ಗುಲ್ಬರ್ಗಾ

ಮೀಸಲು ಬದಲು ಸಾಧ್ಯತೆ

Published On :

ಗುರುಮಠಕಲ್  ಮೇ 8
ಸರ್ಕಾರ ಜಿಪಂ ಅಧ್ಯಕ್ಷ- ಉಪಾಧ್ಯಕ್ಷರ ಮೀಸಲಾತಿ ಪಟ್ಟಿಯನ್ನು ಪರಿಷ್ಕರಿಸಿ ನೂತನ ಪಟ್ಟಿ ಬಿಡುಗಡೆ ಮಾಡಿದ ಬೆನ್ನಲ್ಲೇ ಇದೀಗ ಯಾದಗಿರಿ ತಾಲೂಕು ಪಂಚಾಯತಿಯ ಮೇಲೆ  ಮೀಸಲಾತಿ ಬದಲಾವಣೆಯ ಕರಿ ನೆರಳು ಬಿದ್ದಿದೆ.
  2011ರಲ್ಲಿ ರಚಿತವಾದ ಯಾದಗಿರಿಯ ತಾಪಂ 3ನೇ ಅವಧಿಗೆ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆಗೆ ಸರ್ಕಾರ ಇತ್ತೀಚೆಗೆ ಮೀಸಲಾತಿಯನ್ನು ಪ್ರಕಟಿಸಿತ್ತು ಅದರೆ ಪ್ರಕಟಿತ ಮೀಸಲಾತಿಯೂ ಪರಿಷ್ಕೃತ ಪಟ್ಟಿಯಲ್ಲದ ಕಾರಣ ಇದೀಗ ಮೀಸಲಾತಿಯಲ್ಲಿ ಬದಲಾವಣೆ ಅಗುವ ಅತಂಕ ಸದಸ್ಯರಲ್ಲಿ ಉಂಟಾಗಿದೆ.
ಕಾರಣ ಏನು? ಇದೀಗ ಪ್ರಕಟವಾದ ಮೀಸಲಾತಿ ಪಟ್ಟಿಯಲ್ಲಿ ಉಪಾಧ್ಯಕ್ಷ ಸ್ಥಾನದ ಮೀಸಲಾತಿಯೂ ತಪ್ಪಾಗಿ ಬಂದಿರುವುದು ಹಾಗೂ ತಾಲೂಕಾ ಪಂಚಾಯತಿಯ ಕೆಲ ಸದಸ್ಯರುಗಳು ಮೀಸಲಾತಿಯ ಬದಲಾವಣೆಗೆ ಪ್ರಯತ್ನಗಳನ್ನು ನಡೆಸುತ್ತಿರುವುದು ಅತಂಕಕ್ಕೆ ಪ್ರಮುಖ ಕಾರಣವಾಗಿದೆ.
 ಕೊನೆಯ ಅವಧಿಗೆ ಪ್ರಕಟವಾದ ಮೀಸಲಾತಿಯ ಪ್ರಕಾರ ಅಧ್ಯಕ್ಷ ಸ್ಥಾನ ಅನುಸೂತಿ ಜಾತಿಗೆ, ಉಪಾಧ್ಯಕ್ಷ ಸ್ಥಾನವು ಹಿಂದುಳಿದ ವರ್ಗ(ಬಿ) ಮಹಿಳೆಗೆ ಮೀಸಲಾಗಿದೆ.
ಯಾರೂ ಇಲ್ಲ: ತಾಪಂ.ಗೆ ಚುನಾಯಿತರಾದ 26 ಸದಸ್ಯರಲ್ಲಿ ಹಿಂದುಳಿದ ವರ್ಗ(ಬಿ) ಮಹಿಳೆ ಮೀಸಲಾತಿಯಿಂದ ಗೆಲುವು ಸಾಧಿಸಿದವರು ಯಾರೂ ಇಲ್ಲದಿರುವ ಕಾರಣ ಅದನ್ನು ಬದಲಾಯಿಸಲು ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ.
  ಈ ಸಂಬಂಧ ಉಪಾಧ್ಯಕ್ಷ ಸ್ಥಾನದ ಮೀಸಲಾತಿ ಬದಲಾವಣೆ ಮಾಡುವುದು ಖಚಿತವಾದ ಹಿನ್ನೆಲೆಯಲ್ಲಿ ಕೆಲ ಸದಸ್ಯರುಗಳು ಸರ್ಕಾರದ ಮೇಲೆ ಒತ್ತಡ ಹೇರುತ್ತ ಅಧ್ಯಕ್ಷ ಸ್ಥಾನದ ಮೀಸಲಾತಿಯ ಬದಲಾವಣೆಗೆ ಪ್ರಯತ್ನ ನಡೆಸುತ್ತಿದ್ದಾರೆ. ಅಧ್ಯಕ್ಷ ಸ್ಥಾನದ ಕನಸು ಕಾಣುತ್ತಿರುವವರಿಗೆ ಇದು ನುಂಗಲಾದ ತುತ್ತಾಗಿ ಪರಿಣಮಿಸಿದೆ.
ಹೋರಾಟಕ್ಕೆ ಸಿದ್ಧ: ತಾಲೂಕಾ ಪಂಚಾಯತಿ ರಚನೆಯಾದ ನಂತರದಿಂದ ಇಲ್ಲಿಯವರೆಗೆ ಅನುಸೂಚಿತ ಜಾತಿಗೆ ಹೆಚ್ಚಿನ ಪ್ರಾಶಸ್ತ್ಯ ದೊರೆತಿಲ್ಲ. ಈ ಹಿನ್ನೆಲೆಯಲ್ಲಿ ಇದೀಗ ಬಂದಿರುವ ಮೀಸಲಾತಿಯನ್ನು ಯಾವುದೇ ಕಾರಣಕ್ಕೂ ಬದಲಾವಣೆ ಮಾಡುವ ನಿರ್ಧಾರವನ್ನು ಸರ್ಕಾರ ಕೈಗೊಳ್ಳಬಾರದು. ಈಗಾಗಲೇ ಕೆಲವರು ಮೀಸಲಾತಿ ಬದಲಾವಣೆಯ ಸಂಬಂಧ ಪ್ರಯತ್ನಗಳನ್ನು ನಡೆಸಿ ಸರಕಾರದ ಮೇಲೆ ಒತ್ತಡ ತರುತ್ತಿದ್ದಾರೆ. ಇದಕ್ಕೆ ಸರ್ಕಾರ ಮನ್ನಣೆ ನೀಡದೆ ಅನುಸೂಚಿತ ಜಾತಿಗೆ ಮೀಸಲಾದ ಸ್ಥಾನವನ್ನು ಹಾಗೆಯೇ ಮುಂದುವರಿಸಲು ಆನೇಕ ಸಂಘಟನೆಗಳು ಸರ್ಕಾರಕ್ಕೆ ಮನವಿ ಮಾಡಿವೆ. ಒಂದು ವೇಳೆ ಬದಲಾವಣೆಯ ನಿರ್ಣಯವನ್ನು ಕೈಬಿಡದಿದ್ದರೆ ಹೋರಾಟ ಮಾಡಲಾಗುವುದೆಂದು ದಲಿತ ಸಂಘಟನೆಗಳು ಎಚ್ಚರಿಕೆ ನೀಡಿವೆ.
ಒಟ್ಟಾರೆ ಯಾದಗಿರಿ ತಾಪಂ 3ನೇ ಅವಧಿಗೆ ನಡೆಯಲಿರುವ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆಯ ಮೀಸಲಾತಿಯ ವಿಷಯವು ಎಲ್ಲೆಡೆಯಲ್ಲಿ ಚರ್ಚೆಯಲ್ಲಿದ್ದು ಮೀಸಲಾತಿಯ ಬದಲಾವಣೆ ಹಾಗೂ ಅದರ ಪರಿಣಾಮದ ಬಗ್ಗೆ ಕಾದು ನೋಡಬೇಕಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.