ವಂಚಕರ ಬಗ್ಗೆ ಎಚ್ಚರವಿರಲಿ
ಮೈಸೂರು: ಹೂಡಿಕೆದಾರರನ್ನು ವಂಚಿಸುವವರು ಹೆಚ್ಚಾಗಿದ್ದಾರೆ. ಹೀಗಾಗಿ ವಂಚಕರಿಂದ ಹೂಡಿಕೆದಾರರು ಎಚ್ಚರದಿಂದ ಇರಬೇಕು ಎಂದು ಎಫ್ಕೆಸಿಸಿಐ ಜಿಲ್ಲಾ ಸಮನ್ವಯ ಸಮಿತಿ ಅಧ್ಯಕ್ಷ ಸುಧಾಕರ್ ಎಸ್. ಶೆಟ್ಟಿ ಹೇಳಿದರು.
ಮೈಸೂರು ವಾಣಿಜ್ಯ ಮತ್ತು ಕೈಗಾರಿಕೆ ಸಂಸ್ಥೆ (ಎಂಸಿಸಿಐ) ಮತ್ತು ಐಸಿಎಸ್ಐ ಮೈಸೂರು ಶಾಖೆ ಸಂಯುಕ್ತವಾಗಿ ಎಂಜಿನಿಯರುಗಳ ಸಂಸ್ಥೆ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಿದ್ದ ಹಣಕಾಸು ಯೋಜನೆ- ಒಂದು ದೃಷ್ಟಿಕೋನ ಕುರಿತ ಹೂಡಿಕೆದಾರರ ಅರಿವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನಮ್ಮ ಸುತ್ತಮುತ್ತ ವಂಚಕರಿದ್ದಾರೆ. ಸಾಮಾನ್ಯ ವ್ಯಾಪಾರಿಗಳು ಹಾಗೂ ಸಾಮಾನ್ಯ ಜನರನ್ನು ಗುರಿಯಾಗಿಸಿಕೊಂಡು ವಂಚನೆ ಮಾಡುತ್ತಿದ್ದಾರೆ. ದೇಶ ಮತ್ತು ರಾಜ್ಯದಲ್ಲಿ ಹಲವಾರು ಸಂಸ್ಥೆಗಳು ಹೂಡಿಕೆದಾರರಿಗೆ ವಂಚಿಸಿದೆ. ಹೂಡಿಕೆದಾರರ ಹಣದಿಂದ ವೈಭೋಗ ಜೀವನ ನಡೆಸುತ್ತಿರುವ ವಂಚಕರು ನಮ್ಮ ನಡುವೆ ಇದ್ದಾರೆ. ಇದೇ ರೀತಿ ಮೈಸೂರಿನಲ್ಲೂ ಗ್ರೀನ್ಬಡ್ಸ್ ಎಂಬ ಸಂಸ್ಥೆಯು ತನ್ನ ಹೂಡಿಕೆದಾರರಿಗೆ ವಂಚಿಸಿದೆ ಎಂದರು.
ಹೂಡಿಕೆದಾರರನ್ನು ವಂಚಿಸುತ್ತಿರುವವರ ವಿರುದ್ಧ ಸರ್ಕಾರ ಸೂಕ್ತ ಕ್ರಮ ಕೈಗೊಂಡು, ನ್ಯಾಯಾಲಯದ ಮೂಲಕ ಶಿಕ್ಷೆ ವಿಧಿಸಬೇಕು. ಇಲ್ಲದಿದ್ದರೆ ವಂಚಕರು ಹಾಗೂ ವಂಚನೆಗೊಳಗಾಗುವವರ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದರು. ಐಸಿಎಸ್ಐ ಮೈಸೂರು ಶಾಖೆ ಅಧ್ಯಕ್ಷ ಬಿ.ಬಿ. ಅಜಯ್ ಮಾದಯ್ಯ ಅಧ್ಯಕ್ಷತೆ ವಹಿಸಿದ್ದರು. ಸಹಾಯಕ ಕಂಪನಿ ರಿಜಿಸ್ಟ್ರಾರ್ ಕೀರ್ತಿರಾಜ್, ಯುಟಿಐ ಮಾಜಿ ಪ್ರಾದೇಶಿಕ ವ್ಯವಸ್ಥಾಪಕ ವೆಂಕಟೇಶ್, ಎಂಸಿಸಿಐ ಅಧ್ಯಕ್ಷ ಎ.ಎಸ್. ಸತೀಶ್, ಪ್ರಧಾನ ಕಾರ್ಯದರ್ಶಿ ಶ್ರೀಶೈಲ ರಾಮಣ್ಣನವರ್, ಉಪಾಧ್ಯಕ್ಷ ಎನ್.ಎಚ್. ಜಯಂತ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

