ಪೂಜಾರ ಪರ ಬೈಕ್ ರ್ಯಾಲಿ, ಮತ ಯಾಚನೆ
ಕನ್ನಡಪ್ರಭ ವಾರ್ತೆ, ರಾಣಿಬೆನ್ನೂರು, ಮೇ 3
ರಾಣಿಬೆನ್ನೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅರುಣಕುಮಾರ ಪೂಜಾರ ಗೆಲವಿಗಾಗಿ, ಜಿಲ್ಲಾ ಬಿಜೆಪಿ ಅಧ್ಯಕ್ಷ ಸೋಮಣ್ಣ ಬೇವಿನಮರದ ನೇತೃತ್ವದಲ್ಲಿ ತಾಲೂಕಿನ ಬಿಜೆಪಿ ಕಾರ್ಯಕರ್ತರು ನಗರದ ಪ್ರಮುಖ ಬೀದಿಗಳಲ್ಲಿ ಬೈಕ್ ರ್ಯಾಲಿ ನಡೆಸಿ ಮತ ಯಾಚಿಸಿದರು.
ಬೈಕ್ ರ್ಯಾಲಿಯಲ್ಲಿ ಭಾಗವಹಿಸಿದ್ದ ಬಿಜೆಪಿ ಜಿಲ್ಲಾಧ್ಯಕ್ಷ ಸೋಮಣ್ಣ ಬೇವಿನಮರದ ಮಾತನಾಡಿ, ರಾಜ್ಯಾಭಿವೃದ್ಧಿಗಾಗಿ ಬಿಜೆಪಿ ಸರ್ಕಾರ ಮಾಡಿರುವ ಸಾಧನೆಗಳನ್ನು ನೋಡಿ ಮತದಾರರು, ಬಿಜೆಪಿ ಅಭ್ಯರ್ಥಿಗೆ ಮತನೀಡಲು ಮುಂದಾಗಿದ್ದಾರೆ. ತಾಲೂಕಿನ ರೈತರ, ಬಡವರ, ದೀನದಲಿತರ ಅಭಿವೃದ್ಧಿ ಹಾಗೂ ನೀರಾವರಿ ಸೌಲಭ್ಯದಿಂದ ವಂಚಿತಗೊಂಡಿರುವ ತಾಲೂಕಿನ ಸೌಲಭ್ಯಗಳನ್ನು ಪಡೆಯುವುದಕ್ಕಾಗಿ ಬಿಜೆಪಿಗೆ ಮತ ನೀಡುವುದನ್ನು ಮತದಾರರು ಮರೆಯಬಾರದೆಂದು ಬೇವಿನಮರದ ಹೇಳಿದರು. ಜಿಲ್ಲಾ ಉಪಾಧ್ಯಕ್ಷ ಮಂಜುನಾಥ ಓಲೇಕಾರ, ಮಹಿಳಾ ಮೋರ್ಚಾ ಅಧ್ಯಕ್ಷೆ ಭಾರತಿ ಜಂಬಗಿ, ತಾಲೂಕು ಬಿಜೆಪಿ ಅಧ್ಯಕ್ಷ ಡಾ ಬಸವರಾಜ ಕೇಲಗಾರ, ನಗರಾಧ್ಯಕ್ಷ ರಾಜಶೇಖರಯ್ಯ ಸುರಳಿಕೇರಿಮಠ, ಬಸವರಾಜ ಲಕ್ಷ್ಮೇಶ್ವರ, ಸಂಕಪ್ಪ ಮಾರನಾಳ ಮಾತನಾಡಿ, ವಿರೋಧ ಪಕ್ಷದವರ ಟೀಕೆಗಳಿಗೆ ಬೆಲೆ ನೀಡದೆ ಬಿಜೆಪಿ ಅಭ್ಯರ್ಥಿ ಅರುಣಕುಮಾರ ಪೂಜಾರ ಗೆಲುವಿಗಾಗಿ ಬಿಜೆಪಿಗೆ ಮತ ನೀಡಬೇಕೆಂದು ತಿಳಿಸಿದರು.ಅಭ್ಯರ್ಥಿ ಅರುಣಕುಮಾರ ಪೂಜಾರ, ನಗರಸಭಾ ಸದಸ್ಯರಾದ ಪ್ರಭುಸ್ವಾಮಿ ಕಜ್ಜರ್ಗಿಮಠ, ಉಮೇಶಪ್ಪ ಹೊನ್ನಾಳಿ, ಶಿವರಾಜ ಬ್ಯಾಡಗಿ, ದೊಡ್ಡಪೇಟೆಯ ಚರ್ಮನ್ ಚಂದ್ರಪ್ಪ ರೋಡ್ಡನವರ, ಮಲ್ಲಿಕಾರ್ಜುನ ಪೂಜಾರ, ಕಿರಣ ಅಂಗಡಿ, ಮೈತ್ರಾ ಹದಡಿ, ವೀರಣ್ಣ ಅಂಗಡಿ, ಲೀಲಾ ಜಂಬಗಿ, ಮಲ್ಲಣ್ಣ ಅಂಗಡಿ, ರಾಜಣ್ಣ ಜಂಬಗಿ, ಸಾವಿರಾರು ಅಭಿಮಾನಿಗಳು ಉಪಸ್ಥಿತರಿದ್ದರು.
ಬಣಕಾರ ಗೆಲವಿಗಾಗಿ ಮುಸ್ಲಿಮರಿಂದ ವಿಶೇಷ ಪ್ರಾರ್ಥನೆ
ಹಿರೇಕೆರೂರು: ಕೆಜೆಪಿ ಅಭ್ಯರ್ಥಿ ಯು.ಬಿ. ಬಣಕಾರ ಗೆಲವಿಗೆ ಪ್ರಾರ್ಥಿಸಿ ಮುಸ್ಲಿಂ ಸಮಾಜದ ಮುಖಂಡರು ಶುಕ್ರವಾರ ಪಟ್ಟಣದ ಅಲ್ದುಲ್ ವಹಾಬ್‌ಷಾ ಖಾದ್ರಿ ದರ್ಗಾದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಈ ಸಂದರ್ಭ ಪಪಂ ಸದಸ್ಯ ಮುಜೀಬ್ ಬಿಕಾರ್ಟಿ ಮಾತನಾಡಿ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅಲ್ಪಸಂಖ್ಯಾತರ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಕೆಜೆಪಿ ಅಭ್ಯರ್ಥಿ ಯು.ಬಿ. ಬಣಕಾರ ಅವರು ಸರಳ, ಸಜ್ಜನಿಕೆಯ ವ್ಯಕ್ತಿಯಾಗಿದ್ದು, ಅನೇಕ ವರ್ಷಗಳಿಂದ ಎಲ್ಲರಿಗೂ ಸ್ಪಂದಿಸುತ್ತಾ ಜನಸೇವೆಯಲ್ಲಿ ತೊಡಗಿದ್ದಾರೆ. ಅವರ ಗೆಲವಿಗೆ ಅಲ್ಪಸಂಖ್ಯಾತರು ಹೆಚ್ಚಿನ ಪ್ರಮಾಣದಲ್ಲಿ ಶ್ರಮಿಸುತ್ತಿದ್ದೇವೆ. ಈ ಬಾರಿ ಅವರು ಜಯ ಗಳಿಸಲಿದ್ದಾರೆ ಎಂದರು.
ಅಂಜುಮನ್ ಕಮಿಟಿ ಮಾಜಿ ಅಧ್ಯಕ್ಷ ಜಾಕೀರ್ ಬಿಕಾರ್ಟಿ, ನಿಸಾರ್ ಬಾಳಂಬೀಡ, ಗುಲಾಬ್ ಷಾ ಮಕಾಂದಾರ, ಮದನ್ ಷಾ ಮಕಾಂದಾರ, ರಜಾಕ್ ಸವಣೂರು, ಜಿಯಾ ಮಕಾಂದಾರ, ಬಾಷಾ ಚಿಕ್ಕೇರೂರ, ಶಫಿ ಖಾದ್ರಿ, ಸಾದಿಕ್ ಅಪರಂಜಿ, ಯೂಸೂಫ್ ಖತೀಬ್, ನಿಸಾರ್ ರಟ್ಟೀಹಳ್ಳಿ, ಅಜ್ಮತ್ ಮುಲ್ಲಾ, ದಾವೂದ್ ಐ.ಬಿ, ಖಾಸಿಂ ಅಲಿ, ಸಾದಿಕ್ ಮಕಾಂದಾರ, ಹಮೀದ್ ಎತ್ತಿನಹಳ್ಳಿ, ಅಕ್ಬರ್ ಹಲಗೇರಿ, ಜಿಯಾ ಲೋಹಾರ್, ನಸ್ರು ಹುಬ್ಬಳ್ಳಿ ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

