ಬಿ.ಸಿ. ಪಾಟೀಲ್ ರೋಡ್ ಶೋ
ಹಿರೇಕೆರೂರು: ಪಟ್ಟಣದ ವಿವಿಧ ವಾರ್ಡ್ ಹಾಗೂ ಪ್ರಮುಖ ಬೀದಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬಿ.ಸಿ. ಪಾಟೀಲ ಕಾರ್ಯಕರ್ತರೊಂದಿಗೆ ರೋಡ್ ಶೋ ನಡೆಸಿ ಮತಯಾಚಿಸಿದರು.
ಈ ಸಂದರರ್ಭದಲ್ಲಿ ಮಾತನಾಡಿ, 5 ವರ್ಷಗಳಲ್ಲಿ ಬಿಜೆಪಿ ಸರ್ಕಾರದ ಆಡಳಿತದಿಂದ ರಾಜ್ಯದ ಜನತೆ ಭ್ರಮನಿರಸನಗೊಂಡು ಕಾಂಗ್ರೆಸ್ ಕಡೆಗೆ ಒಲವು ತೋರುತ್ತಿದ್ದಾರೆ. ಕಾರಣ ಎಲ್ಲ ಸಮೀಕ್ಷೆಗಳು ಕಾಂಗ್ರೆಸ್ ಬಹುಮತ ಪಡೆಯಲಿದೆ ಎಂದು ಹೇಳುತ್ತಿದ್ದು, ಕಾಂಗ್ರೆಸ್ನಿಂದ ಮಾತ್ರ ಸುಭದ್ರ ಸರ್ಕಾರ ನೀಡಲು ಸಾಧ್ಯ ಎಂದ ಅವರು, ತಾಲೂಕಿನಲ್ಲಿ ನಡೆದ ಅಭಿವೃದ್ಧಿ ಕಾರ್ಯಗಳೇ ನನ್ನ ಗೆಲವಿಗೆ ಶ್ರೀರಕ್ಷೆಯಾಗಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಿ. ಶಿವನಗೌಡ್ರ, ಎಸ್.ಕೆ. ಕರಿಯಣ್ಣನವರ, ಡಿ.ಸಿ. ಪಾಟೀಲ, ವನಜಾ ಪಾಟೀಲ, ಬಿ.ಎನ್. ಬಣಕಾರ, ಕಾಂಗ್ರೆಸ್ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಮಂಜುಳಾ ಬಾಳಿಕಾಯಿ, ಸೃಷ್ಠಿ ಪಾಟೀಲ, ತಾಪಂ ಸದಸ್ಯ ಆರ್.ಎನ್. ಗಂಗೋಳ, ಪಪಂ ಸದಸ್ಯ ಮಹ್ಮದ್ ಹುಸೇನ ವಡ್ಡಿನಕಟ್ಟಿ, ಕುಸುಮಾ ಬಣಕಾರ, ರಜೀಯಾ ಅಸದಿ, ರಮೇಶ ತೋರಣಗಟ್ಟಿ, ಪರಮೇಶಪ್ಪ ಗವಿಯಪ್ಪನವರ, ಗುರುಶಾಂತ ಯತ್ತಿನಹಳ್ಳಿ, ಅಯೂಬ್ ಪಠಾಣ, ರಾಮಣ್ಣ ಗುಡ್ಡಳ್ಳಿ ಇತರರು ಇದ್ದರು.
ಪಿ.ಡಿ. ಬಸನಗೌಡ್ರ ಪ್ರಚಾರ
ಹಿರೇಕೆರೂರ: ತಾಲೂಕಿನ ತೋಟಗಂಟಿ, ರಟ್ಟೀಹಳ್ಳಿ, ಹಿರೇಮೊರಬ, ಮಾಸೂರು ಹಾಗೂ ಹಿರೇಕೆರೂರಲ್ಲಿ ಪಕ್ಷೇತರ ಅಭ್ಯರ್ಥಿ ಪಿ.ಡಿ. ಬಸನಗೌಡ್ರ ತಮ್ಮ ಕಾರ್ಯಕರ್ತರೊಂದಿಗೆ ಪಾದಯಾತ್ರೆ ನಡೆಸಿ ಪ್ರಚಾರ ನಡೆಸಿದರು.
ಈ ವೇಳೆ ಪಿ.ಡಿ. ಬಸನಗೌಡ್ರ ಮಾತನಾಡಿ, ಜಿಪಂ ಸದಸ್ಯನಾಗಿ, ಗ್ರಾಪಂ ಉಪಾಧ್ಯಕ್ಷನಾಗಿ ಹಾಗೂ ಪಿಎಲ್ಡಿ ಬ್ಯಾಂಕ್ ಸದಸ್ಯನಾಗಿ ತಾಲೂಕಿನಲ್ಲಿ ಅನೇಕ ಅಭಿವೃದ್ದಿ ಕಾರ್ಯಗಳನ್ನು ಕೈಗೊಂಡಿದ್ದೇನೆ. ಹೆಚ್ಚಿನ ಸೇವೆ ಸಲ್ಲಿಸಲು ಬ್ಯಾಟಿನ ಗುರುತಿಗೆ ಮತ ನೀಡಿ ನನ್ನನ್ನು ಆರಿಸಿ ಎಂದರು.
ಡಾ. ವೈ.ಬಿ. ರಾಮನಗೌಡ್ರ, ರವೀಂದ್ರ ನಾಡಿಗೇರ, ಶಿವಾನಂದಪ್ಪ ಮಡಿವಾಳರ, ಮಂಜುನಾಥ ಕತ್ತಲಗೇರಿ, ಅಬ್ದುಲ್ಸಾಯಿ ಖಾಜಿ, ಹಜರತ್ಅಲಿ ಗಾಂಜಿ, ಹನುಮಂತನಾಯಕ ಲಮಾಣಿ, ಚಂದ್ರಪ್ಪ ಮಧೂಕರ್, ಗೋಹಾರಲಾಲ್ ಮುಲ್ಲಾ, ಹೇಮಣ್ಣ ಮಡಿವಾಳರ, ನಿಂಗಪ್ಪ ಸುಣಗಾರ, ಶಿವನಗೌಡ ಶ್ರೀರಾಮನಕೊಪ್ಪ, ಜಮೀರ ಸೈಕಲ್ಲಗಾರ, ನಿಂಗನಗೌಡ ಬಸನಗೌಡ್ರ, ಮಲ್ಲಿಕಾರ್ಜುನಗೌಡ ಬಸನಗೌಡ್ರ, ಭೀಮನಗೌಡ ಬಸನಗೌಡ್ರ, ಹನುಮಂತಪ್ಪ ಬಾರ್ಕಿ, ಸಿದ್ದಪ್ಪ ಸುಣಗಾರ ಮೊದಲಾದವರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

