ಆನಂದಕಂದರ ಕಾವ್ಯ ಪರಿಚಯ ಇಂದು
ಹಾಸನ: ಬೆಳಗಾವಿಯ ಡಾ.ಬೆಟಗೇರಿ ಕೃಷ್ಣಶರ್ಮ ಸ್ಮಾರಕ ಟ್ರಸ್ಟ್ , ಹಾಸನದ ಅನನ್ಯ ಟ್ರಸ್ಟ್ ಹಾಗೂ ಬಾಂಧವ್ಯ ಲೋಕದ ಆಶ್ರಯದಲ್ಲಿ ಆನಂದಕಂದರ ಕಾವ್ಯ ಪರಿಚಯ ಕಾರ್ಯಕ್ರಮವನ್ನು ಜೂ. 14 ರಂದು ಬೆಳಗ್ಗೆ 11.30ಕ್ಕೆ ಏರ್ಪಡಿಸಲಾಗಿದೆ. ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಎಚ್.ಬಿ. ಮದನಗೌಡ ಕಾರ್ಯಕ್ರಮ ಉದ್ಘಾಟಿಸುವರು. ಕಾದಂಬರಿಕಾರ ಡಾ.ರಾಘವೇಂದ್ರ ಪಾಟೀಲ್ ಆಶಯ ನುಡಿಗಳನ್ನಾಡುವರು. ಪ್ರಾಂಶುಪಾಲ ಪ್ರೊ.ಎಚ್.ವಿ. ಲಕ್ಷ್ಮೀನಾರಾಯಣ ಅಧ್ಯಕ್ಷತೆ ವಹಿಸುವರು. ಸಾಹಿತಿಗಳಾದ ಸತೀಶ ಕುಲಕರ್ಣಿ ಹಾಗೂ ಶೈಲಜಾಹಾಸನ್ ಕಾವ್ಯ ಪರಿಚಯಿಸುವರು. ಇದೇ ಸಂದರ್ಭದಲ್ಲಿ ಜಾವಗಲ್ ರಂಜಿತಾ ಅವರಿಂದ ಆನಂದಕಂದರ ವಿರಚಿತ ಗೀತೆಗಳ ಗಾಯನ ನಡೆಯಲಿದೆ.
ಸುತ್ತೂರಿಗೆ ಸಿಎಂ ಭೇಟಿ ನಾಳೆ
ನಂಜನಗೂಡು: ತಾಲೂಕಿನ ಸುತ್ತೂರಿನ ದೊಡ್ಡಮ್ಮತಾಯಿ ದೇವಸ್ಥಾನದ ಪುನರ್ನಿರ್ಮಿತ ಕಟ್ಟಡ ಮತ್ತು ಸುತ್ತೂರಮ್ಮ ದೇವಸ್ಥಾನದ ಜೀರ್ಣೋದ್ಧಾರಿತ ಕಟ್ಟಡಗಳು, ದೇವತಾಮೂರ್ತಿಗಳ ಪುನರ್ ಪ್ರತಿಷ್ಠಾಪನೆ, ಸಂಪ್ರೋಕ್ಷಣೆ, ವಿಮಾನ ಕಲಶಾರೋಹಣ, ಕುಂಭಾಭಿಷೇಕ ಮತ್ತು ಅಂಕಸ್ಥಾಪನೆ ಕಾರ್ಯಕ್ರಮವನ್ನು ಜೂ.15ರ ಬೆಳಗ್ಗೆ 10ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸುವರು.
ಜೂ.14ರಂದು ಪ್ರಾತಃಕಾಲದಿಂದ ವಿವಿಧ ದೇವತಾಕಾರ್ಯಗಳು ಪ್ರಾರಂಭವಾಗಲಿದ್ದು, ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ವಿಜಾಪುರ ಜ್ಞಾನಯೋಗಾಶ್ರವುದ ಸಿದ್ದೇಶ್ವರ ಸ್ವಾಮೀಜಿ ಸಮ್ಮುಖದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಕಂದಾಯ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ವಿ. ಶ್ರೀನಿವಾಸಪ್ರಸಾದ್ ಅಧ್ಯಕ್ಷತೆ ವಹಿಸುವರು. ಸಚಿವ ಎಚ್.ಎಸ್.ಮಹದೇವಪ್ರಸಾದ್, ಲೋಕೋಪಯೋಗಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಸಂಸದ ಆರ್. ಧ್ರುವನಾರಾಯಣ, ವಿಧಾನ ಪರಿಷತ್ ಸದಸ್ಯರಾದ ಗೋ. ಮಧುಸೂದನ್, ಸಂದೇಶ್ ನಾಗರಾಜು, ಮರಿತಿಬ್ಬೇಗೌಡ, ಸಿದ್ದರಾಜು, ಆರ್. ಧರ್ಮಸೇನ, ಎಲ್.ಮಾದಪ್ಪ, ತಾಪಂ ಅಧ್ಯಕ್ಷ ಎಸ್.ಮಲ್ಲಿಕಾರ್ಜುನಸ್ವಾಮಿ, ಸದಸ್ಯರಾದ ಎಸ್.ಎಂ. ಚಿಕ್ಕಮಾದಪ್ಪ, ಲಿಂಗರಾಜಮ್ಮ, ಉಪಾಧ್ಯಕ್ಷ ಜ್ಯೋತಿ ಮಹೇಶ್ ಭಾಗವಹಿಸುವರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

