ಗುಲ್ಬರ್ಗಾ

ವಾಯುಮಾಲಿನ್ಯ ನಿಯಂತ್ರಣಕ್ಕೆ ತಜ್ಞರ ಸಮಿತಿ ರಚಿಸಿ: ಗಾಲಾ

Published On :

ಗುಲ್ಬರ್ಗ: ವಾಯು ಮಾಲಿನ್ಯದ ಕೆಟ್ಟ ಪರಿಣಾಮ ನಿಯಂತ್ರಣಕ್ಕೆ ಮಾರ್ಗೋಪಾಯ ಕಂಡು ಹಿಡಿಯಲು ತಜ್ಞರ ಸಮಿತಿ ನೇಮಿಸುವ ಅಗತ್ಯವಿದೆ. ಈ ಸಮಿತಿಗೆ ಸಂವಿಧಾನದತ್ತ ಹೆಚ್ಚಿನ ಅಧಿಕಾರ ನೀಡಬೇಕೆಂದು ಹೈ.ಕ. ಪರಿಸರ ಪ್ರಜ್ಞೆ ಮತ್ತು ಸಂರಕ್ಷಣಾ ಸಂಘಟನೆ ಅಧ್ಯಕ್ಷ ದೀಪಕ ಗಾಲಾ ಸಲಹೆ ನೀಡಿದರು.
ನಗರದ ಪಿಡಿಎ ತಾಂತ್ರಿಕ ಮಹಾವಿದ್ಯಾಲಯದ ಸ್ಯಾಕ್ ಸಭಾಂಗಣದಲ್ಲಿ ಸಾರಿಗೆ ಇಲಾಖೆ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ಪಿಡಿಎ ಇಂಜಿನಿಯರಿಂಗ್ ಕಾಲೇಜು ಸಂಯುಕ್ತಾಶ್ರಮದಲ್ಲಿ ಏರ್ಪಡಿಸಿದ್ದ ನಗರ ಪ್ರದೇಶಗಳ ವಾಯು ಮಾಲಿನ್ಯದಿಂದಾಗುವ ಪರಿಣಾಮಗಳು ಹಾಗೂ ನಿಯಂತ್ರಣ ವಿಷಯ ಕುರಿತಾದ ರಾಜ್ಯ ಮಟ್ಟದ ಕಾರ್ಯಗಾರದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
ಶೇ.70ರಷ್ಟು ವಾಯುಮಾಲಿನ್ಯ: ವಿಶ್ವ ಆರೋಗ್ಯ ಸಂಸ್ಥೆ ನೀಡಿದ ವರದಿಯಂತೆ ವಾರ್ಷಿಕ 71 ಲಕ್ಷ ಜನ ವಾಯು ಮಾಲಿನ್ಯದಿಂದ ಮೃತಪಡುತ್ತಿದ್ದಾರೆ. ಇದರಲ್ಲಿ ಏಶಿಯಾ ಖಂಡದ ದೇಶಗಳಾದ ಭಾರತ, ಚೀನಾ, ಇಂಡೋನೇಷಿಯಾ ಮೊದಲಾದ ದೇಶಕ್ಕೆ ಸೇರಿದವರು. ಒಂದು ಅಧ್ಯಯಯನದ ಪ್ರಕಾರ ದೆಹಲಿ ಚೆನೈ ಮೊದಲಾದ ಮೆಟ್ರೋ ನಗರದಲ್ಲಿ ವಾಹನಗಳ ಮೂಲಕ ಶೇ.70ರಷ್ಟು ವಾಯುಮಾಲಿನ್ಯವಾಗುತ್ತಿದೆ ಎಂದರು.
ಕೆಟ್ಟ ರಸ್ತೆ, ವಾಹನ ದಟ್ಟಣೆ: ಜನಸಂಖ್ಯೆ ನಿಯಂತ್ರಣದಂತೆ ಮುಂದೆ ವಾಹನಗಳ ಸಂಖ್ಯೆಯನ್ನು ನಿಯಂತ್ರಿಸಲು ಕಾನೂನು ಜಾರಿಗೆ ಬಂದರೆ ಅಚ್ಚರಿಯಿಲ್ಲ. ಕೆಟ್ಟ ರಸ್ತೆ, ವಾಹನ ದಟ್ಟಣೆ ವಾಯು ಮಾಲಿನ್ಯಕ್ಕೆ ಕಾರಣವಾಗುತ್ತಿದೆ. ಗುಲ್ಬರ್ಗ ನಗರದ ವಾಹನ ದಟ್ಟಣೆಯ ರಸ್ತೆಗಳಲ್ಲಿ ವಾಯು ಮಾಲಿನ್ಯ ತಪಾಸಣೆ ಯಂತ್ರ ಅಳವಡಿಸಬೇಕು. ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿ ಖಾಲಿ ಇರುವ ಹುದ್ದೆ ಭರ್ತಿ ಮಾಡುವ ಅವಶ್ಯಕತೆ ಇದೆ. ಇಲಾಖೆಗಳ ಸಮನ್ವಯ ಕೊರತೆಯಿಂದ ವಾಯು ಮಾಲಿನ್ಯ ನಿಯಂತ್ರಣಕ್ಕೆ ಕಡಿವಾಣ ಹಾಕಲು ಆಗುತ್ತಿಲ್ಲ ಎಂದು ದೀಪಕ ಗಾಲಾ ಅಭಿಪ್ರಾಯ ಪಟ್ಟರು.
ಸಾರಿಗೆ ಇಲಾಖೆ ಆಯುಕ್ತ ಕೆ.ಅಮರನಾರಾಯಣ ಉದ್ಘಾಟಿಸಿದರು. ಅಪರ ಸಾರಿಗೆ ಆಯುಕ್ತ ಸಿ.ಆರ್. ಮೊಹ್ಮದ್ ಸುಲೇಮಾನ್, ಪಿಡಿಎ ಕಾಲೇಜು ಪ್ರಾಚಾರ್ಯ ಎಸ್.ಎಸ್. ಹೆಬ್ಬಾಳ, ಉಪಸಾರಿಗೆ ಆಯುಕ್ತ ಶಿವರಾಜ ಪಾಟೀಲ್, ಅಭಿಮನ್ಯು ಹೊಸನಗರಿ, ಡಾ. ಸಿ.ಎಸ್. ಬಿರಾದಾರ್, ಎಸ್.ಆರ್. ಮೀಸೆ, ದಿವಾಕರ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.