ಮಹಿಳಾ ಕಾಲೇಜು ಆರಂಭಿಸಿ
ಕ.ಪ್ರ. ವಾರ್ತೆ ್ಣ ಯಾದಗಿರಿ ್ಣ ಮೇ 12
ಸರ್ಕಾರಿ ಮಹಿಳಾ ಪದವಿ ಮಹಾ ವಿದ್ಯಾಲಯವನ್ನು ಜಿಲ್ಲಾ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲೇ ಆರಂಭಿಸುವಂತೆ ಒತ್ತಾಯಿಸಿ ಎಐಡಿಎಸ್ಒ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದೆ.
ಸೂಕ್ತವಲ್ಲದ ಸ್ಥಳದಲ್ಲಿ ಪದವಿ ಕಾಲೇಜು ಆರಂಭಿಸಲು ಮಾಡಿರುವ ನಿರ್ಧಾರವನ್ನು ಕೈಬಿಟ್ಟು ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಕಾಲೇಜು ಆರಂಭಿಸಬೇಕೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ. ನೊಡಲ್ ಅಧಿಕಾರಿ ಮಲ್ಲಾರೆಡ್ಡಿ ಪಾಟೀಲ್ರ ವರದಿ ಪ್ರಕಾರ ನಗರದ ಯಾವ ಶಾಲಾ-ಕಾಲೇಜುಗಳಲ್ಲಿ ಸ್ಥಳಾವಕಾಶ ಇಲ್ಲ ಎಂದು ತಿಳಿದು ಬಂದಿದೆ.
ಕೋಲಿವಾಡದಲ್ಲಿ ಕಾಲೇಜು:ಅದರಿಂದಾಗಿ ಪದವಿ ಕಾಲೇಜನ್ನು ಸರ್ಕಾರಿ ಪ್ರಾಥಮಿಕ ಶಾಲೆ ಕೋಲಿವಾಡದ ಆವರಣದಲ್ಲಿ ಪ್ರಾರಂಭಿಸಬೇಕೆಂದು ಪಾಟೀಲ್ರ ನೇತೃತ್ವದ ಸಭೆ ನಿರ್ಣಯಿಸಿತು ಎನ್ನಲಾಗಿದೆ. ಆದರೆ ಸಭೆ ನಿರ್ಣಯಿಸಿದ ಆ ಸ್ಥಳ ಮಹಿಳಾ ಪದವಿ ಕಾಲೇಜಿಗೆ ಸೂಕ್ತಸ್ಥಳವಲ್ಲ. ಆದ್ದರಿಂದ ಅಲ್ಲಿ ಕಾಲೇಜು ಆರಂಭಿಸುವ ನಿರ್ಧಾರವನ್ನು ಈ ಕೂಡಲೆ ಬದಲಾಯಿಸಿ ನಗರದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಈಗಾಗಲೇ ಖಾಲಿಯಿರುವ ಯಾವುದಾದರೊಂದು ಕಟ್ಟಡದಲ್ಲಿ ಆರಂಭಿಸಬೇಕೆಂದು ಎಐಡಿಎಸ್ಒ ಆಗ್ರಹಿಸಿದೆ.
ಸೂಕ್ತ ಕ್ರಮಕ್ಕೆ ಆಗ್ರಹ: ಜಿಲ್ಲೆಯ ವಿದ್ಯಾರ್ಥಿನಿಯರು ಮತ್ತು ಪಾಲಕರ ಬಯಕೆಯಂತೆ ತಾವು ಮಧ್ಯ ಪ್ರವೇಶ ಮಾಡಿದ್ದು, ನೂತನ ಕಾಲೇಜನ್ನು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲೆ ಆರಂಭಿಸಲು ಎಲ್ಲ ರೀತಿಯ ಕ್ರಮ ಕೈಗೊಂಡು ವಿದ್ಯಾರ್ಥಿನಿಯರಿಗೆ ಸೂಕ್ತ ಶಿಕ್ಷಣದ ವಾತಾವರಣ ನಿರ್ಮಿಸಿಕೊಡಬೇಕು. ಜತೆಗೆ ಸೂಕ್ತ ಭದ್ರತೆ ಒದಗಿಸಿ ಕೊಡುವುದರ ಮೂಲಕ ಹೆಚ್ಚು ಬಡ ವಿದ್ಯಾರ್ಥಿನಿಯರು ಪ್ರವೇಶ ಪಡೆದು ವ್ಯಾಸಂಗ ಮಾಡುವಂತಾಗಲು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಎಐಡಿಎಸ್ಒ ಮನವಿ ಮಾಡಿದೆ.
ನಿಯೋಗದಲ್ಲಿ ಎಐಡಿಎಸ್ಒ ಅಧ್ಯಕ್ಷ ಗೌರಮ್ಮ ಸಿ.ಕೆ. ಮತ್ತು ಕಾರ್ಯದರ್ಶಿ ವಿಜಯಕುಮಾರ್ ಕೆ. ರಾಮು ಬಿ.ಎನ್. ಸೈದಪ್ಪ, ಮರಿಲಿಂಗಪ್ಪ, ಮತ್ತಿತರರು ಇದ್ದರು.
ಭರವಸೆ: ಜಿಲ್ಲಾಧಿಕಾರಿ ಎಫ್.ಆರ್. ಜಾಮದಾರ್ ಅವರು ಈ ಕುರಿತು ಅಪರ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಮತ್ತು ವಿವಿಧ ಶಾಲಾ-ಕಾಲೇಜುಗಳ ಮುಖ್ಯಸ್ಥರ ಸಭೆಯನ್ನು ಶೀಘ್ರದಲ್ಲೇ ಕರೆದು ಸ್ಥಳವನ್ನು ನಿಗದಿ ಮಾಡಲಾಗುವುದು ಮತ್ತು ಆ ಸಭೆಗೆ ಎಐಡಿಎಸ್ಒ ಮುಖಂಡರನ್ನೂ ಆಹ್ವಾನಿಸಲಾಗುವುದೆಂದು ಭರವಸೆ ನೀಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

