'ಇ-ಫೈಲ್' ಪದ್ಧತಿಗೆ ಮನವಿ
ಗುಲ್ಬರ್ಗ: ವ್ಯಾಪಾರಸ್ಥರು ತಮ್ಮ ಖರೀದಿ ಮತ್ತು ಮಾರಾಟದ ವಿವರಗಳನ್ನು ಮೇ ತಿಂಗಳಿಂದ ಇ-ಫೈಲ್ (ಗಣಕೀಕೃತ ನೋಂದಣಿ) ಪದ್ದತಿಯಲ್ಲಿ ನೀಡಬೇಕೆಂಬ ಆದೇಶವನ್ನು ಮುಂದುಡಲು ಹೈದರಾಬಾದ್ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದೆ.
ಐವತ್ತು ಲಕ್ಷ ಅಥವಾ ಐವತ್ತು ಲಕ್ಷಕ್ಕಿಂತ ಹೆಚ್ಚು ವಹಿವಾಟು ನಡೆಸುವ ವ್ಯಾಪಾರಸ್ಥರು ತಮ್ಮ ಖರೀದಿ ಮತ್ತು ಮಾರಾಟದ ವಿವರಗಳನ್ನು ನೋಂದಣಿ ಮಾಡಿಕೊಳ್ಳುವುದಲ್ಲದೇ ಫಾರ್ಮ್ ವ್ಯಾಟ್ ನೂರರಲ್ಲಿ ವಿವರಗಳನ್ನು ಜೂನ್ 20 ರೊಳಗಾಗಿ ಸಲ್ಲಿಸಬೇಕೆಂದು ಆದೇಶಸಲಾಗಿದೆ. ಈ ಸನ್ನಿವೇಶದಲ್ಲಿ ವ್ಯಾಪಾರಸ್ಥರು ಎದುರಿಸುವ ಸಮಸ್ಯೆಗಳನ್ನು ಪರಿಗಣನೆಗೆ ತೆಗೆದುಕೊಳ್ಳದೇ ಹಾಗೂ ಗ್ರಾಮೀಣ ಪ್ರದೇಶದಲ್ಲಿರುವ ವರ್ತಕರೊಂದಿಗೆ ಸಮಾಲೋಚಿಸಲಾರದೆ ಆದೇಶ ಹೊರಡಿಸಿರುವುದು ಸರಿಯಲ್ಲವೆಂದು ಅಧ್ಯಕ್ಷ ರಾಧಾಕೃಷ್ಣ ಎಸ್. ರಘೋಜಿ ತಿಳಿಸಿದ್ದಾರೆ.
ವಾಣಿಜ್ಯ ತೆರಿಗೆ ಇಲಾಖೆಯು ಈ ವಿಷಯದ ಬಗ್ಗೆ ಗ್ರಾಮೀಣ ಪ್ರದೇಶದಲ್ಲಿ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ನಡೆಸಿಲ್ಲ ಹಾಗೂ ವಾಣಿಜ್ಯ ಸಂಘದ ಸದಸ್ಯರಿಗೆ ಹೊಸ ಆದೇಶ ಅರಿತುಕೊಳ್ಳಲು ಸಾಕಷ್ಟು ಸಮಯಾವಕಾಶ ನೀಡಿಲ್ಲ. ಪ್ರಚಲಿತವಿರುವ ಪದ್ಧತಿಯನ್ನು ಸರಳೀಕರಣಗೊಳಿಸದೇ ಮತ್ತಷ್ಟು ಕ್ಲಿಷ್ಟಕರವನ್ನಾಗಿ ಮಾಡಿ ವರ್ತಕರ ಮೇಲೆ ಇನ್ನಷ್ಟು ಹೆಚ್ಚಿನ ಕಾರ್ಯಭಾರವನ್ನು ಹೊರಿಸಿದಂತಾಗಿದೆ. ಆದ್ದರಿಂದ ಈ ಆದೇಶವನ್ನು ಪರಿಶೀಲಿಸಿ ವಾಣಿಜ್ಯ ತೆರಿಗೆ ಆಯುಕ್ತರು ಆದೇಶ ಜಾರಿಗೊಳಿಸುವುದನ್ನು ಮುಂದೂಡಲು ನಿರ್ದೇಶಿಸಬೇಕೆಂದು ಅಧ್ಯಕ್ಷ ರಾಧಾಕೃಷ್ಣ ಎಸ್. ರಘೋಜಿ, ರಾಜ್ಯ ತೆರಿಗೆ ಉಪಸಮಿತಿ ಅಧ್ಯಕ್ಷ ಗುರುದೇವ ದೇಸಾಯಿ ಹಾಗೂ ಗೌರವ ಕಾರ್ಯದರ್ಶಿ ಅಮರನಾಥ ಸಿ. ಪಾಟೀಲ್ ಮನವಿ ಮಾಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

