ಹಾಸನ

ಅಕ್ರಮ ಮದ್ಯ ಮಾರಾಟ: ಇಬ್ಬರ ಬಂಧನ

Published On :

ಹಾಸನ: ಜಿಲ್ಲೆಯ ನಾನಾ ಕಡೆಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು  ಬಂಧಿಸಿರುವ ಪೊಲೀಸರು ಅವರಿಂದ 2,728 ರು. ಬೆಲೆಯ ಮದ್ಯ ವಶಪಡಿಸಿಕೊಂಡಿದ್ದಾರೆ.
ಸಕಲೇಶಪುರ ತಾಲೂಕಿನ ಗಾಣದಹೊಳೆ ಗ್ರಾಮದಲ್ಲಿ ಕೃಷ್ಣೇಗೌಡ  (62) ತಮ್ಮ ಚಿಲ್ಲರೆ ಅಂಗಡಿಯಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದಾಗ ಪೊಲೀಸರು ದಾಳಿ ನಡೆಸಿ ಆತನನ್ನು ಬಂಧಿಸಿದ್ದಾರೆ.
ಮದ್ಯ ಮಾರಾಟಕ್ಕಿಟ್ಟಿದ್ದ 1510 ರು. ಬೆಲೆಯ ಮದ್ಯದ ಬಾಟಲ್ ಹಾಗೂ ಸಾಚೆಟ್‌ಗಳನ್ನು ವಶಪಡಿಸಿಕೊಂಡಿರುವ ಪಟ್ಟಣ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
 ಮತ್ತೊಂದು ಪ್ರಕರಣದಲ್ಲಿ ಬೇಲೂರು ತಾಲೂಕಿನ ಯಕ್‌ಶೆಟ್ಟಿಹಳ್ಳಿ ಗೇಟ್ ಹತ್ತಿರ ಬೇಲೂರು-ಚಿಕ್ಕಮಗಳೂರು ಟಾರು ರಸ್ತೆ ಬದಿಯಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಚಿಕ್ಕಮಗಳೂರು ಜಿಲ್ಲೆಯ ತಿಮ್ಮನಹಳ್ಳಿಯ ಗಂಗಪ್ಪ (39) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.ಮದ್ಯ ಮಾರಾಟಕ್ಕಿಟ್ಟಿದ್ದ 1218 ರು. ಬೆಲೆಯ ಮದ್ಯದ ಪ್ಯಾಕೆಟ್ ವಶಪಡಿಸಿಕೊಂಡಿರುವ ಪಟ್ಟಣ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಮಗು ಸೇರಿ ನಾಲ್ವರು ನಾಪತ್ತೆ
ಹಾಸನ: ಜಿಲ್ಲೆಯ ಪ್ರತ್ಯೇಕ ಸ್ಥಳಗಳಿಂದ ಮಗು ಸೇರಿದಂತೆ ನಾಲ್ವರು ನಾಪತ್ತೆಯಾಗಿರುವ ಘಟನೆ ಇತ್ತೀಚೆಗೆ ನಡೆದಿದೆ. ಬೇಲೂರು ತಾ ಹಳೇಬೀಡು ಹೋಬಳಿಯ ಕಟ್ಟೆಸೋಮನಹಳ್ಳಿಯ ಜಗದೀಶ ಎಂಬುವರ ಪತ್ನಿ   ಸುಪ್ರಿಯ (21) ತನ್ನ ಒಂದು ವರ್ಷದ ಗಂಡು ಮಗು ಪ್ರೇಮ್‌ನೊಂದಿಗೆ ಮನೆಯಿಂದ ಹೊರಗೆ ಹೋದವರು  ನಾಪತ್ತೆಯಾಗಿದ್ದಾರೆ. ಸುಪ್ರಿಯ 5 ಅಡಿ ಎತ್ತರ, ಉದ್ದ ಮುಖ, ಕನ್ನಡ ಮಾತನಾಡುತ್ತಾರೆ. ಮನೆಯಿಂದ ಹೋಗುವಾಗ ಬಿಳಿ ಬಣ್ಣದ ಚೂಡಿದಾರ ಧರಿಸಿದ್ದರು. ಮಗು ಬಣ್ಣದ ಸ್ವೆಟರ್ ಧರಿಸಿದ್ದ ಎಂದು ಜಗದೀಶ್ ಹಳೇಬೀಡು ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.
 ಮತ್ತೊಂದು ಪ್ರಕರಣದಲ್ಲಿ ಹಾಸನ ತಾ. ಗೊರೂರು ಪಟ್ಟಣದ ಅರಸೀಕುಮಾರ ಎಂಬುವರ ತಂಗಿ  ಯೋಗಾವುಣಿ (19) ಅರಕಲಗೂಡು ತಾ. ದೊಡ್ಡಮಗ್ಗೆ ಹೋಬಳಿ, ಕಣಿಯಾರು ಗ್ರಾಮಕ್ಕೆ ಸಂಬಂಧಿಕರ ಮನೆಗೆ ಹೋಗಿದ್ದು, ವಾಪಸ್ ಮನೆಗೆ ಬಾರದೆ  ನಾಪತ್ತೆಯಾಗಿದ್ದಾರೆ. 5.5 ಅಡಿ ಎತ್ತರ, ದುಂಡುಮುಖ, ಕನ್ನಡ ಮಾತನಾಡುತ್ತಾಳೆ ಎಂದು ಆಕೆಯ ಅಣ್ಣ ಅರಸೀಕುಮಾರ್ ಕೊಣನೂರು ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.
 ಇನ್ನೊಂದು ಪ್ರಕರಣದಲ್ಲಿ ಬೇಲೂರು ತಾ.ಹಳೇಬೀಡು ಪಟ್ಟಣದ ನಿಜಗುಣ ಎಂಬುವರ ಪುತ್ರಿ ಚೈತ್ರಾ (18) ಮನೆಯಿಂದ ನಿಜಗುಣ ಅವರ ಜತೆಯಲ್ಲಿ ಕಾರಿನಲ್ಲಿ ಬೇಲೂರಿಗೆ ಬಂದವರು ಬೇಲೂರಿನಲ್ಲಿ ಕಾರಿನಿಂದ ಇಳಿದು ಏನೋ ಖರೀದಿ ಮಾಡುತ್ತೇನೆಂದು ಅಂಗಡಿಗೆ ಹೋದವರು ನಾಪತ್ತೆಯಾಗಿದ್ದಾರೆ. 5.5 ಅಡಿ ಎತ್ತರ, ಕೋಲುಮುಖ, ಕನ್ನಡ ಮಾತನಾಡುತ್ತಾಳೆ. ಪಿಂಕ್ ಬಿಳಿ ಬಣ್ಣದ ಚೂಡಿದಾರ ಧರಿಸಿದ್ದರು ಎಂದು ತಂದೆ ನಿಜಗುಣ ಪಟ್ಟಣ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.