ಗುಲ್ಬರ್ಗಾ

5.20 ಲಕ್ಷ ಮೌಲ್ಯದ ಚಿನ್ನ ಕಳವು

Published On :

ಗುಲ್ಬರ್ಗ: ಇಲ್ಲಿನ ಸಂಗಮೇಶ್ವರ ಕಾಲೋನಿ ನಿವಾಸಿಗಳಾದ ಡಾ. ರಶ್ಮಿ ನಾಗಲೀಕರ್ ಅವರ ವೆನಿಟಿ ಬ್ಯಾಗ್‌ನಲ್ಲಿದ್ದ 18 ತೊಲೆ ತೂಕದ, 5.20 ಲಕ್ಷ ಮೌಲ್ಯದ ಚಿನ್ನಾಭರಣ ಕಳವಾಗಿವೆ.
ಇವರು ಬಳ್ಳಾರಿಯಿಂದ ಗುಲ್ಬರ್ಗಕ್ಕೆ ಬರುವಾಗ ಈ ಘಟನೆ ಸಂಭವಿಸಿದೆ. ತಾವು ಕುಳಿತಿದ್ದ ಬಸ್ಸಿನ ಕಾಲಡಿಯಲ್ಲಿ ಬೆಲೆಬಾಳುವ ಆಭರಣಗಳಿರುವ ಬ್ಯಾಗ್ ಅವರು ಇಟ್ಟುಕೊಂಡಿದ್ದರು.
ತಾವು ಕುಳಿತ ಸೀಟಿನ ಆಚೀಚೆ ಕುಳಿತವರ ವಯಸ್ಸು ಹಾಗೂ ಮುಖ ಚಹರೆ ಮಾಹಿತಿ ನೀಡಿ ತಮ್ಮ ವ್ಯಾನಿಟಿ ಬ್ಯಾಗ್ ಹಾಗೆ ಇದ್ದು, ಅದರೊಳಗಿನ ಲಕ್ಷಾಂತರ ರು. ಚಿನ್ನಾಭರಣ ಕಳವು ಮಾಡಲಾಗಿದೆ ಎಂದು ನೀಡಿರುವ ದೂರಿನ ಹಿನ್ನೆಲೆಯಲ್ಲಿ ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಡಾ. ರಶ್ಮೀ ಇವರು ಬಳ್ಳಾರಿಯಿಂದ ಗುಲ್ಬರ್ಗಕ್ಕೆ ಸಾರಿಗೆ ಸಂಸ್ಥೆಯ ಸುಹಾಸ್ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದರು ಎಂದು ದೂರಿನಲ್ಲಿ ತಿಳಿಸಿದ್ದಾರೆ. ತಮ್ಮ ಹಿಂದಿನ ಸೀಟಿನಲ್ಲಿದ್ದವರಿಬ್ಬರು ಲಿಂಗಸ್ಗೂರುನಲ್ಲಿ ಇಳಿದರೆ, ಪಕ್ಕ ಕುಳಿತಿದ್ದವರೂ ಸಹ ಮಾರ್ಗಮಧ್ಯೆ ಇಳಿದು ಹೋಗಿದ್ದಾರೆ. ಹೀಗಾಗಿ ಇಳಿದು ಹೋದವರಲ್ಲೇ ಚಿನ್ನಾಭರಣ ಕಳವು ಮಾಡಿರುವ ಶಂಕೆ ಡಾ. ರಶ್ಮೀ ವ್ಯಕ್ತಪಡಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.