ಬಾಡಿಗೆ, ತೆರಿಗೆ ರು. 25 ಲಕ್ಷ ಬಾಕಿ: ಪ.ಪಂ. ಸಾಮಾನ್ಯ ಸಭೆಯಲ್ಲಿ ಸದಸ್ಯರ ಆಕ್ಷೇಪ
ಸೋಮವಾರಪೇಟೆ: ಇಲ್ಲಿನ ವಾಣಿಜ್ಯ ಮಳಿಗೆಗಳ ಬಾಡಿಗೆ ಹಾಗೂ ತೆರಿಗೆ ವಸೂಲಿಯು ಕೇವಲ ರು. 39.75 ಲಕ್ಷಗಳಲ್ಲಿ ಕೇವಲ 14.73 ಲಕ್ಷ ಮಾತ್ರ ವಸೂಲಿಯಾಗಿದ್ದು, ಉಳಿದಂತೆ ಸುಮಾರು ರು. 25 ಲಕ್ಷ ಬಾಕಿ ಇರುವುದರ ಬಗ್ಗೆ ಶುಕ್ರವಾರ ನಡೆದ ಪ.ಪಂ. ಸಾಮಾನ್ಯ ಸಭೆಯಲ್ಲಿ ಆಕ್ಷೇಪ ವ್ಯಕ್ತವಾಯಿತು.
ಇಲ್ಲಿನ ಪ.ಪಂ. ಸಾಮಾನ್ಯ ಸಭೆಯು ಪ.ಪಂ. ಅಧ್ಯಕ್ಷ ಎನ್.ಎಸ್. ಮೂರ್ತಿಯವರ ಅಧ್ಯಕ್ಷತೆಯಲ್ಲಿ ನಡೆದ ಸಂದರ್ಭ ತೆರಿಗೆ ವಸೂಲಿಯಲ್ಲಿ ಪ.ಪಂ. ಹಿಂದಿದೆ ಎಂದು ಅಧ್ಯಕ್ಷರು ಸಭೆಯ ಗಮನಕ್ಕೆ ತಂದಾಗ ಪಟ್ಟಣದಲ್ಲಿನ 110 ವಾಣಿಜ್ಯ ಮಳಿಗೆಗಳಿಂದ ರು. 39,75,914 ವರಮಾನವಿದ್ದು, ರು. 14,73,209 ವಸೂಲಿಯಾಗಿದ್ದು, ರು. 25,02,705 ಬಾಕಿಯಿದೆ ಎಂದು ಅಧಿಕಾರಿಗಳು ಅಂಕಿ ಅಂಶ ತಿಳಿಸಿದರು.
ಹೈಟೆಕ್ ಮಾರುಕಟ್ಟೆಯಲ್ಲಿ ತರಕಾರಿ ವ್ಯಾಪರಸ್ಥರಿಗೆ 8 ಅಡಿ, ಇತರ ವ್ಯಾಪಾರಿಗಳಿಗೆ 10 ಅಡಿ ಜಾಗವನ್ನು ನಿಗದಿಪಡಿಸುವಂತೆ ಸಭೆಯಲ್ಲಿ ತೀರ್ಮಾನಿಸಲಾಯಿತು. ನಗರದಲ್ಲಿ ಪ್ಲಾಸ್ಟಿಕ್ ನಿಷೇಧ ಜಾರಿಯಿದ್ದರೂ, ಕೆಲವು ಹೊಟೇಲ್ ಹಾಗೂ ಬೇಕರಿಗಳಲ್ಲಿ ನಿಷೇಧಿಸಿದ ಪ್ಲಾಸ್ಟಿಕ್ಗಳನ್ನು ಗ್ರಾಹಕರಿಗೆ ವಿತರಿಸುತ್ತಿದ್ದಾರೆ ಎಂದು ದೂರಿದ ಸದಸ್ಯ ಸೋಮೇಶ್, ಕೂಡಲೇ ಅಧಿಕಾರಿಗಳು ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಆನೆಕೆರೆ ದುರಸ್ತಿಗೆ ಪ.ಪಂ. ಮುಂದಾಗಬೇಕು ಎಂದು ಸದಸ್ಯ ಬಿ.ಎಂ. ಸುರೇಶ್ ತಿಳಿಸಿದರು.
ಹೈಟೆಕ್ ಮಾರುಕಟ್ಟೆ ಉದ್ಘಾಟನೆ ಸಂದರ್ಭ ಪಂಚಾಯಿತಿಯ ಒರ್ವ ಸದಸ್ಯರಾಗಿದ್ದ ವಿಜಯಲಕ್ಷ್ಮಿ ಸುರೇಶ್ ಜೆಡಿಎಸ್ ಪ್ರತಿಭಟನೆಗೆ ಬೆಂಬಲ ನೀಡಿ, ಕೈಗೆ ಕಪ್ಪುಪಟ್ಟಿ ಧರಿಸಿ, ವೇದಿಕೆಯಲ್ಲಿ ಕುಳಿತುಕೊಂಡು ಪ.ಪಂ.ಯನ್ನು ವಿರೋಧಿಸಿರುವುದು ಖಂಡನೀಯ ಎಂದು ಸದಸ್ಯರಾದ ಸೋಮೇಶ್, ಸುಂದರ ಮೂರ್ತಿ ಸೇರಿದಂತೆ ಮಹಿಳಾ ಸದಸ್ಯರು ಮಾತಿನ ಚಾಟಿ ಬೀಸಿದರು.
ಅದಕ್ಕೆ ಪ್ರತಿಕ್ರಿಯಿಸಿದ ವಿಜಯಲಕ್ಷ್ಮಿ ಸುರೇಶ್, ತಾನು ಪ್ರತಿಭಟನಾಕಾರರೊಂದಿಗೆ ಧಿಕ್ಕಾರ ಕೂಗಲು ಹೋಗಿಲ್ಲ. ಪ್ರತಿಭಟನೆಯಲ್ಲಿ ಭಾಗವಹಿಸಿಲ್ಲ ಎಂದು ಸಮಜಾಯಿಷಿಕೆ ನೀಡಲು ಮುಂದಾದರು. ಈ ವಿಷಯದ ಬಗ್ಗೆ ಅರ್ಧ ಗಂಟೆಗಳ ಕಾಲ ಕುರ್ಚಿಯಿಂದ ಎದ್ದು ನಿಂತ ಸರ್ವಸದಸ್ಯರು ವಾಗ್ವಾದದಲ್ಲಿ ತೊಡಗಿದರು. ನಂತರ ಸಭೆ ನಡೆಯಿತು.
ಸಭೆಯಲ್ಲಿ ಉಪಾಧ್ಯಕ್ಷೆ ನಳಿನಿ ಗಣೇಶ್, ಸದಸ್ಯರಾದ ಶೀಲಾ ಡಿಸೋಜ, ಜಯಂತಿ ಶಿವಕುಮಾರ್, ದಾಕ್ಷಾಯಣಿ ಶಿವಾನಂದ, ಗೀತಾರಾಜು, ಬಿ.ಎಂ. ಸುರೇಶ್, ವಿಜಯಲಕ್ಷ್ಮಿ ಸುರೇಶ್, ಫಯಾಜ್ಖಾನ್, ರವಿಚಂದ್ರ, ಸುಂದರ ಮೂರ್ತಿ, ವಸಂತ ರಮೇಶ್, ಮುಖ್ಯಾಧಿಕಾರಿ ರಂಜನ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

