ಹಾವೇರಿ

ಗೋ ಸಂಪತ್ತು ಹೆಚ್ಚಿಸಿ

Published On :

ಕನ್ನಡಪ್ರಭ ವಾರ್ತೆ, ಶಿಗ್ಗಾಂವಿ, ಫೆ. 2
ಭಾರತದಲ್ಲಿ ಗೋವನ್ನು ಪೂಜ್ಯನೀಯ ಭಾವನೆಯಿಂದ ಕಾಣಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಗೋ ಸಂಪತ್ತನ್ನು ಹೆಚ್ಚಿಸುವ ಮೂಲಕ ಸಾವಯವ ಕೃಷಿಗೆ ಉತ್ತೇಜನ ನೀಡಬೇಕೆಂದು ಜೆಸಿಐ ಅಧ್ಯಕ್ಷ ಕೆ.ಬಿ. ಚನ್ನಪ್ಪ ಹೇಳಿದರು.
ತಾಲೂಕಿನ ಮುಗಳಿ ಗ್ರಾಮದಲ್ಲಿ ಭಾನುವಾರ ಜೆಸಿಐ ಹಾಗೂ ಪಶು ಸಂಗೋಪನಾ ಇಲಾಖೆ, ಹಾಲು ಉತ್ಪಾದಕರ ಸಂಘ ಮುಗಳಿ ಇವರ ಆಶ್ರಯದಲ್ಲಿ ನಡೆದ ಪಶು ಆರೋಗ್ಯ ತಪಾಸಣಾ ಶಿಬಿರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ವಿಶ್ವದಲ್ಲಿಯೇ ಉತ್ತಮ ಗುಣಮಟ್ಟದ ಹಾಲು ಉತ್ಪಾದನೆ ಮಾಡಲು ಭಾರತ ದೇಶ ಸನ್ನದ್ಧವಾಗಿದೆ. ಜಾಗತಿಕ ಪೈಪೋಟಿ ಎದುರಿಸಲು ಗೋ ಸಂಪತ್ತು ಉಳಿಯಬೇಕಾಗಿದೆ. ಕೃಷಿ ಅವಲಂಬಿತ ಪ್ರದೇಶಗಳಲ್ಲಿ ಹೈನುಗಾರಿಕೆಯನ್ನು ಒಂದು ಪ್ರಬಲ ಉದ್ಯಮವಾಗಿ ರೂಪಿಸಬೇಕು. ಅಂದಾಗ ಮಾತ್ರ ಕೃಷಿಕರು ಸ್ವಾವಲಂಬಿಗಳಾಗಲು ಸಾಧ್ಯ ಎಂದರು.
ಯುವಕರಿಗೆ ಉತ್ತೇಜನ: ಯುವಜನರಲ್ಲಿ ಗುಣಾತ್ಮಕ ಬದಲಾವಣೆ ತರುವುದೇ ಜೆಸಿಐ ಮುಖ್ಯ ಉದ್ದೇಶ. ಯುವಕರ ವ್ಯಕ್ತಿತ್ವ ರೂಪಿಸಲು ಈ ಸಂಘಟನೆ ಹಲವು ಕಾರ್ಯಕ್ರಮ ಕೈಗೊಂಡಿದೆ. ಅವರಿಗೆ ತರಬೇತಿ ನೀಡಿ ಒಗ್ಗೂಡಿಸುವ ಕೆಲಸ ಮಾಡುತ್ತಿದೆ ಎಂದರು.
ಮುಗಳಿ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಶಿವಾನಂದ ರಾಮಗೇರಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಹೈನುಗಾರಿಕೆ ಉತ್ತೇಜಿಸಲು ಸರ್ಕಾರ ಹಲವು ಯೋಜನೆ ರೂಪಿಸಿದೆ. ಜಾನುವಾರುಗಳಿಗೆ ಬರುವ ಕಾಯಿಲೆ ತಡೆಗಟ್ಟಲು ಪಶು ಸಂಗೋಪನಾ ಇಲಾಖೆ ಮುಂದಾಗಿರುವುದು ಶ್ಲಾಘನೀಯ. ರೈತರು ತಮ್ಮ ಜಾನುವಾರುಗಳ ರಕ್ಷಣೆ ಮಾಡುವ ಮೂಲಕ ಹೈನುಗಾರಿಕೆಯಲ್ಲಿ ಸ್ವಾವಲಂಬನೆ ಸಾಧಿಸಬೇಕೆಂದರು.
ಶಿಗ್ಗಾಂವಿ ಪಶು ಆಸ್ಪತ್ರೆ ಸಹಾಯಕ ನಿರ್ದೇಶಕ ಡಾ. ಎಸ್.ಎಸ್. ಪಾಟೀಲ, ಪಶು ಸಂಗೋಪನಾ ಪಾಲಿಟೆಕ್ನಿಕ್ ಪ್ರಾಂಶುಪಾಲ ಡಾ. ಶಿವಕುಮಾರ ರಡ್ಡೇರ್ ಮಾತನಾಡಿ, ಪಶು ಆರೋಗ್ಯ ತಪಾಸಣಾ ಶಿಬಿರದ ಪ್ರಯೋಜನ ಪಡೆಯುವ ಮೂಲಕ ರೈತರು ಸ್ವಾವಲಂಬಿಗಳಾಗಬೇಕು ಎಂದರು.
ಶಿಬಿರದಲ್ಲಿ ಜಾನುವಾರುಗಳಿಗೆ ಕಾಲುಬಾಯಿ ಬೇನೆ ಲಸಿಕೆ, ಬಂಜೆತನ ನಿವಾರಣೆ ಚಿಕಿತ್ಸೆ ನೀಡಲಾಯಿತು.
ಜೆಸಿಐ ನಿಕಟಪೂರ್ವ ಅಧ್ಯಕ್ಷ ಡಾ. ಜಿ.ಸಿ. ನಿಡಗುಂದಿ, ಜಿ.ಎನ್. ಯಲಿಗಾರ, ಎಸ್.ಎನ್. ಮುಗಳಿ, ಕೆ.ಎಸ್. ದಳವಾಯಿ, ಬನ್ನೂರ ಗ್ರಾಪಂ ಅಧ್ಯಕ್ಷೆ ನೀಲವ್ವ ಪಾಟೀಲ, ಸದಸ್ಯರಾದ ರುದ್ರಗೌಡ ಪಾಟೀಲ, ಅನಸವ್ವ ಪುರದಣ್ಣವರ, ರತ್ನವ್ವ ದುಂಡಪ್ಪನವರ, ಸಿ.ಡಿ. ಯತ್ನಳ್ಳಿ, ಉಳವನಗೌಡ ಪಾಟೀಲ, ಅಶೋಕ ಬೆಂಗೇರಿ ಉಪಸ್ಥಿತರಿದ್ದರು.
ಸುದರ್ಶನ ಪಾಟೀಲ, ಮಲ್ಲಿಕಾರ್ಜುನ ನೀಲಗುಂದ, ಬಿ.ಐ. ಅಂಗಡಿ ಕಾರ್ಯಕ್ರಮ ನಿರ್ವಹಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.