ಅಭಿವೃದ್ಧಿ ಕಾರ್ಯ ಸಹಿಸದ ವಿರೋಧ ಪಕ್ಷಗಳು; ಆರೋಪ
ಮಡಿಕೇರಿ: ವಿಧಾನ ಸಭಾಧ್ಯಕ್ಷರ ನೇತೃತ್ವದಲ್ಲಿ ಜಿಲ್ಲೆಯಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾರ್ಯಗಳನ್ನು ಸಹಿಸದ ವಿರೋಧ ಪಕ್ಷಗಳು ಆಡಳಿತ ಪಕ್ಷದ ವಿರುದ್ಧ ಷಡ್ಯಂತ್ರ ರೂಪಿಸುತ್ತಿದೆ ಎಂದು ವಿರಾಜಪೇಟೆ ಕ್ಷೇತ್ರದ ಬಿಜೆಪಿ ಸಮಿತಿ ಆರೋಪಿಸಿದೆ.
ವಿರಾಜಪೇಟೆ ಅಕ್ರಮ ಸಕ್ರಮದಡಿ 1991ನೇ ಸಾಲಿನಿಂದ ಇಲ್ಲಿಯವರೆಗೆ ನಡೆದಿರುವ ಭೂ ಮಂಜೂರಾತಿಗಳ ಬಗ್ಗೆ ಸಮಗ್ರ ತನಿಖೆ ನಡೆಸಿ ಅಕ್ರಮ ಆಸ್ತಿಗಳನ್ನು ಮರಳಿ ವಶಪಡಿಸಿಕೊಂಡು ಜಿಲ್ಲೆಯ ಒಳಿತಿಗಾಗಿ ಆ ಜಾಗಗಳನ್ನು ಕಾಯ್ದಿರಿಸಬೇಕೆಂದು ಬಿಜೆಪಿ ಆಗ್ರಹಿಸಿದೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ಪ್ರಮುಖ ಮೂಕೊಂಡ ಬೋಸ್ ದೇವಯ್ಯ, ಅಕ್ರಮ ಸಕ್ರಮ ಸಮಿತಿಯಿಂದ ಪ್ರಯೋಜನವನ್ನು ಹೊಂದಿಕೊಂಡ ಮಂದಿಯೇ ಇಂದು ಬೀದಿಗಿಳಿದು ಹೋರಾಟ ನಡೆಸುತ್ತಿದ್ದಾರೆಂದು ಟೀಕಿಸಿದರಲ್ಲದೆ ಕಳೆದ ಎರಡು ದಶಕಗಳಲ್ಲಿ ಅಕ್ರಮ ಸಕ್ರಮದಡಿ ನಡೆದಿರುವ ಎಲ್ಲ ಭೂ ಮಂಜೂರಾತಿಗಳು ಬೆಳಕಿಗೆ ಬರಲೆಂದು ತಿಳಿಸಿದರು. ಈ ಹಿಂದೆ ಅಧಿಕಾರದಲ್ಲಿ ಇದ್ದ ಪಕ್ಷಗಳ ಅವಧಿಯಲ್ಲೂ ಅಕ್ರಮ ಸಕ್ರಮದಡಿ ಸಾಕಷ್ಟು ಭೂ ಮಂಜೂರಾತಿಗಳಾಗಿದ್ದು, ಸಾಕಷ್ಟು ಮಂದಿ ಪ್ರಭಾವಿಗಳು ಇದರ ಫಲಾನುಭವಿಗಳಾಗಿದ್ದಾರೆ. ಸೂಕ್ತ ಸಂದರ್ಭದಲ್ಲಿ ಇವರೆಲ್ಲರ ಬಣ್ಣ ಬಯಲುಗೊಳಿಸುವುದಾಗಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ವಿರಾಜಪೇಟೆ ಕ್ಷೇತ್ರ ಬಿಜೆಪಿ ಅಧ್ಯಕ್ಷ ಪಟ್ರಪಂಡ ರಘು ನಾಣಯ್ಯ, ತಾಲೂಕು ಯುವ ಮೋರ್ಚಾ ಅಧ್ಯಕ್ಷ ಸುವಿನ್ ಗಣಪತಿ, ಜೀವನ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

