ಹಾಸನ

ಇಂಗ್ಲಿಷ್ ಕೋರ್ಸ್ ಆರಂಭ

Published On :

ಮೈಸೂರು: ಮೈಸೂರು ವಿವಿ ಸಾಮರ್ಥ್ಯಾಭಿವೃದ್ಧಿ ಮತ್ತು ಉದ್ಯೋಗಾವಕಾಶ ಕೇಂದ್ರವು ಆರಂಭಿಸಿರುವ ಇಂಗ್ಲಿಷ್ ಕಲಿಕಾ ಕೋರ್ಸ್ ಅನ್ನು ಯುಜಿಸಿ- ಶೈಕ್ಷಣಿಕ ಸಿಬ್ಬಂದಿ ಮಹಾವಿದ್ಯಾಲಯದ ನಿರ್ದೇಶಕ ಪ್ರೊ.ಲಿಂಗರಾಜ ಗಾಂಧಿ ಬುಧವಾರ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ಇಂಗ್ಲಿಷ್ ಜಾಗತಿಕ ಭಾಷೆಯಾಗಿದ್ದು, ಅಂತಾರಾಷ್ಟ್ರೀಯ ಸಂಪರ್ಕ ಹಾಗೂ ರಾಷ್ಟ್ರದೊಳಗಿನ ಅಂತರ ಸಂಬಂಧವನ್ನು ವೃದ್ಧಿಸಲು ಬಳಸುವ ಏಕೈಕ ಭಾಷೆಯಾಗಿದೆ. ಶೈಕ್ಷಣಿಕ, ವ್ಯಾಪಾರ, ವ್ಯವಹಾರ, ವಿಜ್ಞಾನ- ತಂತ್ರಜ್ಞಾನ ಕ್ಷೇತ್ರದಲ್ಲಿ ಸರಾಗವಾಗಿ ಸಂವಹನ ನಡೆಸಲು ಅಗತ್ಯವಾದ ಈ ಭಾಷೆಯನ್ನು ಕಲಿಯಬೇಕು. ಉನ್ನತ ಶಿಕ್ಷಣದಲ್ಲಿ ಇಂಗ್ಲಿಷ್ ಕಲಿಕೆಗೆ ಹೆಚ್ಚು ಮಹತ್ವ ನೀಡಿದರೆ ಗುಣಾತ್ಮಕ ಶಿಕ್ಷಣವನ್ನು ನಾವು ಕಾಣಬಹುದು.
ವಿದ್ಯಾರ್ಥಿ ಜೀವನದಲ್ಲಿ ಕನಸು ಕಾಣಬೇಕು ಹಾಗೂ ಗುರಿ ಹೊಂದಿರಬೇಕು. ಕನಸು ಹಾಗೆ ಉಳಿಯಬಾರದು. ಅದರ ಸಾಕಾರಕ್ಕಾಗಿ ಕಠಿಣ ಪರಿಶ್ರಮ ವ್ಯಯಿಸಬೇಕು. ಭಾಷಾ ಕೌಶಲ್ಯ ಅಳವಡಿಸಿಕೊಂಡು ವಿಶ್ವತತ್ವವನ್ನು ಜಾರಿಗೆ ತರಬೇಕು. ಭಾಷಾ ಕಲಿಕೆಯಲ್ಲಿ ಆಲಿಸುವುದು, ಮಾತನಾಡುವುದು, ಓದುವುದು ಮತ್ತು ಬರೆಯುವುದು ಪ್ರಮುಖ ಘಟಕಾಂಶಗಳಾಗಿವೆ. ಇವುಗಳನ್ನು ಕ್ರಮಬದ್ಧವಾಗಿ ನಿರ್ವಹಿಸಿದರೆ ಭಾಷೆ ತನಗೆ ತಾನೆ ಒಲಿಯುತ್ತದೆ. ಅದಕ್ಕೆ ಬೇಕಾದ ಮಾಹಿತಿ ಒದಗಿಸಿಕೊಂಡು ಆಲೋಚನಾ ದಾಟಿಯನ್ನು ಧಾರಣೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಸಿಪಿಡಿಪಿಎಸ್ ನಿರ್ದೇಶಕ ಪ್ರೊ.ನಿರಂಜನ ವಾನಳ್ಳಿ ಮಾತನಾಡಿ, ಮೈಸೂರು ವಿವಿಯಲ್ಲಿ ಸಂಶೋಧನೆಯಲ್ಲಿ ತೊಡಗಿರುವ ವಿದ್ಯಾರ್ಥಿಗಳಿಗೆ ಇಂಗ್ಲಿಷ್ ಜ್ಞಾನ ತುಂಬಾ ಅವಶ್ಯಕವಾಗಿದೆ. ಇದನ್ನರಿತೆ ಸಿಪಿಡಿಪಿಎಸ್ ಈಗಾಗಲೇ ನಾಲ್ಕು ತಂಡಗಳಲ್ಲಿ ವಿದ್ಯಾರ್ಥಿಗಳಿಗೆ ಕೋರ್ಸ್ ಆರಂಭಿಸಿತ್ತು. ಇನ್ನು ಮುಂದೆಯೂ ಪ್ರತಿ ಮೂರು ತಿಂಗಳಿಗೊಮ್ಮೆ ಕೋರ್ಸ್ ನಡೆಸಿ ಕನಿಷ್ಠ 20 ಮಂದಿಗಾದರು ಇಂಗ್ಲಿಷ್ ಕಲಿಸುತ್ತೇವೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.