ದಾದಿಯರಿಗೆ ತರಬೇತಿ ಕಾರ್ಯಾಗಾರ
ಕ.ಪ್ರ.ವಾರ್ತೆ ಹಾಸನ ಮಾ. 28
ನಗರದ ಪಿಪಿಟಿಸಿಟಿ ಹಾಗೂ ಜಿಲ್ಲಾ ಏಡ್ಸ್ ನಿಯಂತ್ರಣ ಘಟಕ ಮತ್ತು ವಿವೇಕಾನಂದ ಯೂತ್‌ಮೂವ್‌ಮೆಂಟ್ ಸಹಯೋಗದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಚೇರಿಯಲ್ಲಿ ಖಾಸಗಿ ಆಸ್ಪತ್ರೆ ದಾದಿಯರಿಗೆ ಮೂರು ದಿನಗಳ ತರಬೇತಿ ಕಾರ್ಯಾಗಾರ ಆಯೋಜಿಸಲಾಗಿತ್ತು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಪಿ.ಎಲ್. ಶ್ಯಾಮಲಾದೇವಿ ಕಾರ್ಯಾಗಾರ ಉದ್ಘಾಟಿಸಿ, ಏಡ್ಸ್ ನಾಲ್ಕು ರೀತಿಯಲ್ಲಿ ಹರಡುತ್ತದೆ. ಪ್ರಮುಖವಾಗಿ ಸಿರಿಂಜ್ ಬಳಕೆ, ರಕ್ತ ಹಾಗೂ ತಾಯಿಯಿಂದ ಮಗುವಿಗೆ ಮತ್ತು ಲೈಂಗಿಕ ಸಂಪರ್ಕ ಮೂಲಕ ಹರಡಲಿದ್ದು, ಇದನ್ನು ತಡೆಗಟ್ಟಲು ಸಾಕಷ್ಟು ಎಚ್ಚರಿಕೆಯ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ ಎಂದು ತಿಳಿಸಿದರು.
ತಾಯಿಯಿಂದ ಮಗುವಿಗೆ ಹರಡುವುದನ್ನು ತಪ್ಪಿಸಬಹುದಾಗಿದ್ದು, ಚಿಕಿತ್ಸೆ ನೀಡುವ ಸಂದರ್ಭದಲ್ಲಿ ದಾದಿಯರು ಹೆಚ್ಚಿನ ಎಚ್ಚರಿಕೆ ವಹಿಸಬೇಕಾಗುತ್ತದೆ. ಕಾರ್ಯಾಗಾರದಲ್ಲಿ ಈ ಬಗ್ಗೆ ಸಂಪೂರ್ಣ ಮಾಹಿತಿ ಲಭ್ಯವಾಗಲಿದೆ ಎಂದು ನುಡಿದರು.
ಎಚ್‌ಐವಿ ಪೀಡಿತರೊಂದಿಗೆ ಕೌನ್ಸಿಲಿಂಗ್ ಮಾಡುವ ಸಂದರ್ಭದಲ್ಲಿ ಸಾಧ್ಯವಾದಷ್ಟು ಅವರಿಗೆ ಧೈರ್ಯ ತುಂಬುವ ಕೆಲಸ ಮಾಡಬೇಕು. ಯಾವುದೇ ಕಾರಣಕ್ಕೂ ಹೆದರಿಕೆ ಹುಟ್ಟಿಸುವ ಮಾತನಾಡ ಬಾರದು ಎಂದರು.
ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ. ನಟರಾಜ್, ಪಿ.ಎನ್. ವಿವೇಕಾನಂದ ಯೂತ್ ಮೂವ್‌ಮೆಂಟ್‌ನ
ಯೋಜನಾ ವ್ಯವಸ್ಥಾಪಕ ಹೇಮಂತ್ ಇತರರು ಇದ್ದರು.
'ನಿರಂತರ ಕಲಿಕೆಯಿಂದ ಜೀವನ ವಿಕಾಸ'
ಜಾವಗಲ್: ನಿರಂತರ ಕಲಿಕೆಯಿಂದ ಜೀವನ ವಿಕಾಸ ಸಾಧ್ಯ ಎಂದು ವೇದಾಂತ ಭಾರತಿ ಸಂಚಾಲಕ ಚೇತನ್ ಚಕ್ರವರ್ತಿ ಅಭಿಪ್ರಾಯಪಟ್ಟರು. ಸಂಸ್ಕಾರ ಭಾರತಿ ಹಮ್ಮಿಕೊಂಡಿದ್ದ 3 ದಿನದ ಆನಂದ ಲಹರಿ ಕಾರ್ಯಕ್ರಮದ ಮುಕ್ತಾಯ ಸಮಾರಂಭದಲ್ಲಿ ಮಾತನಾಡಿದ ಅವರು, ಅಸಹಾಯಕತೆಯ ಬೆಳವಣಿಗೆಗೆ ಮಾರಕವಾದುದು ಎಂದರು. ತಾಯಂದಿರು ಮಕ್ಕಳಿಗೆ ಎಳೆಯ ವಯಸ್ಸಿನಲ್ಲೇ ತಾಳ್ಮೆ ಸಹನೆ ಬಗ್ಗೆ ಅರಿವು ಮೂಡಿಸುವುದು ಪ್ರಸ್ತುತ ಸನ್ನಿವೇಶದಲ್ಲಿ ಅಗತ್ಯವಾಗಿದೆ. ಇಂದ್ರಿಯಗಳ ನಿಗ್ರಹದಿಂದ ಬದುಕನ್ನು ಸಾಧನೆಯತ್ತ ಸಾಗಿಸಬಹುದಾಗಿದೆ.
ಸಂಸ್ಕಾರ ಬಲದಿಂದ ಯಾರು ಬೇಕಾದರೂ ಮುಂದೆ ಬರಬಹುದು. ಗಾಯಿತ್ರಿ ಮಂತ್ರದಿಂದ ಮನುಷ್ಯನ ಬದುಕು ಹಸನಾಗುತ್ತದೆ ಎಂದು ಹೇಳಿದರು. ಸಂಸ್ಕಾರ ಭಾರತಿ ಜಾವಗಲ್ ಶಾಖೆಯ ಸಂಧ್ಯಾ ನರಸಿಂಹ ಮೂರ್ತಿ, ಗಿರಿಜಾ ಎನ್.ಸ್ವಾಮಿ, ಗಿರಿಜಾ ಕುಮಾರ್, ಜೋತಿ ಜಗದೀಶ್, ಮಮತಾ ಕೇಶವಮೂರ್ತಿ, ತಾರಾಮಣಿ ಅಶ್ವತ್ಥ, ಪುಷ್ಪಲತಾ ರವಿಶಂಕರ್, ವಿಜಯಲಕ್ಷ್ಮಿ ಮಹಂತೇಶ್, ಪ್ರಭಾವತಿ ಗೋಪಾಲಕೃಷ್ಣ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

