ್ಯಾಣ ನಾಡಿನಲ್ಲಿ ಅನೇಕ ವಿಭೂತಿ ಪುರುಷರು ಬಾಳಿ ಬೆಳಗಿದ್ದಾರೆ. ಚೆನ್ನಬಸವ ಶಿವಯೋಗಿಗಳು ಸಂಸ್ಕೃತ ಭಾಷಾ ಪಂಡಿತರಾಗಿದ್ದರು ಎಂದರು.
ಬೀದರ್ ಜಿಲ್ಲೆಯ ಹುಲಸೂರು ಗುರು ಬಸವೇಶ್ವರ ಸಂಸ್ಥಾನ ಮಠ ಪೀಠಾಧಿಪತಿ ಶಿವಾನಂದ ಸ್ವಾಮೀಜಿ ನೇತೃತ್ವ ವಹಿಸಿ ಮಾತನಾಡಿದರು. ಹಿರೇನಾಗಾಂವ ಜಯಶಾಂತಲಿಂಗ ಸ್ವಾಮೀಜಿ, ಶಾಸಕ ಡಾ. ಉಮೇಶ ಜಾಧವ್, ಮಾಜಿ ಸಚಿವ ವೈಜನಾಥ ಪಾಟೀಲ್, ಗೋಪಾಲರಾವ ಕಟ್ಟಿಮನಿ ಮಾತನಾಡಿದರು.
ಸೋನ್ಯಾಲಗಿರಿ ಪರ್ವತಲಿಂಗ ಮಹಾರಾಜ, ಸೈಯದ್ ಅಕಬರ್ ಹುಸೇನಿ ಸಜ್ಜಾದೇ ನಶಿನ್ ಬಡಿದರ್ಗಾ, ಜಿಪಂ ಸದಸ್ಯ ಸಂಜೀವನ್ ಯಾಕಾಪುರ, ಚನ್ನಬಸಪ್ಪ ನಾವದಗಿ, ಶಾಮರಾವ ಸೀಳಿನ್ ಪ್ರೊ. ಚಂದ್ರಶೇಖರ ಬುಗ್ಗಿ, ಸುಭಾಷ್ ಸೀಳಿನ್, ಅಜಿತ ಪಾಟೀಲ್, ನಾಗರಾಜ ಕಲ್ಬುರ್ಗಿ ,ಬಸವರಾಜ ಮಲಿ, ಬೋಗಲಿಂಗಪ್ಪ ಬಬಲಾದ, ರೇವಣಸಿದ್ಧ ಮಜ್ಜಗಿ, ರಾಜಶೇಖರ ಮಜ್ಜಗಿ, ಶ್ರೀಕಾಂತ, ಗೌತಮ್ ಪಾಟೀಲ್ ಇದ್ದರು.
ಸಂತೋಷ ಕಡಗದ ಸ್ವಾಗತಿಸಿದರು. ಜಗನ್ನಾಥ ಸೇರಿಕಾರ ನಿರೂಪಿಸಿದರು. ನಾಗೇಶ ಭದ್ರಶೆಟ್ಟಿ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

