ಮಾಹಿತಿ ಕೊರತೆ: ಬಸ್ ವ್ಯವಸ್ಥೆ ವ್ಯರ್ಥ
ಮಡಿಕೇರಿ: ಮಾದಾಪುರದಲ್ಲಿ ನಡೆದ ಕೊಡವ ಸಾಹಿತ್ಯ ಸಾಂಸ್ಕೃತಿಕ ಉತ್ಸವಕ್ಕೆ ಕಕ್ಕಬ್ಬೆಯಿಂದ ಕೊಡವ ಸಾಹಿತ್ಯ ಅಕಾಡೆಮಿ ಬಸ್ ವ್ಯವಸ್ಥೆ ಮಾಡಿದ್ದರೂ ಈ ಬಗ್ಗೆ ಸೂಕ್ತ ಮಾಹಿತಿ ನೀಡದ ಹಿನ್ನಲೆಯಲ್ಲಿ ಬಸ್ನಲ್ಲಿ ಕೇವಲ 4- 5 ಜನ ಪ್ರಯಾಣಿಸಿದರು. ಈ ಬಗ್ಗೆ ಪ್ರತಿಕ್ರಿಯಿಸಿದ ಮಡಿಕೇರಿ ತಾಲೂಕು ಬುಡಕಟ್ಟು ಕೃಷಿಕರ ಸಂಘದ ಅಧ್ಯಕ್ಷ ಕುಡಿಯರ ಮುತ್ತಪ್ಪ, ಬಸ್ ವ್ಯವಸ್ಥೆಯ ಬಗ್ಗೆ ಸೂಕ್ತ ಮಾಹಿತಿ ನೀಡದೇ ಸರ್ಕಾರಿ ಹಣವನ್ನು ಈ ರೀತಿ ಪೋಲು ಮಾಡಲಾಗಿದೆ. ಇಂಥ ದುಂದುವೆಚ್ಚಕ್ಕೆ ಕಡಿವಾಣ ಬೀಳಬೇಕೆಂದು ಒತ್ತಾಯಿಸಿದರು.
ಪದಾಧಿಕಾರಿಗಳ ಆಯ್ಕೆ
ಸುಂಟಿಕೊಪ್ಪ: ಸಿದ್ದಾಪುರ ವಾಹನ ಚಾಲಕ ಮತ್ತು ಮಾಲೀಕರ ಸಂಘದ ಅಧ್ಯಕ್ಷರಾಗಿ ಆರೆಕಾಡುವಿನ ತಿರುಮಲ ರಾಜನ್ ಆಯ್ಕೆಗೊಂಡಿದ್ದಾರೆ. ಉಪಾಧ್ಯಕ್ಷರಾಗಿ ಆಶ್ರಫ್ ಪಳ್ಳಕೆರೆ, ಆಶೀಪ್ 40 ಎಕ್ರೆ, ಫ್ರಾನ್ಸಿಸ್ ಮಾಲ್ದಾರೆ, ಪ್ರಧಾನ ಕಾರ್ಯದರ್ಶಿಯಾಗಿ ಟಿ.ಎಂ. ಇಸ್ಮಾಹಿಲ್ ಆರೆಕಾಡು, ಸಹಕಾರ್ಯದರ್ಶಿಯಾಗಿ ರವಿ ಕುಮಾರ್ ಆರೆಕಾಡು, ಖಜಾಂಚಿಗಳಾಗಿ ಸಲೀಂ ಆರೆಕಾಡು, ಸಿದ್ಧಿಕ್ ಆರೆಕಾಡು, ಗಪೂರ್ ನೆಲ್ಯಹುದಿಕೇರಿ, ಚಂದ್ರ ಅರೆಕಾಡು, ಅರ್ಜುನ ಅರೆಕಾಡು, ಗೌರವಧ್ಯಕ್ಷರಾಗಿ ರಾಜೀವ್ 40 ಎಕ್ರೆ, ಕೆ.ಎಂ. ಕೊಯ ನೆಲ್ಯಹುದಿಕೇರಿ, ಕಣ್ಣನ್ ಮಾಲ್ದಾರೆ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಪ್ರಕಾಶ್, ಮುತ್ತಲೀಬ್, ಶರೀಫ್, ಮಾಹಿತ್, ರಾಮಕೃಷ್ಣ, ಅನಂತು, ಕುಂಞಮೊನ್, ಮಜೇಸ್, ಮಾನುಪ ಆಯ್ಕೆಯಾದರು.
ಎಂ.ಸಿ. ನಾಣಯ್ಯಗೆ ಮಾತೃವಿಯೋಗ
ಮಡಿಕೇರಿ: ವಿಧಾನಪರಿಷತ್ ಸದಸ್ಯ ಎಂ.ಸಿ. ನಾಣಯ್ಯ ತಾಯಿ ಮೇರಿಯಂಡ ಪೊನ್ನಮ್ಮ ಚಂಗಪ್ಪ (97) ಮಡಿಕೇರಿಯ ಸ್ವಗೃಹದಲ್ಲಿ ಶನಿವಾರ ಮಧ್ಯಾಹ್ನ ನಿಧನರಾದರು. ಪೊನ್ನಮ್ಮ ಚಂಗಪ್ಪ ಕೆಲ ಕಾಲದಿಂದ ಅಸ್ವಸ್ಥರಾಗಿದ್ದರು. ಎಂ.ಸಿ. ನಾಣಯ್ಯ ಸೇರಿದಂತೆ ಅವರಿಗೆ ನಾಲ್ವರು ಪುತ್ರರು ಮತ್ತು ಓರ್ವ ಪುತ್ರಿ.
ಸಂತಾಪ: ಮೇರಿಯಂಡ ಪೊನ್ನಮ್ಮ ನಿಧನಕ್ಕೆ ವಿಧಾನಸಭಾಧ್ಯಕ್ಷ ಕೆ.ಜಿ. ಬೋಪಯ್ಯ, ಸಚಿವ ಎಂ.ಪಿ. ಅಪ್ಪಚ್ಚು ರಂಜನ್, ಹಿರಿಯ ವಕೀಲ ಎ.ಕೆ. ಸುಬ್ಬಯ್ಯ ಸಂತಾಪ ವ್ಯಕ್ತಪಡಿಸಿದ್ದಾರೆ. ನಾಣಯ್ಯ ತಾಯಿ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಮಡಿಕೇರಿಯ ಅವರ ಮನೆಗೆ ತೆರಳಿದ ಬಂಧು ಬಳಗದವರು ಸಂತಾಪ ಸೂಚಿಸಿದರು. ಪೊನ್ನಮ್ಮ ಅಂತ್ಯಕ್ರಿಯೆ ಭಾನುವಾರ ಮಧ್ಯಾಹ್ನ 11 ಗಂಟೆಗೆ ಮಡಿಕೇರಿಯ ಕೊಡವ ರುದ್ರಭೂಮಿಯಲ್ಲಿ ಜರುಗಲಿದೆ. ಗೃಹ ಸಚಿವ ಆರ್. ಅಶೋಕ, ವಿಧಾನಸಭಾಧ್ಯಕ್ಷ ಕೆ.ಜಿ.ಬೋಪಯ್ಯ ಮತ್ತು ಸಚಿವ ಅಪ್ಪಚ್ಚು ರಂಜನ್ ಮೃತರ ಅಂತಿಮ ದರ್ಶನ ಪಡೆದು ಎಂ.ಸಿ. ನಾಣಯ್ಯಗೆ ಸಾಂತ್ವನ ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

