ಅಧಿಕಾರಿಗಳ ಬಿಲ್ ವಿದ್ಯೆ!
ಬೇಲೂರು: 15 ತಿಂಗಳ ಅಧಿಕಾರಿಗಳ ಆಡಳಿತದಲ್ಲಿ ಕೈಗೊಂಡ ಕಾಮಗಾರಿಗಳಲ್ಲಿ ಅವ್ಯವಹಾರ ನಡೆದಿದೆ ಎಂದು ಪುರಪಿತೃಗಳು ಆರೋಪಿಸಿದ್ದಾರೆ.
ಬುಧವಾರ ನಡೆದ ಸಾಮಾನ್ಯ ಸಭೆಯಲ್ಲಿ ಸದಸ್ಯರೆಲ್ಲರೂ ಈ ಅವ್ಯವಹಾರಗಳ ಬಗ್ಗೆ ಲೋಕಾಯುಕ್ತರ ತನಿಖೆ ನಡೆಸಬೇಕೆಂದು ಒತ್ತಾಯಿಸಿದರು.
ಪುರಸಭೆ ಸದಸ್ಯರಾದ ಜಿ. ಶಾಂತಕುಮಾರ್, ಅಕ್ರಂ ಪಾಷ, ವೆಂಕಟೇಶ್, ಮೋಹನ್ ಅವರು, ಕಾಮಗಾರಿ ಅವ್ಯವಹಾರ ಕುರಿತು ಲೋಕಾಯುಕ್ತ ತನಿಖೆಗೆ ಪುರಸಭೆಯಲ್ಲಿ ನಿರ್ಣಯ ಕೈಗೊಂಡ ನಂತರ ಅವ್ಯವಹಾರದ ಪಟ್ಟಿ ಹೊರಬರುತ್ತಿವೆ. ಮುಖ್ಯಮಂತ್ರಿಗಳ ಸಣ್ಣ ಮತ್ತು ಮಧ್ಯಮ ಪಟ್ಟಣ ಅಭಿವೃದ್ಧಿ ಯೋಜನೆಯಡಿ (1ನೇ ಹಂತ) ಎಂ.ಆರ್.ವೆಂಕಟೇಶ್ ನಿವಾಸದ ಮುಂಭಾಗ ಡಾಂಬರೀಕರಣ ಕಾಮಗಾರಿ ಮಾಡದಿದ್ದರೂ 7.90 ಲಕ್ಷ ಬಿಲ್ ಪಾವತಿಸಲಾಗಿದೆ ಎಂದು ದೂರಿದರು.
ಅಕ್ರಮ್ ಪಾಷ ಮನೆ ಹಿಂಭಾಗ ಇದೆ ಯೋಜನೆಯಡಿ ಜಲ್ಲಿ ಹಾಕಿ ಚರಂಡಿ ತೋಡಿ ಹೊಸ ರಸ್ತೆ ನಿರ್ಮಿಸದಿದ್ದರೂ ಬಿಲ್ ಪಡೆಯಲಾಗಿದೆ. ಪಟ್ಟಣದ ಮುಸ್ತಾಫ ಬೀದಿ ಸೇರಿದಂತೆ 3 ರಸ್ತೆಗಳಿಗೆ ಡಾಂಬರೀಕರಣ ಮಾಡಿಲ್ಲ. ಆದರೂ 9 .80 ಲಕ್ಷ ಬಿಲ್ ನೀಡಲಾಗಿದೆ. ಹೊಳೆಬೀದಿಯಲ್ಲಿ ಲಕ್ಷ್ಮೀಮೆಡಿಕಲ್ ಮುಂಭಾಗದ ರಸ್ತೆಗೆ ಬಾಕ್ಸ್ ಚರಂಡಿ ನಿರ್ಮಿಸಿ ಸ್ಲ್ಯಾಬ್ ಹಾಕದಿದ್ದರೂ 4.40 ಲಕ್ಷ ಬಿಲ್ ಪಡೆಯಲಾಗಿದೆ. ಲಕ್ಷ್ಮಿಪುರ ಬಡಾವಣೆಯಲ್ಲಿ ರಸ್ತಗೆ ಡಾಂಬರು ಹಾಕಿಲ್ಲ ಎಂದು ಸದಸ್ಯ ಮೋಹನ್ ದೂರಿದ್ದಾರೆ.
ಅದೇ ರೀತಿ, ಗುರಪ್ಪಗೌಡರ ಬೀದಿ ಕೊನೆಯಲ್ಲಿ 3 ಲಕ್ಷ ವೆಚ್ಚದ ಆವರಣ ಗೋಡೆಯನ್ನು ನಿರ್ಮಿಸಲಾಗಿದೆ. ಇದು ಯಾವುದಕ್ಕೂ ಪ್ರಯೋಜನವಾಗಿಲ್ಲ. ಹೊಳೆಬೀದಿಯಲ್ಲ ಮಕ್ಕಳ ಪಾರ್ಕ್ ಅನ್ನು ಅವೈಜ್ಞಾನಿಕವಾಗಿ ನಿರ್ಮಿಸಿದ್ದು, ತಳಭಾಗದಲ್ಲಿ ಪಾರ್ಕ್ ಮಾಡಿದ್ದ ಸ್ವಲ್ಪ ಮಳೆ ಬಂದರೂ ಈಜುಕೊಳವಾಗಿಡುತ್ತದೆ ಎಂದು ಶಾಂತಕುಮಾರಿ ಕಿಡಿಕಾರಿದರು.
ಕುಡಿಯುವ ನೀರಿನ ಸಿಸ್ಟಮ್ ಸ್ವಚ್ಛತೆಗೆ ಸಂಬಂಧಿಸಿದಂತೆ ಮನಬಂದಂತೆ ಬಿಲ್ ನೀಡಲಾಗಿದೆ. ಕುಡಿಯುವ ನೀರಿನ ಫಿಲ್ಟರ್ ಹೌಸ್ ಬಳಿ ಇರಿಸಿರುವ ಕ್ಲೋರಿನೇಷನ್ ಬಕೆಗೆ 12 ಲಕ್ಷ ಪಾವತಿಸಿದ್ದಾರೆ. ಆದರೆ ಇಷ್ಟೊಂದು ಮೊತ್ತದ ಕ್ಲೋರಿನೇಷನ್ ಶೇಖರಿಸುವ ಟ್ಯಾಂಕ್ ನಮ್ಮ ಬಳಿಯಿಲ್ಲ. ಫಿಲ್ಟರ್ಗೆ ಅಳವಡಿಸಿರುವ ನೀರೆತ್ತುವ ಮೋಟಾರ್ ರಿಪೇರಿಗೆ 7 ಲಕ್ಷ ಪಾವತಿಸಿದ್ದಾರೆ. ಆದರೆ ಹೊಸ ಮೋಟಾರ್ಗೆ ಅತಿ ಹೆಚ್ಚು ಎಂದರೂ 10 ಲಕ್ಷ ಬೆಲೆಯಿದೆ. ಇಲ್ಲಿಯೂ ಅಕ್ರಮ ನಡೆದಿದೆ ಎಂದು ಪುರಸಭೆಸದಸ್ಯರು ಆರೋಪಿಸಿದ್ದಾರೆ
ಪುರಸಭೆ ಸದಸ್ಯನಾಗಿ ಮಾಹಿತಿ ಕೇಳಿದರೆ ನನಗೆ ಮಾಹಿತಿ ಹಕ್ಕು ಅಡಿ ಮಾಹಿತಿ ಪಡೆಯುವಂತೆ ಹಿಂಬರಹ ನೀಡಿದ್ದಾರೆ. ಈ ಎಲ್ಲದರ ಬಗ್ಗೆ ಡಿಸಿ ಹಾಗೂ ಲೋಕಾಯುಕ್ತರಿಗೆ ಲಿಖಿತ ದೂರು ನೀಡಲಾಗುವುದು ಎಂದು ಜಿ.ಶಾಂತಕುಮಾರಿ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

