ಹಾಸನ

'ಆಪರೇಷನ್ ಬೀದಿ ನಾಯಿ'ಗೆ ಚಾಲನೆ

Published On :

ಹೊಳೆನರಸೀಪುರ: ಅಂತೂ ಇಲ್ಲಿನ ಪುರಸಭೆಗೆ ಇದೀಗ ಜ್ಞಾನೋದಯವಾದಂತಾಗಿ, ಪಟ್ಟಣದ ಬೀದಿ ಬೀದಿಗಳಲ್ಲಿ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದ್ದ ಬೀದಿ ನಾಯಿಗಳ ಹಾವಳಿಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಕ್ರಮ ಕೈಗೊಂಡು ಬೀದಿ ನಾಯಿಗಳನ್ನು ಹಿಡಿಯುವ ಕಾರ್ಯಕ್ಕೆ ಮುಂದಾಗಿದೆ.
 ಪಟ್ಟಣದ ತುಂಬೆಲ್ಲಾ ಬೀದಿ ನಾಯಿಗಳ ಹಾವಳಿ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ. ಕಳೆದ ಮೂರು ದಿನಗಳ ಹಿಂದೆಯಷ್ಟೇ ಒಂದೇ ದಿನದಂದು ಇಲ್ಲಿನ ವಿವಿಧ ಬಡಾವಣೆಗಳಲ್ಲಿ 10 ಜನರಿಗೆ ಬೀದಿ ನಾಯಿಗಳು ಕಡಿದ ಪ್ರಕರಣಗಳು ನಡೆದಿದ್ದವು.
ಬೌಬೌ ಹಾವಳಿ:   ಪಟ್ಟಣದ ನಾಗರಿಕರುಗಳ ಒತ್ತಾಯ ಹಾಗೂ ಹಿಡಿಶಾಪವನ್ನು ಅರಿತ ಪುರಸಭೆಯು ಇದೀಗ ಎರಡು ದಿನಗಳಿಂದ ಬೀದಿ ನಾಯಿಗಳನ್ನು ಹಿಡಿಯುವ ಕಾರ್ಯಕ್ಕೆ ಮುಂದಾಗಿದೆ.
90ಕ್ಕೂ ಹೆಚ್ಚು ನಾಯಿಗಳು ಬಲೆಗೆ:  ಇದರ ಮೊದಲ ದಿನದಂದೇ ಸುಮಾರು 90ಕ್ಕೂ ಹೆಚ್ಚು ನಾಯಿಗಳನ್ನು ಹಿಡಿಯಲಾಗಿದ್ದು, ಎರಡನೇ ದಿನದ “A®ÚÁæÞÎÚ«é ¸Þ¦’ ನಾಯಿ ಕಾರ್ಯಾಚರಣೆಯಲ್ಲಿ ಸರಿಸುಮಾರು ನೂರೈವತ್ತಕ್ಕೂ ಹೆಚ್ಚು ನಾಯಿಗಳನ್ನು ಹಿಡಿದು ದೂರದ ಪ್ರದೇಶಕ್ಕೆ ಸಾಗಿಸಲಾಗಿದೆ ಎಂದು ಪುರಸಭೆಯ ಆರೋಗ್ಯ ನಿರೀಕ್ಷಕ ವಸಂತ್ ತಿಳಿಸಿದ್ದಾರೆ.
ಪಿಂಜರಾಪೋಲ್‌ಗೆ ರವಾನೆ: ಇದೇ ರೀತಿ ಪಟ್ಟಣದಲ್ಲಿ ಹೆಚ್ಚುತ್ತಿರುವ ಬಿಡಾಡಿ ದನಗಳ ಕಾಟದಿಂದಲೂ ಪಟ್ಟಣವನ್ನು ಮುಕ್ತವಾಗಿಸಲು, ನಾಯಿಗಳನ್ನು ಹಿಡಿಯುವ ಕಾರ್ಯವು ಪೂರ್ಣಗೊಂಡ ನಂತರದಲ್ಲಿ ಬಿಡಾಡಿ ದಿನಗಳನ್ನು ಹಿಡಿದು ಪಿಂಜರಾಪೋಲ್‌ಗೆ ಸಾಗಿಸಲಾಗುವುದು ಎಂದು ವಸಂತ್ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.