ಪಾರಮಾರ್ಥ ಸಿದ್ದಿ ಪೀಠದಿಂದ ಸಾಂತ್ವನ ಪ್ರಕ್ರಿಯೆ ನಾಳೆಯಿಂದ
ಮಡಿಕೇರಿ: ನೊಂದ ಜೀವಿಗಳಿಗೆ ಸಾಂತ್ವನ ಪ್ರಕ್ರಿಯೆ ಮೂಲಕ ಸಂಕಷ್ಟಗಳನ್ನು ದೂರಮಾಡುವ ಕಾರ್ಯಕ್ರಮವನ್ನು ಬೆಂಗಳೂರಿನ ಪಾರಮಾರ್ಥ ಸಿದ್ದಿಪೀಠದ ವತಿಯಿಂದ ಫೆ.16ರಿಂದ 18 ರವರೆಗೆ ನಗರದ ಕಾವೇರಿ ಕಲಾಕ್ಷೇತ್ರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಪೀಠದ ಮುಖ್ಯ ಸಂಚಾಲಕ ಶಿವಕುಮಾರ್ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಶಿವಕುಮಾರ್ ಹಲವಾರು ವರ್ಷಗಳಿಂದ ನಾಡಿನ ವಿವಿಧೆಡೆ ಸಂಚರಿಸುತ್ತ, ಜೀವನದಲ್ಲಿ ಬಹಳಷ್ಟು ನೊಂದವರ, ಬೆಂದವರ ಸಂಕಷ್ಟಗಳಲ್ಲಿ ಸಿಲುಕಿದವರ ವೇದನೆಗಳಿಗೆ ಪಾರಮಾರ್ಥ ಸಿದ್ದಿಪೀಠ ದೈವಪ್ರೇರಣೆಯಾಗಿರುವ ನಿಟ್ಟಿನಲ್ಲಿ ಸಾಂತ್ವನ ಪ್ರಕ್ರಿಯೆ ಕಾರ್ಯಕ್ರಮವನ್ನು ನಡೆಸುತ್ತಿದೆ.
ಇದೇ ರೀತಿಯ ಕಾರ್ಯಕ್ರಮವನ್ನು ಇದೀಗ ನಗರದಲ್ಲಿ ಆಯೋಜಿಸಲಾಗಿದ್ದು, ರಕ್ತದೊತ್ತಡ, ಸಕ್ಕರೆ ಕಾಯಿಲೆ, ಮಾನಸಿಕ ಒತ್ತಡ, ಅಧಿಕ ದೇಹದ ತೂಕ, ಆರ್ಥಿಕ ಸಮಸ್ಯೆಗಳು, ದಾಂಪತ್ಯ ಕಲಹ, ಮದ್ಯಪಾನ, ತಂಬಾಕು ಸೇವನೆ, ಧೂಮಪಾನ ಅಲ್ಲದೇ ಇನ್ನಿತರ ಮಾರಣಾಂತಿಕ ವ್ಯಸನಿಗಳ ಸಮಸ್ಯೆ, ಭಯ, ಬುದ್ಧಿ ಭ್ರಮಣೆಯಾದವರಿಗೆ ಈ ಸಾಂತ್ವನ ಪ್ರಕ್ರಿಯೆ ಕಾರ್ಯಕ್ರಮದಲ್ಲಿ ಸೂಕ್ತ ರೀತಿಯ ಪರಿಹಾರವನ್ನು ನೀಡುವ ಪ್ರಯತ್ನ ನಡೆಸಲಾಗುವುದು ಎಂದು ಶಿವಕುಮಾರ್ ಹೇಳಿದರು.
ಫೆ,16 ರಂದು ಬೆಳಗ್ಗೆ 10 ಗಂಟೆಗೆ ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಕೊಡಗು ಘಟಕ ಮತ್ತು ಮಡಿಕೇರಿಯ ಸ್ನೇಹಾಶ್ರಯ ಸಮಿತಿ, ಓಡಿಪಿ ಸಂಸ್ಥೆ ಇವರ ಸಹಯೋಗದೊಂದಿಗೆ ಆರೋಗ್ಯ ತಪಾಸಣೆ ಮತ್ತು ನೊಂದವರ ಸಂದರ್ಶನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದ ಅವರು, ಕಾರ್ಯಕ್ರಮವನ್ನು ಅರಮೇರಿ ಕಳಂಚೇರಿ ಮಠದ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಉದ್ಘಾಟಿಸಲಿದ್ದಾರೆ ಎಂದು ಅವರು ಮಾಹಿತಿ ನೀಡಿದರು.
ಸಂಜೆ 6 ಗಂಟೆಗೆ ಮನೋರಂಜನೆಗಾಗಿ ಕಿರುತೆರೆ ಹಾಗೂ ಸಿನಿಮಾ ಕಲಾವಿದರಿಂದ ನೃತ್ಯ ಮತ್ತು ರಸಸಂಜೆ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ ಎಂದು ಶಿವಕುಮಾರ್ ಹೇಳಿದರು.
ಫೆ, 17 ಮತ್ತು 18ರಂದು ಸಾಂತ್ವನ ಪ್ರಕ್ರಿಯೆ ಧ್ಯಾನ, ಪ್ರಾಣಾಯಾಮ, ಯೋಗಾಸನ ಮತ್ತು ಔಷಧಿ ಹಂಚಿಕೆ, ಆರ್ಥಿಕ ನೆರವು ನೀಡಿಕೆ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.
ಸ್ನೇಹಾಶ್ರಯ ಸಮಿತಿಯ ಮುಖಂಡ ಕೆ.ಟಿ. ಬೇಬಿ ಮ್ಯಾಥ್ಯು, ಓಡಿಪಿ ಸಂಸ್ಥೆಯ ಜಿಲ್ಲಾ ಸಂಯೋಜಕಿ ಜಾಯ್ಸ್ ಮೆನೇಜಸ್ ಹಾಗೂ ಜಯಶ್ರಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

