ಶೇ.100 ಮತದಾನ: ಜಾಗೃತಿ ಮೂಡಿಸಿ
ಚಿಂಚೋಳಿ: ಬೀದರ್ ಲೋಕಸಭೆ ಮತಕ್ಷೇತ್ರಕ್ಕೆ ಏ.17ರಂದು ಮತದಾನ ನಡೆಯಲಿದ್ದು ಶೇ.100ರಷ್ಟು ಮತದಾನವಾಗಲು ಮತದಾರರಲ್ಲಿ ಜಾಗೃತಿ ಮೂಡಿಸಬೇಕೆಂದು ಚಿಂಚೋಳಿ ಮೀಸಲು ವಿಧಾನಸಭಾ ಮತಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ಎಂ.ಮಂಜುನಾಥ ತಿಳಿಸಿದರು.
ಚಂದಾಪುರ ಮಿನಿ ವಿಧಾನಸೌಧ ಸಭಾಂಗಣದಲ್ಲಿ ಬುಧವಾರ ಜರುಗಿದ ತಾಲೂಕು ಮಟ್ಟದ ಹಿರಿಯ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ಮತದಾನ ಪೂರ್ವದಲ್ಲಿ ಮತದಾನ ಕೇಂದ್ರದಲ್ಲಿ ವಿದ್ಯುತ್ ದೀಪ, ಕುಡಿವ ನೀರು, ಕಿಟಕಿ, ಬಾಗಿಲು ವ್ಯವಸ್ಥೆ ಮಾಡಿಕೊಂಡು ಮುಂಜಾಗ್ರತಾ ಕ್ರಮ ಕೈಕೊಳ್ಳಬೇಕು ಎಂದರು.
ಚುನಾವಣೆ ಪ್ರಕ್ರಿಯೆಯ ಸಂಪೂರ್ಣ ವಿಡಿಯೋ ಚಿತ್ರಣಗೊಳಿಸಬೇಕು, ನಿರ್ಭೀತಿಯಿಂದ, ನಿರ್ಭಯವಾಗಿ ಮತ ಚಲಾಯಿಸುವಂತೆ ಅವರಲ್ಲಿ ವಿಶ್ವಾಸ ಮೂಡಿಸಬೇಕು. ಮತದಾನ ವೇಳೆ ದಬ್ಬಾಳಿಕೆ, ದೌರ್ಜನ್ಯ ನಡೆಯದಂತೆ ನಿಗಾ ವಹಿಸಬೇಕು. ಯಾವದೇ ರಾಜಕೀಯ ಪಕ್ಷಗಳ ಸದಸ್ಯರನ್ನು ಮತದಾನ ಕೇಂದ್ರದಿಂದ 100 ಮೀಟರ್ ದೂರವಿರುವಂತೆ ಎಚ್ಚರಿಸಬೇಕು. ಮತದಾನ ಅವಧಿ ಮುಗಿಯಲು ಬಂದರೆ ಮತದಾನ ಕೇಂದ್ರದಲ್ಲಿ ಹಾಜರಿದ್ದ ಮತದಾರನಿಗೆ ಮತಚಲಾಯಿಸಲು ಅವಕಾಶ ನೀಡಬೇಕೆಂದು ಚುನಾವಣಾ ಆಯೋಗದ ನಿಯಮಗಳ ಬಗ್ಗೆ ಚಿಂಚೋಳಿ ಮೀಸಲು ವಿಧಾನಸಭಾ ಮತಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ಎಂ. ಮಂಜುನಾಥ ವಿವರಿಸಿದರು.
ಚುನಾವಣಾ ಸಂಪನ್ಮೂಲ ವ್ಯಕ್ತಿ ಉಪನ್ಯಾಸಕ ಮಲ್ಲಿಕಾರ್ಜುನ ಪಾಲಾಮೂರ ಚುನಾವಣೆಯ ಕುರಿತು ಸಭೆಯಲ್ಲಿ ಭಾಗವಹಿಸಿದ ಅಧಿಕಾರಿಗಳಿಗೆ ವಿಡಿಯೋ ಚಿತ್ರಣ ಮೂಲಕ ಮಾಹಿತಿ ನೀಡಿದರು. ಸಭೆಯಲ್ಲಿ ತಹಸೀಲ್ದಾರ್ ಮೋಹನ ಜೋಶಿ, ಡಾ. ಸುಭಾಶ ಟಕ್ಕಳಕಿ, ರೇವಣಸಿದ್ದಪ್ಪ ಹಾಗರಗಿ, ವಿಜಯಕುಮಾರ ಪುಲಾರಿ, ರಾಜಶೇಖರ ಗಾರಂಪಳ್ಳಿ, ಮನೋಜಕುಮಾರ ಗುರಿಕಾರ, ದೇವೇಂದ್ರಪ್ಪ, ಅಧಿಕಾರಿಗಳು ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

