ಹಾಸನ

ಮಾರ್ಪಟ್ಟ ಕೃಷಿ ವಿಮಾ ಯೋಜನೆ

Published On :

ಕ.ಪ್ರ.ವಾರ್ತೆ ಹಾಸನ ಮೇ 28
ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿಗೆ ಮಾರ್ಪಡಿಸಿದ ರಾಷ್ಟ್ರೀಯ ಕೃಷಿ ವಿಮಾ ಯೋಜನೆಯನ್ನು ಹಾಸನ ಜಿಲ್ಲೆಯ ಎಲ್ಲಾ ಹೋಬಳಿಗಳಲ್ಲಿ ಜಾರಿಗೊಳಿಸಲು ಸರ್ಕಾರಿ ಆದೇಶ ಹೊರಬಂದಿದ್ದು, ಅದರಂತೆ ತಾಲೂಕಿನ ಒಂದು ಬೆಳೆಯನ್ನು ಗ್ರಾಮ ಪಂಚಾಯಿತಿ ಮಟ್ಟಕ್ಕೆ ತಂದಿರುವುದಾಗಿ ಜಂಟಿ ಕೃಷಿ ನಿರ್ದೇಶಕ  ಬಿ.ಶಿವರಾಜು  ತಿಳಿಸಿದ್ದಾರೆ.
ಅದರಂತೆ ನೀರಾವರಿ ಭತ್ತದ ಬೆಳೆಯನ್ನು ಆಲೂರು, ಅರಕಲಗೂಡು ತಾಲೂಕಿನ ಎಲ್ಲಾ ಗ್ರಾಮ ಪಂಚಾಯಿತಿಗಳಿಗೆ, ಮಳೆಯಾಶ್ರಿತ ರಾಗಿ ಬೆಳೆಯನ್ನು ಅರಸೀಕೆರೆ, ಚನ್ನರಾಯಪಟ್ಟಣ, ಹೊಳೆನರಸೀಪುರ ತಾಲೂಕಿನ ಎಲ್ಲಾ ಗ್ರಾಮ ಪಂಚಾಯಿತಿಗಳಿಗೆ, ಮುಸುಕಿನ ಜೋಳ ಬೆಳೆಯನ್ನು ಬೇಲೂರು ಹಾಗೂ ಹಾಸನ ತಾಲೂಕಿನ ಎಲ್ಲಾ ಗ್ರಾಮ ಪಂಚಾಯಿತಿಗಳಿಗೆ, ಹಾಗೂ ಮಳೆಯಾಶ್ರಿತ ಬತ್ತದ ಬೆಳೆಯನ್ನು ಸಕಲೇಶಪುರ ತಾಲೂಕಿನ ಎಲ್ಲ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಗೆ ತರಲಾಗಿದೆ ಎಂದು ತಿಳಿಸಿದ್ದಾರೆ.
2014ರ ಮುಂಗಾರು ಹಂಗಾಮಿಗೆ ಬೆಳೆ ಸಾಲ ಪಡೆದ ರೈತರಿಗೆ ಬೆಳೆವಿಮೆ ಕಡ್ಡಾಯವಾಗಿದ್ದು, ಬೆಳೆ ಸಾಲ ಪಡೆಯದ ರೈತರಿಗೆ ಐಚ್ಛಿಕವಾಗಿದೆ.
ಉಳಿದಂತೆ ಹೋಬಳಿ ಮಟ್ಟಕ್ಕೆ ಆಯ್ಕೆಯಾಗಿರುವ ಬೆಳೆಗಳ ವಿವರ ಈ ಕೆಳಕಂಡಂತಿದೆ. ಆಲೂರು ತಾಲೂಕಿನ ಎಲ್ಲಾ ಹೋಬಳಿಗಳಲ್ಲಿ ಮಳೆಯಾಶ್ರಿತ ರಾಗಿ, ಮು.ಜೋಳ ಬೆಳೆಗಳನ್ನು ಹಾಗೂ ಕಸಬಾ ಹೋಬಳಿಯಲ್ಲಿ ಇವುಗಳ ಜೊತೆಗೆ ಮಳೆಯಾಶ್ರಿತ ಭತ್ತದ ಬೆಳೆಯನ್ನು ಸೇರಿಸಲಾಗಿದೆ.
ಅರಕಲಗೂಡು ತಾಲೂಕಿನ ಎಲ್ಲ ಹೋಬಳಿಗಳಲ್ಲಿ ಮಳೆಯಾಶ್ರಿತ ರಾಗಿ, ಮುಸುಕಿನ ಜೋಳ ಬೆಳೆಗಳನ್ನು ಹಾಗೂ ಕೊಣನೂರು ಹೋಬಳಿಯಲ್ಲಿ ಇವುಗಳ ಜೊತೆಗೆ ನೀರಾವರಿ ಮುಸುಕಿನ ಜೋಳ ಬೆಳೆಯನ್ನು ಸೇರಿಸಲಾಗಿದೆ.
ಅರಸೀಕೆರೆ ತಾಲೂಕಿನ ಎಲ್ಲ ಹೋಬಳಿಗಳಲ್ಲಿ ಮಳೆಯಾಶ್ರಿತ ಮು.ಜೋಳ, ಜೋಳ, ಸೂ.ಕಾಂತಿ, ಹೆಸರು, ಎಳ್ಳು, ತೊಗರಿ, ಉದ್ದು, ಹರಳು, ಹುರುಳಿ ಬೆಳೆಗಳನ್ನು ಹಾಗೂ ಈ ಬೆಳೆಗಳ ಜೊತೆಗೆ ಗಂಡಸಿ, ಜಾವಗಲ್ ಹೋಬಳಿಗಳಲ್ಲಿ ನೀರಾವರಿ ಮು.ಜೋಳ ಬೆಳೆಯನ್ನು ಹಾಗೂ ಕಣಕಟ್ಟೆ ಹೋಬಳಿಯಲ್ಲಿ ಮಳೆಯಾಶ್ರಿತ ಸಾವೆ ಬೆಳೆಯನ್ನು ಸೇರಿಸಲಾಗಿದೆ.
ಬೇಲೂರು ತಾಲೂಕಿನ ಎಲ್ಲ ಹೋಬಳಿಗಳಲ್ಲಿ ಮಳೆಯಾಶ್ರಿತ ಭತ್ತ, ರಾಗಿ ಮತ್ತು ನೀರಾವರಿ ಭತ್ತದ ಬಳೆಗಳನ್ನು ಹಾಗೂ ಇವುಗಳ ಜೊತೆಗೆ ಕಸಬಾ ಹೋಬಳಿಯಿಂದ ನೀರಾವರಿ ಮು.ಜೋಳ, ಮಳೆಯಾಶ್ರಿತ ಸೂ.ಕಾಂತಿ ಬೆಳೆಗಳನ್ನು, ಬಿಕ್ಕೋಡು ಹೋಬಳಿಯಲ್ಲಿ ಮಳೆಯಾಶ್ರಿತ ಸೂ.ಕಾಂತಿ ಬೆಳೆಯನ್ನು,  ಹಳೇಬೀಡು ಹೋಬಳಿಯಲ್ಲಿ ನೀರಾವರಿ ಮು.ಜೋಳ, ಮಳೆಯಾಶ್ರಿತ ಜೋಳ, ನೀರಾವರಿ ಹಾಗೂ ಮಳೆಯಾಶ್ರಿತ ಸೂರ್ಯಕಾಂತಿ. ಹಾಗೂ ಮಳೆಯಾಶ್ರಿತ ತೊಗರಿ, ಹುರುಳಿ, ಎಳ್ಳು, ಹರಳು ಬೆಳೆಗಳನ್ನು,  ಮಾದೀಹಳ್ಳಿ ಹೋಬಳಿಯಲ್ಲಿ ನೀರಾವರಿ ಮು.ಜೋಳ, ಮಳೆಯಾಶ್ರಿತ ಸೂರ್ಯಕಾಂತಿ, ತೊಗರಿ, ಎಳ್ಳು, ಹರಳು ಬೆಳೆಗಳನ್ನು ಸೇರಿಸಲಾಗಿದೆ.
ಚನ್ನರಾಯಪಟ್ಟಣದ ಎಲ್ಲಾ ಹೋಬಳಿಗಳಲ್ಲಿ ನೀರಾವರಿ ಭತ್ತ, ಮಳೆಯಾಶ್ರಿತ ಮು.ಜೋಳ ಬೆಳೆಗಳು ಹಾಗೂ ಇವುಗಳ ಜೊತೆಗೆ ಬಾಗೂರು ಮತ್ತು ನುಗ್ಗೇಹಳ್ಳಿ ಹೋಬಳಿಯಲ್ಲಿ ನೀರಾವರಿ ರಾಗಿ, ಮಳೆಯಾಶ್ರಿತ ಎಳ್ಳು, ಕಸಬಾ ಹೋಬಳಿಯಲ್ಲಿ ನೀರಾವರಿ ರಾಗಿ, ಮಳೆಯಾಶ್ರಿತ ಹೆಸರು ಬೆಳೆಗಳು ಹಾಗೂ ದಂಡಿಗನಹಳ್ಳಿ ಹೋಬಳಿಯಲ್ಲಿ ನೀರಾವರಿ ರಾಗಿ, ಹೆಸರು ಮತ್ತು ಮಳೆಯಾಶ್ರಿತ ಎಳ್ಳು ಬೆಳೆಗಳು ಹಾಗೂ ಶ್ರವಣಬೆಳಗೊಳ ಹೋಬಳಿಯಲ್ಲಿ ನೀರಾವರಿ ರಾಗಿ ಬೆಳೆಯನ್ನು ಸೇರಿಸಲಾಗಿದೆ.
ಹಾಸನ ತಾಲೂಕಿನ ಎಲ್ಲಾ ಹೋಬಳಿಗಳಲ್ಲಿ ನೀರಾವರಿ ಭತ್ತ, ಮು.ಜೋಳ, ಹಾಗೂ ಮಳೆಯಾಶ್ರಿತ ರಾಗಿ, ಹರಳು, ಇವುಗಳ ಜೊತೆಗೆ ಕಟ್ಟಾಯ ಹೋಬಳಿ ಹೊರತುಪಡಿಸಿ ಎಲ್ಲಾ ಹೋಬಳಿಗಳಲ್ಲಿ ಮಳೆಯಾಶ್ರಿತ ಹುರುಳಿ,  ಕಟ್ಟಾಯ ಹಾಗೂ ಸಾಲಗಾಮೆ ಹೋಬಳಿಯಲ್ಲಿ ನೀರಾವರಿ ರಾಗಿ ಬೆಳೆಗಳನ್ನು ಸೇರಿಸಲಾಗಿದೆ.
ಹೊಳೆನರಸೀಪುರ ತಾಲೂಕಿನ ಎಲ್ಲಾ ಹೋಬಳಿಗಳಲ್ಲಿ ನೀರಾವರಿ ಭತ್ತ, ಮು.ಜೋಳ ಹಾಗೂ ಮಳೆಯಾಶ್ರಿತ ಮು.ಜೋಳ, ಹುರುಳಿ ಬೆಳೆಗಳು ಇವುಗಳ ಜೊತೆಗೆ ಹಳೆಕೋಟೆ ಹೋಬಳಿಯಲ್ಲಿ ಮಳೆಯಾಶ್ರಿತ ಎಳ್ಳು, ನೀರಾವರಿ  ರಾಗಿ, ಹಳ್ಳಿಮೈಸೂರು ಹೋಬಳಿಯಲ್ಲಿ ಮಳೆಯಾಶ್ರಿತ ಎಳ್ಳು. ಕಸಬಾ ಹೋಬಳಿಯಲ್ಲಿ ಮಳೆಯಾಶ್ರಿತ ಹರಳು ಬೆಳೆಗಳನ್ನು ಸೇರಿಸಲಾಗಿದೆ.
ಸಕಲೇಶಪುರ ತಾಲ್ಲೂಕಿನ ಎಲ್ಲಾ ಹೋಬಳಿಗಳಲ್ಲಿ ಬತ್ತ(ನೀರಾವರಿ) ಬೆಳೆಯನ್ನು ಯೋಜನೆಯಡಿ ಸೇರಿಸಲಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕರು ತಿಳಿಸಿದ್ದಾರೆ. ರೈತರು ಯೋಜನೆಯಡಿ ಪಾಲ್ಗೊಂಡು ತಮ್ಮ ಬೆಳೆಗಳನ್ನು ವಿಮೆ ವ್ಯಾಪ್ತಿಗೊಳಪಡಿಸಲು ಕೋರುತ್ತಾ, ಜಿಲ್ಲೆಗೆ ಒಳಪಟ್ಟಿರುವ ಬೆಳೆಗಳಿಗೆ ಒಟ್ಟು ವಿಮಾ ಕಂತಿನ ಮೊತ್ತ, ಸರ್ಕಾರದ ಸಹಾಯಧನ, ರೈತರು ಪಾವತಿಸಬೇಕಾದ ಮೊತ್ತದ ವಿವರವನ್ನು ಹತ್ತಿರದ ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರ ಅಧಿಕಾರಿಗಳನ್ನು ಅಥವಾ ಬ್ಯಾಂಕ್ ಅಧಿಕಾರಿಗಳನ್ನು ಸಂಪರ್ಕಿಸಲು ಕೋರಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.