ಕಾಡಾನೆ ದಾಳಿಗೆ ಮನೆ ನೆಲಸಮ
ಕನ್ನಡಪ್ರಭ ವಾರ್ತೆ, ಸಕಲೇಶಪುರ.ಜೂ 13
ಕಾಡಾನೆ ದಾಳಿ ನಡೆಸಿ ಮನೆಯೊಂದನ್ನು ಜಖಂಗೊಳಿಸಿರುವ ಘಟನೆ ತಾಲೂಕಿನ ಕಡಗರವಳ್ಳಿಯಲ್ಲಿ ಶುಕ್ರವಾರ ನಡೆದಿದೆ.
ಮುಂಜಾನೆ ಗ್ರಾಮಕ್ಕೆ ನುಗ್ಗಿದ ಒಂಟಿ ಸಲಗ ಗ್ರಾಮದ ಕೃಷ್ಣೇಗೌಡ ಎಂಬುವರಿಗೆ ಸೇರಿದ ತೋಟದ ಮನೆಯನ್ನು ಸೋಂಡಿಲಿನಿಂದ ಎಳೆದ ಪರಿಣಾಮ ಮನೆಯ ಮೇಲ್ಚಾವಣಿ ಕುಸಿದು ಬಿದ್ದಿದೆ. ಇದರಿಂದಾಗಿ ಮನೆಯಲ್ಲಿ ಕಾಫಿ ಗಿಡಗಳಿಗೆ ಹಾಕಲು ತಂದಿಟ್ಟಿದ್ದ 20 ಚೀಲ ಗೊಬ್ಬರ ಹಾಗೂ ಮನೆಯ ದುರಸ್ತಿಗಾಗಿ ತಂದಿಟ್ಟಿದ್ದ 10 ಚೀಲ ಸಿಮೆಂಟ್ ಮಳೆಗೆ ನೆನೆದು ನಷ್ಟ ಸಂಭವಿಸಿದೆ. ಮದ ಬಂದಂತೆ ವರ್ತಿಸುತ್ತಿದ್ದ ಒಂಟಿ ಸಲಗದ ಕಾಲ್ತುಳಿತಕ್ಕೆ ವ್ಯಾಪಕ ಪ್ರಮಾಣದಲ್ಲಿ ಮೆಣಸಿನಬಳ್ಳಿ, ಬಾಳೆ, ಅಡಕೆ ಹಾಗೂ ಕಾಫಿ ಗಿಡಗಳು ನಾಶಗೊಳಿಸಿದ್ದು ಅಪಾರ ನಷ್ಟ ಸಂಭವಿಸಿದೆ.
ಅಕ್ರಮ ಮರಳು ದಂಧೆಗೆ ಕಡಿವಾಣ
ಹೊಳೆನರಸೀಪುರ: ಸರ್ಕಾರ ಹಾಗೂ ಜಿಲ್ಲಾಡಳಿತದ ಕಟ್ಟುನಿಟ್ಟಿನ ಆದೇಶದ ನಡುವೆಯೂ ತಾಲೂಕಿನ ನದಿ ಪಾತ್ರದಲ್ಲಿ ಆಕ್ರಮವಾಗಿ ಮರಳು ತೆಗೆದು ಸಾಗಿಸಲು ಯತ್ನಿಸುತ್ತಿದ್ದ ಲಾರಿ ಹಾಗೂ ಟ್ರ್ಯಾಕ್ಟರ್ಗಳನ್ನು ಸತತವಾಗಿ ದಾಳಿ ನಡೆಸಿ ವಶಕ್ಕೆ ತೆಗೆದುಕೊಂಡಿರುವ ಇಲ್ಲಿನ ತಹಸೀಲ್ದಾರ್ ಎಸ್.ರಾಘವೇಂದ್ರ ಅವರು ಮುಂದಿನ ಕ್ರಮಕ್ಕಾಗಿ ಜಿಲ್ಲಾಧಿಕಾರಿಗಳಿಗೆ ಪ್ರಕರಣವನ್ನು ವರ್ಗಾಯಿಸಿದ್ದಾರೆ.
ಇಲ್ಲಿನ ತಹಸೀಲ್ದಾರ್ ಎಸ್.ರಾಘವೇಂದ್ರ ಅವರು ಆಕ್ರಮ ಮರಳು ಮಾಫಿಯಾದ ವಿರುದ್ಧ ನಿರಂತರ ದಾಳಿ ನಡೆಸುತ್ತಿರುವ ಕಾರಣದಿಂದಾಗಿ ಇಲ್ಲಿನ ತಾಲೂಕು ಕಚೇರಿಯ ಆವರಣದಲ್ಲಿ 8 ಟ್ರ್ಯಾಕ್ಟರ್, 8 ಲಾರಿಗಳು ಹಾಗು 20 ಕ್ಕೂ ಹೆಚ್ಚು ಕಬ್ಬಿಣದ ದೋಣಿಗಳನ್ನು ವಶಪಡಿಸಿಕೊಳ್ಳಲಾಗಿದೆ.
ಆಕ್ರಮ ಮರಳು ಮಾಫಿಯಾದ ವಿರುದ್ಧ ತಾಲೂಕು ಹಾಗೂ ಜಿಲ್ಲಾಡಳಿತವು ಮುಗಿಬಿದ್ದಿರುವ ಕಾರಣದಿಂದಾಗಿ ತಾಲೂಕಿನಲ್ಲಿ ಮರಳಿನ ಕೃತಕ ಅಭಾವ ಸೃಷ್ಟಿಯಾಗಿ ಮನೆ ಕಟ್ಟುವ, ಸರ್ಕಾರಿ ಕಾಮಗಾರಿಗಳನ್ನು ನಿರ್ವಹಿಸುವ ಯಾವುದೇ ಕೆಲಸಕ್ಕೂ ಮರಳು ದೊರಕದೆ ಮರಳಿನ ಅವಶ್ಯಕತೆ ಇರುವವರಿಗೆ ದಿಕ್ಕು ತೊಚದಂತಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

