ಹಾಸನ

ದರೋಡೆ: ನಾಲ್ವರ ಬಂಧನ

Published On :

ಸಕಲೇಶಪುರ: ಪಟ್ಟಣದ ದಯಾಳು ಮಾತೆ ಚರ್ಚ್ ಫಾದರ್ ವಿನ್ಸ್ಸೆಂಟ್ ಡಿಸೋಜಾ ಅವರ ಮನೆ ದರೋಡೆ ನಡೆಸಿದ್ದ ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಪೋಲಿಸರು ಯಶಸ್ವಿಯಾಗಿದ್ದಾರೆ.
ಘಟನೆಗೆ ಸಂಬಂದಪಟ್ಟಂತೆ ಹಾಸನ ತಾಲೂಕಿನ ಮಣಚನಹಳ್ಳಿ ಗ್ರಾಮ ಪ್ರದೀಪ(26), ತಣ್ಣೀರುಹಳ್ಳದ ಬಾಲಕೃಷ್ಣ(24), ಉದ್ದೂರು ಹೊಸಳ್ಳಿ ಗ್ರಾಮದ ಶಶಿ(26) ಮತ್ತು ಹರೀಶ(24) ಬಂಧಿತ ಆರೋಪಿಗಳು. ಮತ್ತೊಬ್ಬ ಆರೋಪಿ ಆಲೂರು ತಾಲೂಕು ಪಾಳ್ಯ ಹೋಬಳಿಯ ಹಾರಾಪುರ ಗ್ರಾಮದ ಪ್ರದೀಪ ಪತ್ತೆಯಾಗಿಲ್ಲ.
ಪ್ರದೀಪ ಮತ್ತು ಬಾಲಕೃಷ್ಣ ಇನ್ನಿತರ 3-4  ಆರೋಪಿತರೊಂದಿಗೆ ಸೇರಿ ಹಾಸನ ಜಿಲ್ಲೆಯ ಗಂಡಸಿ, ಆಲೂರು ಮತ್ತು ಸಕಲೇಶಪುರ ನಗರ ಸೇರಿದಂತೆ ಒಟ್ಟು 3 ದರೋಡೆ ಪ್ರಕರಣಗಳಲ್ಲಿ ಹಾಗೂ ಹಾಸನದ ಹರಳಳ್ಳಿ ಮತ್ತು ಸಕಲೇಶಪುರ ನಗರದಲ್ಲಿ ಒಟ್ಟು 2 ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿರುವುದು ತನಿಖೆಯಿಂದ ತಿಳಿದು ಬಂದಿದೆ.
ಆರೋಪಿಗಳಿಂದ 2 ಡ್ರ್ಯಾಗನ್ ಚಾಕು, ಒಂದು ಕಬ್ಬಿಣದ ಕೈಹಾರೆ, ಕೃತ್ಯಕ್ಕೆ ಉಪಯೋಗಿಸುತ್ತಿದ್ದ ಪ್ಲಾಸ್ಟರ್, ಒಂದು ಸಮುರಾಯಿ ಬೈಕ್, ಹಾಗೂ ಸುಮಾರು 42.07ಗ್ರಾಂ ತೂಕದ ಚಿನ್ನ ಮತ್ತು ಬೆಳ್ಳಿಯ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಉಳಿದ ಆರೋಪಿತರ ಪತ್ತೆಗಾಗಿ ಶೋಧ ಕಾರ್ಯ ಮುಂದುವರಿದಿದೆ.
ಏ.30 ರಂದು ಮನೆ ಹೆಂಚು ತೆಗೆದು ಪಾದರ್ಹಾಗೂ ಮನೆಯಲ್ಲಿದ್ದ ವಣದ್ದೆಯ ಮೇಲೆ ಹಲ್ಲೆ ನಡೆಸಿ ನಗದು ಹಾಗೂ ಅಭರಣ ದೋಚಿದ್ದರು ಪ್ರಕರಣ ಬೆನ್ನತ್ತಿದ ಪೋಲಿಸರು ಜಿಲ್ಲಾ ಪೊಲೀಸ್  ವರಿಷ್ಠಾಧಿಕಾರಿ ರವಿ ಡಿ ಚನ್ನಣ್ಣನವರ್ ಮಾರ್ಗದರ್ಶನದಲ್ಲಿ ಮೂರು ತಂಡಗಳಾಗಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಪತ್ತೆ ಹಚ್ಚಲು ಯಶಸ್ವಿಯಾಗಿದ್ದಾರೆ.
ಹಾಸನ ಜಿಲ್ಲಾ ಅಪರ ಪೊಲೀಸ್ ಅಧೀಕ್ಷಕಿ ಎಂ.ರಶ್ಮಿ ಹಾಗೂ ಸಕಲೇಶಪುರ ಉಪ ವಿಭಾಗದ ಡಿವೈಎಸ್ಪಿ    ಕುಮಾರಸ್ವಾಮಿ  ಮಾರ್ಗದರ್ಶನದಲ್ಲಿ ಸಕಲೇಶಪುರ ವೃತ್ತದ ಪೊಲೀಸ್ ಇನ್ಸಪೆಕ್ಟರ್ ಗುರುರಾಜ್, ಹಾಸನ ಡಿಸಿಐಬಿ. ಇನ್ಸ್‌ಪೆಕ್ಟರ್ ಶಶಿಧರ, ಆಲೂರು ಪೊಲೀಸ್ ಠಾಣಾ ಪಿಐ.ರವಿ, ಮತ್ತು ನಗರ ಪೊಲೀಸ್ ಠಾಣೆಯ ಪಿಎಸೈ. ಕೆ.ಜೀವನ್, ಗ್ರಾಮಾಂತರ ಠಾಣೆ ಪಿಎಸೈ. ಭರತ್‌ಗೌಡ, ಮತ್ತು ಚನ್ನರಾಯಪಟ್ಟಣ (ಗ್ರಾ) ಠಾಣೆ ಪಿಎಸೈ.  ಸುರೇಶ ಅವರು ಪತ್ತೆ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.